Tag ರಾಮರಶ್ಮಿ

Did frailty come begging for charity?

What kind of mother is she!? Inducing a daughter, that too an innocent one – to inveigle an innocent sage?  Using the piece of her own flesh as a pawn to kidnap a sage, who has not seen the world,… Continue Reading →

ಅಂಗರಾಜನ ಅಂಗಳದಲ್ಲಿ ಅಯೋಧ್ಯಾಧಿಪತಿ..

ದಶರಥನಿಗೆ ಅಂಗರಾಜ್ಯವೂ ಹೊಸತಲ್ಲ; ಅಂಗರಾಜನೂ ಅಪರಿಚಿತನಲ್ಲ; ಆದರೆ ಆ ದಿನ ಏನೋ ನಡುಕ; ಮತ್ತೇನೋ ತವಕ!
ರೋಮಪಾದನ ಪಾರ್ಶ್ವದಲ್ಲಿ, ಋಷ್ಯಶೃಂಗರ ರೂಪದಲ್ಲಿ ವಿರಾಜಮಾನವಾಗಿರಬಹುದಾದ ಭುವನಭಾಗ್ಯದ ದ್ವಾರವನ್ನು ಕಾಣುವ ತವಕ; ‘ಋಷ್ಯಶೃಂಗರು ಯಾಗಕ್ಕಾಗಿ ಅಯೋಧ್ಯೆಗೆ ಬರಲಿ’ ಎಂದು ಯಾಚಿಸುವಾಗ, ಅಂಗರಾಜನು ಏನೆಂದುಕೊಳ್ಳುವನೋ, ಮುನಿವರೇಣ್ಯನು ಏನೆಂದುಬಿಡುವನೋ ಎಂಬ ನಡುಕ! ಆ ಮೊದಲು ಯಾಚಿಸಿ ಗೊತ್ತಿದ್ದರಲ್ಲವೇ ದೊರೆಗಳ ದೊರೆಗೆ!? ಮುಂದೆ ಓದಿ >>

ಅಂಗರಾಜ್ಯಕ್ಕೆ ಮಳೆ ತಂದವನು ಅಯೋಧ್ಯೆಗೆ ಮಕ್ಕಳನ್ನೂ ತಂದಾನು!

ದಶರಥನಿಗೆ ಒಂದಂತೂ ಬಲು ಚೆನ್ನಾಗಿ ಅರ್ಥವಾಯಿತು. ಅಶ್ವಮೇಧದ ಸಂಕಲ್ಪವನ್ನು ತಾನು ಮಾಡಿದರೂ ಅದು ನಿಜವಾಗಿ ತನ್ನದಲ್ಲ! ಕಾಲಾಂತರಗಳಲ್ಲಿ, ಲೋಕಾಂತರಗಳಲ್ಲಿ ತನ್ನ ಸಂತತಿಯ ವಿಷಯವು ಈಗಾಗಲೇ ಚಿಂತಿತವಾಗಿದೆ, ಮತ್ತು ನಿಶ್ಚಿತವಾಗಿದೆ! ತಾನಲ್ಲಿ ನಿಮಿತ್ತಮಾತ್ರ! ಮುಂದೆ ಓದಿ >>

ಪ್ರಚಂಡ ಕೋಪಾಗ್ನಿಯೂ, ಸಮರ್ಪಣೆಯ ಸುಧಾವರ್ಷವೂ…

ಭೂಮಂಡಲವನ್ನೇ ನಡುಗಿಸುವ ಹೆಜ್ಜೆಗಳನ್ನಿಟ್ಟು ಚಂಪಾನಗರಿಯೆಡೆಗೆ ನಡೆದರು ವಿಭಾಂಡಕರು. ಅಂಗರಾಜ್ಯಕ್ಕೆ ಅಂಗಾರವಾಗುವೆನೆಂದು ಹೊರಟಿದ್ದ ವಿಭಾಂಡಕರನ್ನು ತಡೆದು ನಿಲ್ಲಿಸುವ ಶಕ್ತಿ ಬ್ರಹ್ಮಾಂಡದಲ್ಲಿ ಯಾರಿಗೂ ಇರಲಿಲ್ಲ! ದಕ್ಷಾಧ್ವರಧ್ವಂಸಕ್ಕಾಗಿ ಮೇಲೆದ್ದ ರುದ್ರಮೂರ್ತಿಯಂತೆ ಆ ಕ್ಷಣದಲ್ಲಿ ತೋರಿ ಬಂದರು ವಿಭಾಂಡಕರು! ಮುಂದೆ ಓದಿ >>

ಚರಣ ಚಮತ್ಕಾರ; ಮಳೆಯ ಮಹಾಪೂರ…

ದೇಶಕ್ಷೇಮವು ಆಕೆಯ ಉದ್ದೇಶವಾಗಿತ್ತು. ಬಹುಕಾಲದ ಬರದ ಬಾಧೆಯ ನಿರಸನವಾಗಿ, ಅಂಗವು ಮಂಗಲಮಯವಾಗಿ ಮತ್ತೊಮ್ಮೆ ಕಂಗೊಳಿಸಬೇಕಿತ್ತು. ಅದಕ್ಕಾಗಿ ಋಷ್ಯಶೃಂಗನ ಅಂಗಸಂಗವು ಅಂಗರಾಜ್ಯಕ್ಕೆ ಆಗಬೇಕಿತ್ತು. ಮುಂದೆ ಓದಿ >>

ಮಗುವಿಗೆ ಗುಮ್ಮನ ತೋರುವ ಅಮ್ಮನಾದನೀ ಮುನಿವರ!

ವಿಭಾಂಡಕರು ಪರ್ಣಕುಟಿಯ ಉದರದಲ್ಲಿಯೇ ಕುಳಿತಿದ್ದರೆ ಅವರ ಹಾಗೂ ಅವರ ಮಗನ ಉದರದ ಪಾಡೇನು? ಕಂದ-ಮೂಲ-ಫಲಗಳ ಸಂಗ್ರಹಕ್ಕಾಗಿ ಅವರು ಕೊನೆಗೊಮ್ಮೆ ಕಂದನನ್ನು ಬಿಟ್ಟು ಹೊರಬರಲೇಬೇಕಾಯಿತು. ಅಷ್ಟೇ ಬೇಕಾಗಿತ್ತು ವಾರಾಂಗನೆಗೆ! ಮುಂದೆ ಓದಿ >>

ಮುಕ್ತನ ಮುಗ್ಧತೆಯು ಮಾತಾಡಿತು!

“ಅಪ್ಪಾ, ಕತ್ತಲರಾತ್ರಿಯಲ್ಲಿ ಕಣ್ಣು ಕೋರೈಸುವಂತೆ ಕೋಲ್ಮಿಂಚೊಂದು ಮಿಂಚಿದ ಬಳಿಕ ಮತ್ತೇನೂ ಕಾಣದಂತೆ ನನ್ನ ಸ್ಥಿತಿಯಾಗಿದೆ. ಎಂದೆಂದೂ ಕಾಣದ ಕೌತುಕವೊಂದನ್ನು ಕಂಡು, ಅದರ ಗುಂಗಿನಿಂದ ಹೊರಬರಲಾರದೆ ತೊಳಲಾಡುತ್ತಿದ್ದೇನೆ. ನೀನಿಲ್ಲದ ಸಮಯದಲ್ಲಿ ಇಂದು ನಮ್ಮ ಆಶ್ರಮಕ್ಕೆ ಬ್ರಹ್ಮಚಾರಿಯೋರ್ವನು ಬಂದಿದ್ದನಪ್ಪಾ. ಮುಂದೆ ಓದಿ >>

ಮಗನೆಂಬ ನಗವು ನಗದಿರೆ ಮನೆಯು ಮನೆಯಾಗುಳಿಯಲುಂಟೇ?

‘ಮಗುವೂ ಅಹುದು – ಮುನಿಯೂ ಅಹುದು’ ‘ಮುಕ್ತನೂ ಅಹುದು – ಮುಗ್ಧನೂ ಅಹುದು’ ಎಂಬಂತಿರುವ, ಮುಗಿಲೆತ್ತರ ಬೆಳೆದು ನಿಂತರೂ ಇನ್ನೂ ಮಗುವಾಗಿಯೇ ಉಳಿದಿರುವ ಕಂದ ಋಷ್ಯಶೃಂಗನನ್ನು ನೆನೆನೆನೆದು, ಪರ್ಣಕುಟಿಯನ್ನು ಪ್ರವೇಶಿಸಿದನು ಮಹಾಮುನಿ ವಿಭಾಂಡಕ.

ವರ-ಬರಗಳ ವಾರ್ತಾಲಾಪ!

ಸೂರ್ಯನು ಬಳಿ ಸಾರುವಾಗ ಬೆಳಗುವ ಭುವನವು ಆತನು ಮರೆಯಾಗುತ್ತಿದ್ದಂತೆಯೇ ಕತ್ತಲಾಗುವಂತೆ, ವಾರಬಾಲಿಕೆಯು ಬಳಿಯಿದ್ದಾಗ ಎಂದೂ ಕಾಣದ ಸಂತೋಷದಲ್ಲಿ ಮುಳುಗಿದ್ದ ಮುನಿಬಾಲನ ಮನೋಲೋಕದಲ್ಲಿ, ಆಕೆಯು ದೂರ ಸರಿಯುತ್ತಿದ್ದಂತೆಯೇ ಬಲು ಬೇಸರವೆಂಬ ಕತ್ತಲಾವರಿಸಿತು! ಮುಂದೆ ಓದಿ >>

ಬೆಳಕಿನಲ್ಲಿ ಭಿಕ್ಷೆಗಾಗಿ ಬಂದಿತೇ ಬಳುಕು?

ಬೆಳಕಿನ ಅಂಗಳಕ್ಕೆ ಥಳುಕು ಬಳುಕಿ ಬಂದಿತು; ಭೋಗವು ಯೋಗದ ಕದ ತಟ್ಟಿತು; ಮೈವೆತ್ತ ಮುಗ್ಧತೆಯ ಮುಂದೆ ಮೋಸವಲ್ಲದ ಮಾಯೆಯು ಮೈದೋರಿತು.
ಇದು ಕತ್ತಲೆಯು ಬೆಳಕನ್ನು ಭೇಟಿಯಾಗಲು ಬಂದ ಪ್ರಸಂಗವಲ್ಲ; ಬೆಳಕಿನ ಬಳ್ಳಿಯೊಂದು ಬೆಳಕಿನ ವೃಕ್ಷವನ್ನು ಅರಸಿ, ಆಶ್ರಯಿಸಿದ ಪ್ರಸಂಗ.

ಮುಂದೆ >>

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑