ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರ ಭಾರತೀಶ್ರೀಗಳ ಛಾತ್ರಛಾತುರ್ಮಾಸ್ಯದ ಭಾನುವಾರದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ, ಗೋಕಥೆ-೪’ ಪುಸ್ತಕ ಲೋಕಾರ್ಪಣೆಗೊಂಡಿತು.
ಭರತ ನೃತ್ಯದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದ ವಿದ್ಯಾರ್ಥಿನಿ ಶ್ವೇತಾ ಕೆ.ಎಸ್ ಹಾಗೂ ಸಂಗೀತದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದ ವಿದ್ಯಾರ್ಥಿನಿ ಶ್ರುತಿ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ವೇದ-ಶಾಸ್ತ್ರ ವಿದ್ಯಾರ್ಥಿಗಳ ಸಮ್ಮೇಳನ ನಡೆಯಿತು. ಶ್ರೀಗಳು ವೇದ-ಶಾಸ್ತ್ರ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವೇಳೆ ಛಾತ್ರಚಾತುರ್ಮಾಸ್ಯದ ವಿವಿಧ ಸಮಿತಿಯ ಅಧ್ಯಕ್ಷರಾದ ದಿವಾನ ಕೇಶವ ಕುಮಾರ್, ಯು.ಎಸ್.ಜಿ ಭಟ್, ಆದಿತ್ಯ ಭಟ್, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಮಹಾಮಂಡಲದ ಅಧ್ಯಕ್ಷ ವೈವಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪ್ರಮೋದ ಪಂಡಿತ್, ವಿದ್ಯಾ ಪ್ರಧಾನ ಉಂಡೆಮನೆ ವಿಶ್ವೇಶ್ವರ ಭಟ್, ಲೇಖಕ ಸೀತಾರಾಮ ಭಟ್, ಉಪಸ್ಥಿತರಿದ್ದರು. ಪೃಥ್ವೀ ಹಾಗೂ ಅರ್ಪಿತಾ ಹೆದ್ಲಿ ನಿರೂಪಿಸಿದರು.

SRI_1338

SRI_1342

SRI_1349

SRI_1353

SRI_1356

SRI_1358

Facebook Comments