ಶ್ರೀರಾಮಾಶ್ರಮ,ಬೆಂಗಳೂರು:

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಈ ಬಾರಿಯ ಚಾತುರ್ಮಾಸ್ಯವು ಬೆಂಗಳೂರಿನ ಗಿರಿನಗರದ ಶ್ರೀ ರಾಮಶ್ರಮದಲ್ಲಿ, ಚಿಣ್ಣರ ಜೀವನದ ಉಜ್ಜೀವನದ ಉದ್ದೇಶದೋಮಂದಿಗೆ ‘ ಕೇಶವನತ್ತ ಕಿಶೋರಚಿತ್ತ’ ಎಂಬ ಆಶಯದೋಂದಿಗೆ  ಸಂಪನ್ನವಾಗಲಿದೆ. ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಚಿಣ್ಣರ ಚಾತುರ್ಮಾಸ್ಯ ಚಿನ್ನದ ಚಾತುರ್ಮಾಸ್ಯವಾಗಬೇಕು,ಶ್ರೀಮಠದಲ್ಲಿ ಚಿಣ್ಣರಿಗೆ ವಿಶೇಷವಾದ ಸ್ಥಾನವಿದೆ. ಸಣ್ಣವರು ವಯಸ್ಸಿನಲ್ಲಿ ಕೃತಿಯಲ್ಲಿ ಅಲ್ಲ. ಸ್ಕಂದ, ಶ್ರೀ ಶಂಕರರು ಸಣ್ಣವಸಿನಲ್ಲೆ ದೊಡ್ಡ ಸಾಧನೆ ಮಾಡಿದ್ದಾರೆ ಆ ರೀತಿ ನೀವು ಆಗಬೇಕು. ಸಮಾಜಕ್ಕೆ ಮುಂದೇನು ಎಂಬ ಸವಾಲಿಗೆ ಉತ್ತರಿಸಲು ನಿಮಗೆ ಈ ಅವಕಾಶ ನೀಡಲಾಗಿದೆ. ನಮಗೆ ದೊರಕುವ ಅವಕಾಶದಲ್ಲಿ ಬರುವ ಸವಾಲುಗಳಿಗೆ ಉತ್ತರಿಸಿದರೆ ನಮ್ಮ ಮಟ್ಟ ಮೆಲೇರುತ್ತದೆ. ಒಂದು ಕೆಲಸ ಒಪ್ಪಿದಮೆಲೆ ಕೊನೆತನಕ ಅದಕ್ಕಾಗಿ ದುಡಿಯಬೇಕು, ಎಳೆಯ ಭುಜದ ಮೇಲೆ ಹಳೆಯತಲೆ ಇರುವಂತಾಗಲಿ, ಹಿರಿಯರ ಮಾರ್ಗದರ್ಶನದೋಂದಿಗೆ ಮುನ್ನೆಡೆಯಿರಿ ಎಂದು ಆಶಿಸಿದರು.

ಛಾತ್ರ ಚಾತುರ್ಮಾಸ್ಯದ ಛಾತ್ರ ಸಮಿತಿಯ ಉದ್ಘೋಷದ ನಂತರ ಮಾತನಾಡಿದ ಬೆಂಗಳೂರು ಮಂಡಲದ ಅಧ್ಯಕ್ಷರಾದ ಡಿ. ಕೇಶವಕುಮಾರ್ ಅವರು , ಈ ಬಾರಿ ಶ್ರೀಗಳು ಮಕ್ಕಳ ಬೌದ್ಧಿಕ ವಿಕಾಸಕ್ಕಾಗಿ ವಿಶೇಷವಾಗಿ ಛಾತ್ರ ಚಾತುರ್ಮಾಸ್ಯವನ್ನು ಸಂಕಲ್ಪಿಸಿದ್ದಾರೆ, ಇದು ನಿಮ್ಮೆಲ್ಲರಿಗೆ ಸಿಕ್ಕಿರುವ ಭಾಗ್ಯ, ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಛಾತ್ರ ಚಾತುರ್ಮಾಸ್ಯದ ಪೂರ್ವಭಾವಿ ಸಭೆಯಲ್ಲಿ ಶ್ರೀಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ, ಮಹಾಮಂಡಲದ ಉಪಾಧ್ಯಕ್ಷರಾದ ಡಾ.ಸೀತಾರಾಮಪ್ರಸಾದ್, ಬೆಂಗಳೂರು ಮಂಡಲದ ಕಾರ್ಯದರ್ಶಿಗಳಾದ ಜಿ ಜಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು

Facebook Comments