ಗುರುಬಂಧುಗಳೇ,
ರಾಷ್ಟ್ರಕವಿ ಕುವೆಂಪುರವರ ಪ್ರಸಿದ್ಧ ನಾಟಕಗಳಲ್ಲಿ “ನನ್ನ ಗೋಪಾಲ” ಮೇರುಕೃತಿ.
ಈ ನಾಟಕವನ್ನು ರಂಗಕರ್ಮಿ, ರಾಮಕಥಾ ಕವಿಗಳಾದ ಶ್ರೀ ಗಜಾನನ ಶರ್ಮರು ನಿರ್ದೇಶಿಸುತ್ತಿದ್ದಾರೆ.
ನಮ್ಮವೇ ಪುಟ್ಟ ಪುಟ್ಟ ಮಕ್ಕಳು ನಟಿಸುತ್ತಿದ್ದಾರೆ.
ಬನ್ನಿ, ನಾಟಕ ನೋಡೋಣ. ಆನಂದಿಸೋಣ. ಪ್ರೋತ್ಸಾಹಿಸೋಣ.

ಕಾಲ: 12-ಸೆಪ್ಟಂಬರ್ – 2015, ಶನಿವಾರ ರಾತ್ರಿ 8:00ಕ್ಕೆ
ಸ್ಥಳ: ಶ್ರೀ ರಾಮಾಶ್ರಮ, ಗಿರಿನಗರ

ಸವಿನಯ ಆಮಂತ್ರಣ

 ನನ್ನ ಪ್ರವೃತ್ತಿಗಳಲ್ಲಿ ನಾನು ಅತ್ಯಂತ ಇಷ್ಟಪಡುವ ಕ್ಷೇತ್ರ ಮಕ್ಕಳ ರಂಗಭೂಮಿ.ಆದರೆ ವೃತ್ತಿಕ್ಷೇತ್ರದ ಒತ್ತಡದಿಂದಾಗಿ ಮಕ್ಕಳ ನಾಟಕವಾಡಿಸದೆ ಸುಮಾರು ಹತ್ತು ವರ್ಷಗಳೇ ಕಳೆದುಹೋದವು.
ಪ್ರತಿವರ್ಷ , ವರ್ಷಕ್ಕೆ ಕನಿಷ್ಠ ಒಂದಾದರೂ ಮಕ್ಕಳ ನಾಟಕ ಬರೆದು ಆಡಿಸುತ್ತಿದ್ದಶಿವಮೊಗ್ಗೆಯ ಆ ದಿನಗಳ ನೆನಪು ಇಂದಿಗೂ ಮನದಲ್ಲಿ ಆನಂದದ ಚಿಲುಮೆಯನ್ನು ಉಕ್ಕಿಸುತ್ತದೆ.
ಮಕ್ಕಳೊಂದಿಗಿನ ಒಡನಾಟ ನಮ್ಮೆದುರು ಇನ್ನೊಂದು ಆನಂದದ ಜಗತ್ತನ್ನೇ ತೆರೆದಿಡುತ್ತದೆ.ಆ ಆನಂದವನ್ನು ಬಲ್ಲವರೇ ಬಲ್ಲರು.
” ನನ್ನ ಗೋಪಾಲ ” ನಾಟಕದ ಆರಂಭ ಮಂಗಳದಲ್ಲಿ ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ,

ದೊಡ್ಡವರೆಲ್ಲರ ಹೃದಯದಿ ಕಟ್ಟಿದ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿಹುದು
ವಿಸ್ಮೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ,ಕುಣಿಯಲಿ,ಹಾರಲಿ,ಏರಲಿ
ದಿವಿಜತ್ವಕೆ ಈ ಮನುಜಪಶು.

ಹೌದು. ಮಕ್ಕಳ ಸಂಗದಲ್ಲಿ ನಮ್ಮೊಳಗೊಂದು ದಿವ್ಯತೆ ಅರಳುತ್ತದೆ.ನಮ್ಮನ್ನು ನಿತ್ಯ ಜೀವನದ ನಿರಂತರ ಒತ್ತಡದಿಂದಾಚೆ ಒಯ್ಯುತ್ತದೆ ಆ ಅಮೃತ ಸಂಗಮ.
ನಮ್ಮೆಲ್ಲರೆದೆಯಲ್ಲಿ ನಿದ್ರಿಸುತ್ತಿರುವ ನಿತ್ಯ ಕಿಶೋರತೆಯನ್ನು ಎಚ್ಚರಗೊಳಿಸುವ , ಆಮೂಲಕ ನಮ್ಮನ್ನು ಆನಂದಪರವಶತೆಗೆ ಎಳೆಯುವ ಆ ಕಿಶೋರ ಪ್ರಪಂಚದಲ್ಲಿ ಕೆಲವು ಸಮಯ ಕಳೆಯುವ ಅಭಿಲಾಷೆ ನಿಮಗಿದ್ದರೆ,
ಇದೇ ಶನಿವಾರ ಸಂಜೆ ನಮ್ಮೊಂದಿಗೆ ಬನ್ನಿ.
ಗಿರಿನಗರದ ರಾಮಾಶ್ರಮದ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ಮಕ್ಕಳ ನಾಟಕ ನೋಡೋಣ.
ಪುಟ್ಟ ಪುಟ್ಟ ಮಕ್ಕಳು ರಂಗವೇರುವ ಸಂಭ್ರಮವನ್ನು ಅನುಭವಿಸೋಣ.
ಕುವೆಂಪುರವರ ಹಲವು ಭಾವಗೀತೆಗಳೊಂದಿಗೆ ಹೊಸೆಯಲ್ಪಟ್ಟ ಹೊಸ ಪ್ರಯೋಗವೊಂದನ್ನು ಕಾಣಬನ್ನಿ..

– ಗಜಾನನ ಶರ್ಮಾ

ಆಮಂತ್ರಣ ಪತ್ರಿಕೆ:

Nanna Gopala : Play at Ramashrama, 12-09-2015

Nanna Gopala : Play at Ramashrama, 12-09-2015, 8PM

Watch LIVE at : http://hareraama.in/LIVE

Facebook Comments