ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ ವೇ. ಶಿತಿಕಂಠ ಹಿರೇ ಭಟ್ಟರು ಮಹಾಪೂಜೆ, ಭೂತಬಲಿ, ರಥೋತ್ಸವ ನೆರವೇರಿಸಿದರು .

Facebook Comments