ಶ್ರೀ ರಾಮಾಶ್ರಮ, ಬೆಂಗಳೂರು 2/09/2 015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ಶಿಕ್ಷಣ ವಿಭಾಗದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿ ಪ್ರಸನ್ನ ಹೆಗಡೆ ಇವರಿಗೆ

~
ಲೋಕಾರ್ಪಣೆ: : ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ರಾಮಕಥಾ ಸಿಡಿ

~
ಸರ್ವಸೇವೆ : ಹೊನ್ನಾವರ ಮಂಡಲದ ಮುಗ್ವಾ, ಗೇರುಸೊಪ್ಪ, ಅಪ್ಸರಕೊಂಡ ವಲಯಗಳಿಂದ ಸರ್ವ ಸೇವೆ ನಡೆಯಿತು.
~
ಧರ್ಮಸಭೆ :
ಮತ್ತದೇ ಪ್ರಶ್ನೆ : ನಾನೇಕೆ ಹೀಗೆ

ನಾನೇಕೆ ಹೀಗೆ? ನಾನೇಕೆ ಒಬ್ಬಂಟಿ? ಎಂಬ ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳುತ್ತಿರುತ್ತಾರೆ. ನೀನು ಎಲ್ಲರೊಂದಿಗೆ ಹೇಗಿದ್ದಿಯೋ, ಹಾಗಾಗಿ ನೀನು ಹೀಗೆ. ಎಲ್ಲರು ನಮ್ಮ ಜೊತೆ ಯಾಕೆ ಇರಬೇಕು ಎನ್ನುವುದಕ್ಕೆ ಉತ್ತರ ನಾವೆ ಕೊಡಬೇಕು. ಒಂದು ಸಕಾರಣ ಇರಬೇಕು. ಕೇವಲ ಲಾಭಕ್ಕಾಗಿ ಜೊತೆಗೆ ಇರುವವರು ಕೆಲವರು, ಭಾವದಿಂದ ಜೊತೆಗೆ ಇರುವವರು ಕೆಲವೇ ಕೆಲವರು.

ಎಲ್ಲ ಸ್ವಾರ್ಥಿಯೂ ಕಡೆಯಲ್ಲಿ ಒಂಟಿಯೇ.. ಕ್ಲಿಷ್ಟ ಸಂದಿಗ್ಧ ಪರಿಸ್ಥಿತಿಯಲ್ಲಿ ,ಲಾಭಕ್ಕಾಗಿ ಜೊತೆಗೆ ಇರುವವರು ಬಿಟ್ಟು ಹೋಗುತ್ತಾರೆ. ಒಂಟಿಯಾಗಬಾರದು ಅಂದರೆ ನಮ್ಮ ಆತ್ಮ ವಿಸ್ತರಣೆ ಆಗಬೇಕು. ಎಲ್ಲರನ್ನು ನಿಮ್ಮ ಆತ್ಮದಲ್ಲಿ ಇರಿಸಿಕೊಳ್ಳಿ.. ಅವರ ಕಷ್ಟ-ನಿಮ್ಮ ಕಷ್ಟ, ಅವರ ಸುಖ-ನಮ್ಮ ಸುಖ ಎಂಬ ಭಾವನೆ ಬೆಳೆಸಿಕೊಳ್ಳಿ. ಆಗ ಎಂದಿಗೂ ಒಂಟಿಯಾಗುವುದಿಲ್ಲ ಎಂದು ನುಡಿದರು.
ಭಗವಂತನನ್ನು ಪ್ರೀತಿಸಿ, ಸಮಾಜವನ್ನು ಪ್ರೀತಿಸಿ, ದೇವರು ಕೊಟ್ಟಿದನ್ನು ಹಂಚಿ, ಹಂಚಿದಷ್ಟು ಲಾಭ.. ಕಷ್ಟ ಹಂಚಿದರೆ ಕಷ್ಟ ಅರ್ಧ ಆಗುತ್ತದೆ, ಸುಖ ಹಂಚಿದರೆ ಸುಖ ಇಮ್ಮಡಿ ಆಗುತ್ತದೆ. ಧನದ ಬದಲಿಗೆ ಜನರನ್ನು ಪ್ರೀತಿಸಿದರೇ, ಸಮಾಜ ನಮ್ಮನ್ನು ಯಾವತ್ತಿಗೂ ಕೈ ಬಿಡುವುದಿಲ್ಲ. ನಿಮ್ಮ ಜೊತೆಗಿರುವವರು ನಿಜವಾಗಿಯೂ ನಿಮ್ಮ ಜೊತೆ ಇರಬೇಕು,, ಅನಿವಾರ್ಯವಾಗಿ ಅಲ್ಲ.. ಭಾವದಿಂದ ಜೊತೆ ಇರಬೇಕು, ಹಾಗಾಗಲಿಕ್ಕೆ ನೀವು ಅವರ ಜೊತೆ ಹಾಗೆಯೇ ಇರಬೇಕು ಎಂದರು.

ಒಂಟಿ ಬದುಕನ್ನು ಬದುಕದೇ ಜಂಟಿ ಬದುಕನ್ನು ಬದುಕೋಣ..
ಸಂಘಟನೆಯ ಸಮಷ್ಟಿಯ ಬದುಕನ್ನು ಬದುಕೋಣ.
ಸಂಘಟನೆಯು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತದೆ.

SRI_1362

SRI_1364

Facebook Comments