ಬದುಕಿಗೆ ಬೆಳಕು ನೀಡಿದ ಯೋಗಿಯೊಂದಿಗೆ ನಾವು
– ಶಿಷ್ಯಸಾಗರ

ಬದುಕು ಕೊಟ್ಟ, ಸಂಸ್ಕಾರ ಕಳಿಸಿದ, ಸಾತ್ವಿಕತೆಯ ನೆ_ಗಟ್ಟನ್ನು ನೀಡಿದ, ಸೇವೆಯ ಸವಿ ತಿಳಿಸಿದ, ಇಡೀ ಸಮಾಜವನ್ನು ಒಂದು ಕುಟುಂಬವನ್ನಾಗಿಸಿ ಸಂಘಟಿತರನ್ನಾಗಿಸಿದ ನಮ್ಮೆಲ್ಲರ ಹೃದಯ ಸಿಂಹಾಸನಾಧೀಶ್ವರರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳು ನಮ್ಮ ಉಸಿರು, ನಮ್ಮೆಲ್ಲರ ಆರಾಧ್ಯದೈವ ಎನ್ನುವುದು ಇಂದು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಬದ್ಧತಾ ಸಮಾವೇಶಕ್ಕಾಗಿ ಸೇರಿದ ಶ್ರೀರಾಮಚಂದ್ರಾಪುರಮಠದ ಸಹಸ್ರ ಸಹಸ್ರ ಪದಾಧಿಕಾರಿಗಳ ಒಕ್ಕೊರಲ ಕೂಗು.

“ಬದುಕಿಗೆ ಬೆಳಕು ನೀಡಿದ ಯೋಗಿಯೊಂದಿಗೆ ನಾವು” ಎಂಬ ಧ್ಯೇಯ ವಾಕ್ಯದೊಂದಿಗೆ ಇಂದು ಇಲ್ಲಿ ಸೇರಿದ್ದ ಪದಾಧಿಕಾರಿಗಳು ಶ್ರೀಗಳೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು, ಶ್ರೀಸಂಸ್ಥಾನದ ಮೇಲಿನ ಬದ್ಧತೆಯನ್ನು ಸಾರಿ ಹೇಳಿದ್ದಾರೆ.

ಹಲವು ಅದ್ಭುತಗಳನ್ನು ಸಾಧಿಸಿದ್ದು ಶ್ರೀರಾಮಚಂದ್ರಾಪುರಮಠದ ಸಂಘಟನೆ:

  • ಅರಿವಿನ ಹಂಬಲವುಳ್ಳ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕನಸಿಗೆ ಬೆಂಬಲದ ಧಾರೆ ಎರೆದದ್ದು ಶ್ರೀರಾಮಚಂದ್ರಾಪುರಮಠದ ಸಂಘಟನೆಯಾದ ಹವ್ಯಕ ಮಹಾಮಂಡಲ.
    ಕಳೆದ ೫ ವರ್ಷಗಳಲ್ಲಿ ೨೦೦೦ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ರೂ. ೬೦ ಲಕ್ಷಕ್ಕೂ ಹೆಚ್ಚಿನ ಸಹಾಯ ನೀಡಲಾಗಿದೆ.
  • ಭೂಮಿ ಅದರುವಿಕೆಯಿಂದ ಮನೆ ಕಳೆದುಕೊಂಡು ಭವಿಷ್ಯದ ಬದುಕಿನ ಕುರಿತು ಪ್ರಶ್ನಾರ್ಥ ಚಿಹ್ನೆ ಹೊತ್ತು ಕುಳಿತ ಹುಲ್ಕೋಡಿನ ೭ ಕುಟುಂಬಗಳಿಗೆ ಶುಭಾಶ್ರಾಯ ಯೋಜನೆಯಡಿಯಲ್ಲಿ ೭ ಮನೆ ನಿರ್ಮಿಸಿ ಬದುಕಿನ ದಾರಿ ತೋರಿದ್ದು ಹವ್ಯಕ ಮಹಾಮಂಡಲ.
  • ಮುಳ್ಳೇರಿಯಾ ಹಾಗೂ ಉಪ್ಪಿನಂಗಡಿ ಮಂಡಲದಲ್ಲಿ ಆರ್ಥಿಕ ಅಶಕ್ತತೆಯಿಂದ ಕಷ್ಟದ ಬದುಕು ಸಾಗಿಸುತ್ತಿದ್ದ ೨ ಕುಟುಂಬಗಳಿಗೆ ಆಶ್ರಯಕ್ಕಾಗಿ ೨ ಮನೆ ನಿರ್ಮಾಣ ಮಾಡಿ ನಗುವಿನ ಬದುಕು ನೀಡಿದ್ದು ಶ್ರೀರಾಮಚಂದ್ರಾಪುರಮಠದ ಸಂಘಟನೆ.
  • ಬಡತನ, ಅನಾರೋಗ್ಯ ಹೀಗೆ ಹಲವು ಸಮಸ್ಯೆ ಹೊತ್ತು ಬಂದ ಸಾವಿರಾರು ಜನರಿಗೆ ಸಾಂತ್ವನ, ಪರಿಹಾರ, ಬದುಕಿನ ಬೆಳಕು ನೀಡಿದ್ದು ಸಂಘಟನೆ. ಸಹಾಯ ನಿಧಿಯಡಿಯಲ್ಲಿ ಆರ್ಥಿಕ ದುರ್ಲಭರಿಗೆ ನೀಡಿದ್ದು ರೂ. ೩೦ ಲಕ್ಷಕ್ಕೂ ಹೆಚ್ಚು.
  • ತನ್ನ ಊಟಕ್ಕಾಗಿ ಅಕ್ಕಿ ಅಳೆಯುವ ಸಂದರ್ಭದಲ್ಲಿ ಸಮಾಜಕ್ಕಾಗಿ ಒಂದು ಮುಷ್ಟಿ ಎನ್ನುವ ಅಪೂರ್ವ ಕಲ್ಪನೆಯೊಂದಿಗೆ ಶ್ರೀಗಳವರ ಪೀಠಾರೋಹಣ ಸಂದರ್ಭದಲ್ಲಿ ಜನ್ಮ ತಳೆದ ಮುಷ್ಟಿಭಿಕ್ಷಾ ಯೋಜನೆಯಡಿಯಲ್ಲಿ ಸಂಗ್ರಹವಾಗುವ ಅಕ್ಕಿ ೧೦೦ ಟನ್. ಈ ಅಕ್ಕಿ ಹಸಿವು ಇಂಗಿಸಿದ್ದು ರಾಜ್ಯದ ಸಾವಿರಾರು ಬಡವರು ಹಾಗೂ ವಿದ್ಯಾರ್ಥಿಗಳನ್ನು.

ಹೀಗೆ ಸಂಘಟನೆಯ ಸಾಧನೆ ಪಟ್ಟಿ ಮಾಡಿದರೆ ಅದು ಸಾವಿರ ಪುಟಗಳ ಗ್ರಂಥವಾದೀತು.

ಹಲವು ಯೋಜನೆಗಳ ಮೂಲಕ ಸಮಾಜದ ಸರ್ವೋನ್ನತಿಯ ಸೋಪಾನವಾಗಿ ಬೆಳೆದು ನಿಂತಿರುವ ಈ ಸಂಘಟನೆ ಅಪರೂಪದ ಅನನ್ಯವಾದ ರಚನೆಯನ್ನು ಹೊಂದಿದೆ.

೫ ಮನೆಗಳಿಗೊಂದು ಶ್ರೀ ಕಾರ್ಯಕರ್ತ, ಗುರಿಕ್ಕಾರರ ನೇತೃತ್ವದಲ್ಲಿರುವ ೨೫ ಮನೆಗಳ ಒಂದು ಘಟಕ, ೧೩ ಪದಾಧಿಕಾರಿಗಳ ಮೇಲುಸ್ತುವಾರಿಯಲ್ಲಿರುವ ೨೫೦ ಮನೆಗಳ ವಲಯ, ೧೩ ಪದಾಧಿಕಾರಿಗಳ ಉಸ್ತುವಾರಿಯಲ್ಲಿರುವ ೨,೫೦೦ ಮನೆಗಳ ಮಂಡಲ. ಇಡೀ ಗೋಕರ್ಣ ಮಂಡಲದ ಕೇಂದ್ರವಾಗಿ ಹವ್ಯಕ ಮಹಾಮಂಡಲ. ಇಲ್ಲಿ ಕೂಡ ೧೩ ಪದಾಧಿಕಾರಿಗಳು.

ಶ್ರೀಮಠಕ್ಕೂ ಶಿಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಸಂಕೇತ ದೀಪಕಾಣಿಕೆ. ಕಳೆದ ವರ್ಷಗಳಲ್ಲಿ ಸಮರ್ಪಿತವಾದ ದೀಪಕಾಣಿಕೆ ಸರಾಸರಿ ಸುಮಾರು ೨೩,೫೦೦ ಮನೆಗಳು. ಈ ಸಾಲಿನಲ್ಲಿ ದೀಪಕಾಣಿಕೆ ಸಮರ್ಪಿಸಿದ ಮನೆಗಳು ೨೪,೦೦೦ ಕ್ಕೂ ಹೆಚ್ಚು. ಇದು ವೃದ್ಧಿಗೊಳ್ಳುತ್ತಿರುವ ಬಲದ ದ್ಯೋತಕ, ಸಮಾಜದ ಹಾಗೂ ಶ್ರೀಸಂಸ್ಥಾನದ ಸಂಬಂಧದ ಗಟ್ಟಿತನದ ಗುರುತು.

ಇಡೀ ಸಮಾಜವನ್ನು ಏಕಸೂತ್ರದಲ್ಲಿ ಜೋಡಿಸಿ, ಭ್ರಾತೃತ್ವದ ಸೆಲೆಯಲ್ಲಿ ಕಟ್ಟಿ ಬೆಳೆಸಿದ, ಪರಸ್ಪರ ಸಹಾಕರದ ಮೂಲಕ ಸಮಾಜಕ್ಕಾಗಿ ಬದುಕುವ, ಇನ್ನೊಬ್ಬರ ಕ?ಗಳಿಗೆ ಸ್ಪಂದಿಸುವ ಜೀವನಶೈಲಿ ಕಳಿಸಿದ ನಮ್ಮೆಲ್ಲರ ಹೃದಯದ ಗುರು ಶ್ರೀಮಜ್ಜಗದ್ಗುರುಶಂಕಾರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳ ಮೇಲೆ ನಡೆಸಲಾಗುತ್ತಿರುವ ಎಲ್ಲ ಪಿತೂರಿಗಳನ್ನು ಸಭೆ ಒಕ್ಕೊರೊಲಿನಿಂದ ಖಂಡಿಸಿತು.

ನಕಲಿ ಸೀಡಿ ಕೇಸ್ ವಾಪಸಾತಿ ಸೇರಿದಂತೆ ಎಲ್ಲ ಸಂಚಿನ ಹಿಂದಿರುವ ವ್ಯಕ್ತಿಗಳ/ಸಂಸ್ಥೆಗಳನ್ನು ಪತ್ತೆಹಚ್ಚಿ ಸಂಚನ್ನು ಬಯಲು ಮಾಡುವಂತೆ ಆಗ್ರಹಿಸಿತು.

ಸರ್ವ ಸಮಾಜ ಈ ಸಂಚನ್ನು ಎದುರಿಸಲು ಯಾವ ತ್ಯಾಗಕ್ಕೂ ಸಿದ್ಧ, ನಮ್ಮೆಲ್ಲರ ಶ್ರದ್ಧೆ, ನಿಷ್ಟೆ, ಬದ್ಧತೆಗಳು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳೊಂದಿಗೆ ಎಂಬ ಬದ್ಧತಾ ಪ್ರತಿಜ್ಞೆ ಸ್ವೀಕರಿಸಲಾಯಿತು.

ಶ್ರೀಕಾರ್ಯದರ್ಶಿಗಳಾದ ಮೋಹನ್ ಹೆಗಡೆಯವರ ಪ್ರಾಸ್ತವನೆಯೊಂದಿಗೆ ಸಭೆ ಪ್ರಾರಂಭವಾಯಿತು. ಹವ್ಯಕ ಧುರೀಣ ಶ್ರೀ ಪ್ರಮೋದ ಹೆಗಡೆ, ಯಲ್ಲಾಪುರ ಇವರು ಸಂಘಟನೆಯ ಭಾವ ಹಂಚಿಕೊಂಡರು. ಬದ್ಧತಾ ಪ್ರಣಾಮ, ಬದ್ಧತಾ ಸಹಿಗಳು ಯೋಜಿತಗೊಂಡಿದ್ದವು.

ಕೊನೆಯಲ್ಲಿ ಶ್ರೀ ಶ್ರೀಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

English Summary:
Thousands of Shishyas & followers gathered at Basavanagudi National High-school ground in support of Sri Sri Raghaveshwara Bharati Maha Swamiji of Sri Ramachandrapura Matha. Gathering also took an oath to be in support of Sri Peetham forever.

(ಫೋಟೋ: ಗೌತಮ್ ಬಿ.ಕೆ)

Facebook Comments Box