ಶ್ರೀ ರಾಮಾಶ್ರಮ, ಬೆಂಗಳೂರು 10/09/2 015

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ೧೭೦೦ ಅಡಿ ಎತ್ತರದಿಂದ ೨೫೦ ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಮಾನದಿಂದ ಪ್ಯಾರ ಜಂಪಿಂಗ್ ಮಾಡಿ, ಈ ಸಾಧನೆಯ ಅವಕಾಶ ಪಡೆದ ಕರ್ನಾಟಕದ ಮೊಟ್ಟ ಮೊದಲ ಹುಡುಗಿಯಾದ ಮೇಘನಾ ಹೆಬ್ಬಾರ್ ಹಾಗೂ ಓದಿನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿ ಪುನೀತ ವಿ ಭಟ್ಟ್
~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಛಾತ್ರಚಾತುರ್ಮಾಸ್ಯದಲ್ಲಿ’ಶ್ರೀಗಳಿಂದ ಅನುಗೃಹೀತವಾದ ಪ್ರವಚನಗಳ ಸಂಗ್ರಹ ‘ಛಾತ್ರಚಾತುರ್ಮಾಸ್ಯ ಪ್ರವಚನಾಮೃತ – ೧’ ಸಿಡಿ

~
ಸರ್ವಸೇವೆ : ಹೊನ್ನಾವರ ಮಂಡಲಾಂತರ್ಗತ ಮರವಂತೆ, ಭಟ್ಕಳ, ಭವತಾರಿಣೀ, ಹೊನ್ನಾವರ ವಲಯಗಳಿಂದ ಸರ್ವಸೇವೆ ನಡೆಯಿತು.
~
ಧರ್ಮಸಭೆ :ಮತ್ತದೇ ಪ್ರಶ್ನೆ – ನಾನೇಕೆ ಹೀಗೆ???

ಮುಕ್ತಿ ಅಂದರೆ “ನ ಮಮ”

ಭಾವಬಂಧನ(ಸಂಸಾರ) ಅಂದ್ರೆ “ಮಮ” , ನನ್ನದು ಎಂಬುದು..

ದಾನ ಅಂದರೆ ನನ್ನದು ಎನ್ನುವ ಭಾವ ಹೋಗಬೇಕು. ನನ್ನದಲ್ಲ ಎಂದು ಬರಬೇಕು.

ಮಮ ಎನ್ನುವುದು ಉಳಿಯುವುದಲ್ಲ.. ಒಂದಲ್ಲ ಒಂದು ದಿನ ಅಳಿದು ಹೋಗುವುದೇ. ಆ ದಿನ ಬಂದಾಗ ನಮ್ಮ ಬೆಲೆ ಚಪ್ಪಲಿಗಿಂತಲೂ ಕಡೆ.

ಸಂಸಾರ ಚಕ್ರದಲ್ಲಿ ಇರುವ ದುಃಖಕ್ಕೆ ಕಾರಣ ಈ “ಮಮ” ಎನ್ನುವುದು. ಎಲ್ಲ ಕಲಹಗಳ ಹಿಂದೆ “ನನ್ನದು” ಎಂಬುದು ಇದೆ.

ನೆಮ್ಮದಿಯ ಸೂತ್ರ “ನ ಮಮ” ಎನ್ನುವುದು,, ಇದು ನನ್ನದಲ್ಲ ಎನ್ನುವ ಭಾವ ಬಂದರೆ ನಾವು ಸಂತರಾಗುತ್ತೇವೆ.
ನೀರೊಳಗಿರುವ ಕಮಲದ ಎಲೆಯ ಮೇಲೆ ನೀರು ನಿಲ್ಲುವುದಿಲ್ಲ. ಸಂಸಾರ ನಮ್ಮದಾದರೂ ಅದು ಭಗವಂತನದ್ದು ಎಂದು ನಾವಿರಬೇಕು.

ಮಮತ್ವ ಎನ್ನುವುದು ಮಾದಕ ವಸ್ತು ಇದ್ದ ಹಾಗೆ, ಸಿಕ್ಕಷ್ಟು ಬೇಕು, ಇನ್ನಷ್ಟು ಬೇಕು. ನಂತರ ಅದು ಭೂತದ ಹಾಗೆ ನಮ್ಮನ್ನು ಕಾಡುತ್ತದೆ.

ನನ್ನದು ಎಂಬ ಭಾವ ಇಲ್ಲದಿದ್ದರೆ, ಜೀವನದಲ್ಲಿ ಏನಾದರೂ ಕಳೆದುಕೊಂಡರೆ ದುಃಖವಾಗುವುದಿಲ್ಲ..

“ನ ಮಮ” ಎನ್ನುವುದು ನಮ್ಮಮ್ಮ ಅದು.. ಇದು ನಮ್ಮ ಬದುಕಿನ ತಾಯಿ.. ಅಷ್ಟು ಶ್ರೇಷ್ಠವಾದ ಭಾವ ಅದು.

ಕೊಟ್ಟು ದೊಡ್ಡವನಾಗು, ಆದರ್ಶ ಇರುವುದು ಕೊಡುವುದರಲ್ಲಿ.. ರಾಮ ಭರತನಿಗೆ ಕೊಟ್ಟ ಹಾಗೆ..

ಹದಿಮೂರು ಅಕ್ಷರದ ರಾಮ ನಾಮ -> ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಹಿಂದಿಯಲ್ಲಿ ‘ತೇರಾ’ ಅದು ಕನ್ನಡದಲ್ಲಿ ‘ನಿನ್ನದು’
ಆ ಪ್ರಭು ಶ್ರೀ ರಾಮನ ಆದರ್ಶವನ್ನು ಎಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ

SRI_1387

SRI_1394

SRI_1385

Audio:

Download: Link

Facebook Comments