ಅಂಬಾಗಿರಿ – ಶಿರಸಿ,
ಗಗನಮುಟ್ಟುವ ಗಿರಿಯ ಮೇಲಿರುವ ಹಸಿರು, ಅಲ್ಲಿರುವ ಕಾಳೀ ಮಾತೆಯ ಮನೋರಣೀಯ ಗುಡಿ, ಸುತ್ತಲಿನ ಪ್ರಶಾಂತ ಪರಿಸರ – ಎಂತವರನ್ನೂ ಆಕರ್ಷಿಸದೆ ಬಿಡದು.
ಹೌದು – ಇದೇ ಪರಿಸರ ಮುಂದಿನ ನವರಾತ್ರಿಗೆ ನಮ್ಮನ್ನು ಕೈಬೀಸಿ ಕರೆಯುತ್ತಿರುವುದು.

ನವರಾತ್ರಿಯಂದು ಇದೇ ಕಾಳಿಕಾಮಠದ ಆವರಣದಲ್ಲಿ “ಅಂಬಾಕಥೆ” ನಡೆಯಲಿದೆ.
ಶ್ರೀಗಳ ನೇತೃತ್ವದಲ್ಲಿ ರಾಮಕಥೆಯಂತೆಯೇ ಪ್ರವಚನ, ಗಾಯನ, ನರ್ತನ – ಗಳ ಸಮ್ಮಿಲನದೊಂದಿಗೆ ಮನೋಜ್ಞವಾದ ರಸದೌತಣವನ್ನು ನಾವೆಲ್ಲರೂ ಸವಿಯಲಿದ್ದೇವೆ.

ಅಂಬಾಗಿರಿಯ ಕಾಳಿಕಾಮಾತೆ, ಪರಿಸರ, ಅಂಬಾಕಥೆಯ ತಯಾರಿ – ಇವುಗಳ ಫೋಟೋ ಇಲ್ಲಿದೆ:

Facebook Comments