ದೇಶೀ ಗೋತಳಿ

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

1. ದೇಸಿ ತಳಿಗಿಂತ ವಿದೇಶಿ ತಳಿ ಹೆಚ್ಚು ಜನಪ್ರಿಯವಾಗಲು ಏನು ಕಾರಣ? ದೇಸಿ ತಳಿಗಳ ನಿರ್ವಹಣೆ ಕಷ್ಟ ಎಂಬ ಮಾತು ನಿಜವೇ?
ದೇಸೀ ಗೋತಳಿಗಳ ನಿರ್ವಹಣೆ ಖಂಡಿತವಾಗಿಯೂ ಕಷ್ಟ ಅಲ್ಲ, ಅದು ಕಷ್ಟ ಪರಿಹಾರ ಮಾಡಲಿಕ್ಕೆ ಇರುವಂಥದ್ದು ವಿದೇಶೀ ತಳಿಗಳ ನಿರ್ವಹಣೆಗಿಂತಲೂ ಸುಲಭ ಮತ್ತು ಖಚು೯ ಕಡಿಮೆ ಇನ್ನು ದೇಶೀ ತಳಿಗಳಿಗಿಂತ ವಿದೇಶಿ ತಳಿಗಳು ಜನಪ್ರಿಯವಾಗಲು ಮುಖ್ಯ ಕಾರಣ ಅಂದರೆ ಸರಕಾರ ತನ್ನ ಇಲಾಖೆಗಳ ಮೂಲಕ ಹಾಗೂ ವಿಜ್ಞಾನಿಗಳು ಜೊತೆಗೂಡಿ ಒಂದು ಸುಳ್ಳನ್ನ ಸಾವಿರ ಬಾರಿ ಸಮಾಜಕ್ಕೆ ಹೇಳುತ್ತಾ ಬಂದರೆ ಮಾಧ್ಯಮಗಳಲ್ಲಿ ಎಲ್ಲ ಕಡೆ ಅದೇ ಕಣ್ಮುಂದೆ ಕಾಣುತ್ತಾ ಇದ್ದರೆ ಜನ ನಂಬೋದು ಸಹಜ ಅಂತ, ಅದು ಸಹಜವಾಗಿ ಜನಪ್ರಿಯವಾದದ್ದಲ್ಲ ಕೃತ್ರಿಮವಾಗಿ, ಸರಕಾರ ಮತ್ತು ವಿಜ್ಞಾನಿಗಳು ಸೇರಿ ಜನಪ್ರಿಯವಾಗುವಂತೆ ಮಾಡಿದ್ದು.

 

2. ದೇಸಿ ಹಸುಗಳು ಹಾಲು ನೀಡುವುದು ಕಡಿಮೆ ಎಂಬ ಮನೋಭಾವ ಜನರದು, ಕಡಿಮೆ ಹಾಲುಕೊಡುವ ದೇಶೀ ಗೋವುಗಳನ್ನು ಸಾಕಿದರೆ, ರೈತರಿಗೆ ಆರ್ಥಿಕವಾಗಿ ಹೊರೆತಾಗುವುದಿಲ್ಲವೇ?
ದೇಸೀ ತಳಿಗಳು ಹಾಲು ನೀಡೋದು ಕಡಿಮೆ ಅನ್ನುವುದು ಮನೋಭಾವ ಮಾತ್ರಾ, ವಸ್ತುಸ್ಥಿತಿ ಅಲ್ಲ. ಪ್ರಪಂಚದಲ್ಲಿ ಸರ್ವಾಧಿಕ ಹಾಲು ಕೊಡುವ ತಳಿಗಳು ನಮ್ಮ ಭಾರತೀಯ ತಳಿಗಳೂ ಹೌದು. ಗೀರ್, ಥಾರ್ ಪಾರ್ಕರ್, ರಾಟಿ, ಕಾಂಕ್ರೇಜ್ ಅಥವಾ ಸಾಹಿವಾಲ್ ,ಇರಬಹುದು ತುಂಬಾ ಹಾಲು ಕೊಡುತ್ತವೆ. ಉಳಿದ ತಳಿಗಳು ಕೂಡಾ ಹಾಲು ಕೊಡುತ್ತದೆ ಆದರೆ ಹಾಲು ಹೆಚ್ಚು ಕೊಡುವಂತೆ ಅವುಗಳಿಗೆ ಏನೂ ಮಾಡಲೇ ಇಲ್ಲವಲ್ಲ, ಪೌಷ್ಟಿಕ ಆಹಾರ ಕೊಟ್ಟಿಲ್ಲ… ಅದಕ್ಕೆ ಬೇಕಾದ ವಾತಾವರಣ ಕೊಟ್ಟಿಲ್ಲ ಜೊತೆಗೆ ತಳಿವೃದ್ಧಿ ಮಾಡಿಲ್ಲ, ಮಾಡದಿದ್ದಾಗ ಹಾಗೆ ಆಗುವುದು ಸಹಜ. ಮತ್ತೀಗ ಹಾಲು ಕೊಡದಿದ್ದರೂ ಸಹ ಗೋಮೂತ್ರ ಗೋಮಯಗಳ ಮೂಲಕ ಅದೇ ಹೆಚ್ಚು ಲಾಭಕಾರಿ, ಗೋಮೂತ್ರಕ್ಕೇನು ಖರ್ಚಿದೆ ಹಸುಗೆ ಕೊಡೋ ನೀರು ಮಾತ್ರ, ಗೋಮೂತ್ರಕ್ಕೆ ಬೆಲೆ ಇಲ್ಲವಾ? ಗೋಮೂತ್ರದಿಂದ ಲಾಭ ಇಲ್ಲವಾ? ಯಾವುದು ಹೆಚ್ಚು ಲಾಭಕಾರಿ ಯೋಚನೆ ಮಾಡಿ. ಸಗಣಿಗೇನು ದೊಡ್ಡ ಖರ್ಚಿದೆ ಆದಕ್ಕೆ ತಿನ್ನೋ ಆಹಾರ ಮಾತ್ರ ಅಷ್ಟೇ. ಸುಪ್ರೀಂ ಕೋರ್ಟ್ ಪ್ರಕಾರ ಕೊಹಿನೂರ್ ವಜ್ರಕ್ಕಿಂತ ಹೆಚ್ಚು ಬೆಲೆ ಬಾಳುತ್ತೆ. ಹಾಗಾಗಿ ಖಂಡಿತಾ ದೇಶೀಯ ಗೋತಳಿಯೇ ಹೆಚ್ಚು ಲಾಭಕಾರಿ.

 

3. ದೇಶಿ ಹಸುಗಳಲ್ಲಿ ಹಾಲಿನ ಇಳುವರಿಯನ್ನು ಹೆಚ್ಚು ಮಾಡಲು ದೇಶೀಯ ವಿಧಾನಗಳು ಯಾವುದಾದರೂ ಇದೆಯೇ?
ಇದೆ. ತುಂಬ ಸರಳ ವಿಧಾನ. ಹೆಚ್ಚು ಹಾಲು ಕೊಡುವ ಹಸುವಿನ ಕರು. ಗಂಡು ಕರು. ಅದನ್ನು ಚೆನ್ನಾಗಿ ಬೆಳೆಸಿ ನಂದಿಯಾಗಿ ಮಾಡಿ ಆ ನಂದಿಯಿಂದ ತಳಿ ವೃದ್ಧಿ ಮಾಡ್ತಾಬಂದರೆ ಕಡಿಮೆ ಹಾಲು ಕೊಡುವ ಹಸುವಿಗೆ ಇಂತಹ ನಂದಿಮೂಲಕ ಸಂತಾನೋತ್ಪಾದನೆ ಮಾಡ್ತಾ ಬಂದರೆ ಅದು ಹಾಲು ಹೆಚ್ಚಾಗ್ತಾ ಹೋಗ್ತದೆ. ಇದು ಒಂದು ಸಹಜ ವಿಧಾನ. ಮತ್ತು ಒಳ್ಳೆಯ ಆಹಾರ ಕೊಡುವಂತದ್ದು ಕೂಡಾ ಇನ್ನೊಂದು ವಿಧಾನ.

4. ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು (ಉದಾಹರಣೆಗೆ ಹುಲಿ) ರಕ್ಷಿಸಲು ಸರ್ಕಾರ ಕಾಯ್ದೆಗಳನ್ನು ಮಾಡುತ್ತದೆ. ಹಲವು ದೇಶೀ ಗೋತಳಿಗಳು ಕೂಡ ಅಳಿಯುತ್ತಿವೆ, ಅವುಗಳು ಕಾಯ್ದೆಯಡಿ ಇದೆಯೇ? ಇಲ್ಲವಾದರೆ, ಅದನ್ನು ಕಾಯ್ದೆಯಡಿ ತರಲು ಸಾಮಾನ್ಯರಾಗಿ ನಾವೇನು ಮಾಡಬಹುದು?
ಕಾಯಿದೆಗಳಿಗೇನು ಸಂವಿಧಾನದಡಿಯೇ ಇದೆ. ಸ್ಪಷ್ಟವಾಗಿ ಹೇಳಿದೆ ದೇಶೀ ತಳಿಗಳನ್ನ ರಕ್ಷಣೆ ಮಾಡಲಿಕ್ಕೆ ಅಗತ್ಯ ಉಪಕ್ರಮಗಳನ್ನ ತಗೋಬೇಕು ಅಂತ ಹಾಗಾಗಿ ಇದ್ದೇ ಇದೆ. ಸಾಮಾನ್ಯ ಜನರು ಜನಮತ ದೃವೀಕರಣ ಮಾಡಬೇಕು, ಈಗ ಅಭಯಾಕ್ಷರದಂತ ಯೋಜನೆ ಪ್ರತೀ ಪ್ರಜೆಯೂ ಪ್ರಧಾನ ಮಂತ್ರಿಗೆ ಮುಖ್ಯಮಂತ್ರಿಗೆ ಅಜಿ೯ ಬರೆಯುವಂತಹ ಅಭಯಾಕ್ಷರ ಅಭಿಯಾನ ಆ ತರಹದ ಸಾಮಾನ್ಯ ಜನ ತಮ್ಮ ಅಭಿಪ್ರಾಯವನ್ನ ಲಿಖಿತವಾಗಿ ಕೇಂದ್ರಕ್ಕೆ, ರಾಜ್ಯಕ್ಕೆ ಅಂದರೆ ಆಯಾ ಸರಕಾರಗಳಿಗೆ ಒಪ್ಪಿಸಬೇಕು ಅಂತ.

 

5. ಸಂಕರಕ್ಕೊಳಗಾಗದ ದೇಶಿ ಗೋತಳಿಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ದೃಢಪಡಿಸಲು ವ್ಯವಸ್ಥೆ ಇದೆಯೇ?
ಧಾರಾಳವಾಗಿದೆ.. ಅವುಗಳ ಲಕ್ಷಣಗಳು ತುಂಬಾ ಸ್ಪಷ್ಟವಾಗಿದೆ, ವೈಜ್ಞಾನಿಕವಾಗಿ ಕೂಡ ಅದನ್ನ ಗುರುತಿಸಲು ಖಂಡಿತವಾಗಿಯೂ ಸಾಧ್ಯತೆಗಳಿವೆ. ಮೇಲ್ನೋಟಕ್ಕೆ ಗುರುತಿಸಬಹುದು, ಯಾವುದು ಸಂಕರಕ್ಕೆ ಒಳಗಾಗಿದೆ ಯಾವುದು ಸಂಕರಕ್ಕೆ ಒಳಗಾಗಿಲ್ಲ ಅನ್ನೋದನ್ನ ಬರಿಗಣ್ಣಿಂದಲೇ ಗುರುತಿಸಬಹುದು.

 

Read Gouvaani E-Magazine: www.gouvaani.in 

www.gouvaani.in

Facebook Comments Box