ದೀಪಾವಳಿ ಹಬ್ಬ ಬಂದಾಗ ಸಹಜವಾಗಿ ಪಟಾಕಿ ಹೇಗೆ ನೆನಪಾಗುವುದೋ ಹಾಗೆಯೇ ಗೋಪೂಜೆಯೂ ನೆನಪಾಗುತ್ತದೆ. ಈಗಿನ ಸಂದರ್ಭ ಹೇಗಿದೆ ಎಂದರೆ, ಪೂಜೆ ಪುನಸ್ಕಾರಗಳನ್ನು ಮೂಢನಂಬಿಕೆ ಎನ್ನುವ ಜನರ ನಡುವೆ ನಾವಿದ್ದೇವೆ. ನಿಜವಾಗಿಯೂ ಗೋಪೂಜೆ ಎಂದರೇನು ಎಂಬುದನ್ನು ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌಸ್ಟೋರಿಯಲ್ಲಿ ವಿವರಿಸಿದ್ದಾರೆ..

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

 

ಗೋಪೂಜೆ ಎಂದರೆ…

1. ನಿಜಾರ್ಥದಲ್ಲಿ ಗೋಪೂಜೆ ಎಂದರೆ ಏನು? ದೇವರ ಆವಾಸ ಸ್ಥಾನ ಆಗಿರುವ ಗೋವಿನ ಪೂಜೆ ಮಾಡಿದರೆ ಬೇರೆ ಎಲ್ಲಾ ದೇವದೇವತೆಗಳ ಪೂಜೆ ಮಾಡಿದ್ದಕ್ಕೆ ಸಮಾನಾಗಿರುತ್ತದಾ.?

ಯಾವುದೇ ಒಂದು ವಸ್ತುವಿನ ವ್ಯಕ್ತಿಯ ಶಕ್ತಿಯ ಮಹತಿ ನಮಗೆ ಅರ್ಥವಾದಾಗ ನಾವು ಅರಿತುಕೊಂಡಾಗ ತಾನಾಗಿ ತಲೆ ಬಾಗಬಹುದು, ಕೈ ಜೋಡಿಸಬಹುದು ನಾವು, ಆಶಕ್ತಿಯಮುಂದೆ ಮಣಿಯಬಹುದು, ಅದನ್ನು ಸ್ತುತಿಸಬಹುದು. ಹೀಗೇ ಒಂದು ವಸ್ತುವು ವ್ಯಕ್ತಿಯು ಶಕ್ತಿಯ ಮಹಿಯಿ ಅರ್ಥವಾದಾಗ ನಮ್ಮಕಡೆಯಿಂಡ ಉಂಟಾಗತಕ್ಕಂತಹ, ತಾನೇ ತಾನಾಗಿ ನಮ್ಮ ಕಡೆಯಿಂದ ಗೊತ್ತಾಗತಕ್ಕಂತಹ, ಈ ಅನುಭಾವಗಳನ್ನು ಪೂಜೆ ಎಂದು ಕರೆಯುತ್ತಾರೆ. ನಿಜವಾದ ಪೂಜೆ ಎಂದರೆ ಅದು. ನಿಜವಾದ ಗೋಪೂಜೆ ಎಂದರೂ ಅದೇ. ಗೋವಿನ ಮಹತಿ ನಮಗೆ ಅರ್ಥವಾಗಬೇಕು. ಅರ್ಥಾದಾಗ ತಾನೇ ತಾನಾಗಿ ಗೋವಿನ ಮುಂದೆ ಮಣೀತೇವೆ. ಗೋವನ್ನು ತುಂಬಾ ಪ್ರೀತಿಯಿಂದ ಕಾಪಾಡುತ್ತೇವೆ. ಭಕ್ತಿಯಿಂದ ಪೂಜಿಸುತ್ತೇವೆ. ಅದಿಕೆ ಏನೇನು ಬೇಕು ಅದೆಲ್ಲವನ್ನೂ ಮಾಡುತ್ತೇವೆ. ಅಲ್ಲಿಂದ ಸಮಾಜ ಸಮಾಜ ಏನೇನು ಪಡೆದುಕೊಳ್ಳಬೇಕೋ ಅದನ್ನು ಪಡೆದುಕೊಳ್ಳುವ ರೀತಿ ಮಾಡುತ್ತೇವೆ. ಅದು ಗೋಪೂಜೆ. ಗೋಪೂಜೆ ಎಂದರೆ ಕೇವಲ ಗೋವಿಗೆ ನಾವು ಆರತಿ ತೋರಿಸಿದರೆ, ಅಥವಾ ತಿಲಕ ಇಟ್ಟರೆ ಗೋಪೂಜೆ ಆದಂತೆ ಆಗೋದಿಲ್ಲ. ಒಳಗಿರುವ ಸದ್ಬಾವ, ಮಹತ್ವ ಅರ್ಥವಾದಾಗ ವ್ಯಕ್ತಾಗತಕ್ಕ ಬಾವ ಅನುಭಾವ ಅದು ಗೋಪೂಜೆ.
ಒಂದು ಗೋ ಪೂಜೆ ಎಲ್ಲ ದೇವ ದೇವತೆಗಳಿಗಿಂತ ಮಿಗಿಲು. ಯಾಕೆ ಎಂದರೆ ಒಂದು ಎಲ್ಲ ದೇವ ದೇವತೆಗಳು ಒಂದೇ ಕಡೆ ಸಿಗುವುದಿಲ್ಲ. ಒಂದೊಂದು ದೇವರದು ದೇವಸ್ಥಾನಗಳಿರುತ್ತದೆ. ಆದರೆ ಇಲ್ಲಿ ಒಂದೇ ಕಡೆ ಎಲ್ಲಾ ದೇವರುಗಳೂ ಸಿಗುತ್ತಾರೆ. ಅದು ಮಾತ್ರವಲ್ಲ, ನಾವು ಕೃತ್ರಿಮವಾಗಿ ಸ್ಥಾಪನೆ ಮಾಡಿದ ದೇವಸ್ಥಾನಗಳಲ್ಲಿ ಸಾನಿಧ್ಯ ಬಂದಿರುತ್ತವೋ ಇಲ್ಲವೋ, ಆದರೆ ಇಲ್ಲಿ ತುಂಬ ಸಹಜವಾಗಿರುವಂತಹ ಸಾನಿಧ್ಯ. ಅದು ಹುಟ್ಟುವಾಗಲೇ ಸಾನಿಧ್ಯಗಳ ಜತೆಗೆ ಬಂದುಬಿಡುತ್ತದೆ. ದೇವಸ್ಥಾನಗಳಲ್ಲಿ ನೈವೇಧ್ಯ ಮಾಡಿದರೆ ದೇವರಿಗೆ ಸಲ್ಲುತ್ತದೋ ಇಲ್ಲವೋ ಗೊತ್ತಾಗುವುದಿಲ್ಲ. ನಾವು ಕೈಯಾರೆ ಕೊಡಬಹುದು ಇಲ್ಲಿ. ಅದು ಪ್ರಸಾದವನ್ನೂ ತಾನಾಗಿಯೇ ಕೊಡುತ್ತದೆ. ಹಾಲಿನ ರೂಪದಲ್ಲಿ ಗೋಮಯ ಗೋಮೂತ್ರ ರೂಪದಲ್ಲಿ ಪ್ರಸಾದವನ್ನು ಕೊಡುತ್ತದೆ. ನಾವೇನು ಹುಲ್ಲು ಮೇವು ನೀರು ಕೊಡ್ತೇವೆ ಅದುವೇ ಪೂಜೆ, ಯಜ್ಞ. ಯಜ್ಞದ ಪ್ರಸಾದಕ್ಕೆ ಅಮೃತ ಎಂದು ಹೆಸರು. ಅದು ಗೋ ಪ್ರಸಾದ ರೂಪದಲ್ಲಿ ಏನುಕೊಡುತ್ತದೋ ಹಾಲು ಗೋಮೂತ್ರ ಗೋಮಯ ಅದೆಲ್ಲವೂ ಅಮೃತ ಎಂದ ಮೇಲೆ ಆ ಪೂಜೆಗೂ ಈ ಪೂಜೆಗೂ ತುಂಬಾ ವ್ಯತ್ಯಾಸವೇ ಬಂದು ಬಿಡ್ತು. ಈ ಪೂಜೆ ಇನ್ನೂ ಶ್ರೇಷ್ಠವಾಯಿತು. ಅಲ್ಲಿ ದೇವರ ಪೂಜೆ ಎಲ್ಲರೂ ಮಾಡಲಾಗುವುದಿಲ್ಲ. ಎಲ್ಲರೂ ಪ್ರವೇಶವೇ ಇರುವುದಿಲ್ಲ ದೇವಸ್ಥಾನದಲ್ಲಿ. ಅರ್ಚಕರನ್ನು ಒಳಿದವರಿಗೆ ಪ್ರವೇಶವಿಲ್ಲ. ಇಲ್ಲಿ ಹಾಗಲ್ಲ ಯಾರು ಬೇಕಾದರೂ ಮುಟ್ಟಬಹುದು, ಯಾರು ಬೇಕಾದರೂ ಪೂಜೆ ಮಾಡಬಹುದು. ಎಲ್ಲರಿಗೂ ಲಭ್ಯವಿರತಕ್ಕಂತಹ ಸಾನಿಧ್ಯ. ಸಾಮಾನ್ಯ ದೇವಸ್ಥಾನಕ್ಕಿಂತ ಎಷ್ಟೋ ಮಿಗಿಲಾದ ಸಾನಿಧ್ಯ. ಆದರೆ ಎಲ್ಲರಿಗೂ ಲಭ್ಯವಿಹುದು. ಅದರಿಂದಲೇ ಅದರ ಬೆಲೆ ಅರ್ಥವಾಗಿಲ್ಲ. ಅಷ್ಟು ಸುಲಭವಾಗಿ ಕೈಗೆ ಸಿಗುವುದರಿಂದ ಅದರ ಬೆಲೆ ಅರ್ಥವಾಗದೆ ದಿನಾ ಇಷ್ಟೆಲ್ಲಾ ಅನಾಹುತಗಳನ್ನು ಮಾಡುಕೊಂಡಿರತಕ್ಕಂತಹದು.

2. ಪೂಜೆ-ಪುನಸ್ಕಾರಗಳು ಮೌಢ್ಯ ಎಂಬ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಹೀಗಿರುವಾಗ ಗೋಪೂಜೆಯಿಂದಾಗುವ ಲಾಭವಾದರೂ ಏನು?.

ಯಾವುದು ಮೌಢ್ಯ ಯಾವುದು ಮೌಢ್ಯ ಅಲ್ಲ ಅನ್ನೊದು ಸಂಶೋಧನೆ ಮೂಲಕ ಗೊತ್ತಾಗಬೇಕು. ರೀಸರ್ಚ್ ವರ್ಕ್ ಆಗಬೇಕು. ಆಗಿದೆಯಾ ರಿಸರ್ಚ್ ವರ್ಕ್. ಆದ ಮೇಲೆ ತೀರ್ಮಾನ ಆಗಿದ್ರೆ ಹೇಳಿ. ಆಗಿಲ್ಲ. ನಮ್ಮಷ್ಟಕೆ ನಾವು ಯಾವುದನ್ನು ಮೌಢ್ಯ ಅಂತಾ ಕರೆಯುವುದು ಸಾಧ್ಯ ಇಲ್ಲ. ಅನುಭವದಿಂದ ಗೊತ್ತಾಗಬೇಕು.
ಒಂದು ದಾರಿ ಸಂಶೋಧನೆ. ಇನ್ನೊಂದು ದಾರಿ ಅನುಭವ. ಅನುಭವ ಪಾಸಿಟಿವ್ ಆಗಿ ಇದಾವೆ.ಯಾವುದನ್ನು ಕೆಲವು ಆ ರೀತಿಯ ವಿಕೃತಮತೀಯರ ಜನಗಳು ಮೌಢ್ಯ ಮೌಢ್ಯ ಅಂತ ಹೇಳ್ತಿದಾರೋ ಅದು ಮೌಢ್ಯ ಅಲ್ಲ ಅದು ವಿಜ್ಞಾನ ಅನ್ನುವುದನ್ನು ಅನುಭವಗಳು ಸಾಬೀತು ಮಾಡಿದಾವೆ. ಹಾಗಾಗಿ ಮೌಢ್ಯ ಅನ್ನೋ ಶಬ್ದಕ್ಕೆ ದೊಡ್ಡ ಮಹತ್ವವನ್ನು ಕೊಡುವುದೇ ಇಲ್ಲ. ಮೌಢ್ಯ ಅನ್ನುವ ವಾದವೇ ಮೌಢ್ಯ. ಯಾಕೆಂದ್ರೆ ಅದರಲ್ಲಿ ವಿವೇಚನೆ ಇಲ್ಲ. ಅದರ ಹಿಂದೆ ಅನ್ವೇಷಣೆ, ಸಂಶೋಧನೆ ಅಂತದ್ದು ಏನೂ ಇಲ್ಲ. ಸುಮ್ಮನೆ ಪೂರ್ವಾಗ್ರಹದಿಂದ ಹೇಳತಕ್ಕಂತದ್ದು. ಇದು ಒಂದಾದರೆ ಇನ್ನೊಂದು ಗೋಪೂಜೆಯಿಂದ ಲಾಭ ತುಂಬಾ ಇದೆ. ಒಂದು ಲಾಭ ಅಂದ್ರೆ ಗೋವಿಗೆ ಸಲ್ಲಬೇಕಾದ ಗೌರವ ಸಂದಾಗ ಗೋವು ಪ್ರಸನ್ನವಾದಾಗ, ಅದು ಮಾಡುವ ಆಶೀರ್ವಾದ, ಅದು ಎಲ್ಲಾ ದೇವದೇವತೆಗಳ ಆಶೀರ್ವಾದದ ಸಂಗಮವಾಗಿ ಬರುತ್ತದೆ. ತುಂಬಾ ವಿಶೇಷವಾಗಿರುವಂತದ್ದು. ಧಾರ್ಮಿಕವಾಗಿ, ಅಧ್ಯಾತ್ಮಿಕವಾಗಿ ತುಂಬಾ ದೊಡ್ಡ ಆಶೀರ್ವಾದ ಪ್ರಾಪ್ತ ಆಗುತ್ತದೆ. ಜೊತೆಯಲ್ಲಿ ನಾವು ಗೋವನ್ನು ಗೌರವಿಸುವಾಗ ಪೂಜಿಸುವಾಗ ಗೋವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹಾಗೆ ನೋಡ್ಕೊಂಡ್ರೆ ಅದು ಉಳ್ಕೊಂಡ್ರೆ ಅದೇ ದೊಡ್ಡ ಲಾಭ ಸಮಾಜಕ್ಕೆ. ಯಾಕೆಂದ್ರೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯೂ ಅವುಗಳಿಂದ ಲಾಭ ಇರುವುದರಿಂದ ಅದು ಉಳ್ಕೊಂಡ್ರೆ ಎಲ್ಲಾ ರೀತಿಯಿಂದಲೂ ಲಾಭವೇ. ಅದರಲ್ಲೇನೂ ಎರಡ್ನೇ ಮಾತಿಲ್ಲ. ಈಗ ಕ್ಯಾನ್ಸರ್ ನ ಗುಣ ಮಾಡುವಾಂತಾ, ಏಡ್ಸ್ ಗುಣ ಮಾಡುವಂತಾ ಔಷಧಿಗಳು ಇದಾವೆ ಗೋವಿನಲ್ಲಿ ಲಾಭ ಅಲ್ವಾ? ಸಮಾಜಕ್ಕೆ. ಹಾಗೆ ವೈಯಕ್ತಿಕವಾಗಿ ತುಂಬಾ ಲಾಭ ಸಮಾಜಕ್ಕೆ. ಯಾಕಂದ್ರೆ ಗೋವನ್ನು ಚೆನ್ನಾಗಿ ನೋಡಿಕೊಂಡಾಗ ಆ ಗೋವು ಮನೆಗೆ ಪ್ರತ್ಯಕ್ಷವಾಗಿ ಕೂಡ ತುಂಬಾ ಲಾಭವನ್ನು ಮಾಡಿಕೊಳ್ಲುತ್ತೇವೆ. ಲಾಭವೇ ಲಾಭ.

 

3. ಮುಂದಿನ ಪೀಳಿಗೆಗೆ ಗೋಪೂಜೆ ಬಗ್ಗೆ ತಿಳಿಸುವ ಪರಿ ಎಂತು ?
ಹಿರಿಯರು ಮಾಡಬೇಕು. ಕಿರಿಯರಿಗೆ ಕಲಿಸುವ ಅತ್ಯಂತ ಸುಲಭವಾದ ವಿಧಾನ ಹಿರಿಯರು ಮಾಡುವಂತದ್ದು. ಅವರು ಆಚರಣೆ ಮಾಡದೆ ಕಿರಿಯರಿಗೆ ಏನು ಕಲಿಸ್ತಾರೆ. ಆಚರಣೆ ಮಾಡದೆ ಬರೇ ಬೋಧನೆ ಮಾಡಿದ್ರೆ ಕಿರಿಯರು ತೆಗೊಳ್ಳುದಿಲ್ಲ.ಯಾಕೆ ತಗೋತಾರ. ಸ್ವಂತ ಮಾಡದೇ ಬರೇ ಉಪದೇಶ ಮಾಡ್ತಾ ಇದ್ರೆ ಹಾಗಾಗಿ ಮೊದಲು ಹಿರಿಯರು ಮಾಡಬೇಕು. ಮಾಡಿ ಕಿರಿಯರಿಗೆ ತಿಳಿ ಹೇಳಬೇಕು

 

4. ಸವತ್ಸ ಗೋವನ್ನೇ ಪೂಜಿಸಬೇಕೆನ್ನುವ ನಂಬಿಕೆಯ ಹಿಂದಿನ ಚಿಂತನೆ ಯಾವುದು?
ಹೇಗೇನಿಲ್ಲ. ನಂದಿಯನ್ನೂ ಪೂಜೆ ಮಾಡಬಹುದು. ಎಲ್ಲಾ ಗೋವುಗಳನ್ನು, ಪುಟ್ಟ ಕರುವನ್ನೂ ಕೂಡಾ ಪೂಜೆ ಮಾಡಬಹುದು. ಸವತ್ಸ ಎನ್ನಬೇಕಾದರೆ ವತ್ಸನೂ ಬಂತು ನೋಡಿ. ಆ ಜಾತಿಯೇ ಪೂಜಾರ್ಹ. ಗೌರವಾರ್ಹ. ಮತ್ತೆ ಪೂಜೆ ಅಂದರೆ ನಾವು ಕೊಟ್ಟ ವಿವರಣೆ ಏನಿದೆ ಅದು ಎಲ್ಲಾ ಪುಟ್ಟ ಕರುವಿಗೂ ಸಲ್ಲುವಂತಹದು ಅದು. ಮಹತಿ ಎನ್ನುವುದು ಪುಟ್ಟಕರುವಿಗೂ ಇದ್ದೇ ಇದೆ. ಅದೇನು 33 ಕೋಟಿ ದೇವತೆಗಳು ಕರು ಹಾಕಿದ ಬಳಿಕ ಒಳಗೆ ಬರುತ್ತಾರೆಂದು ಇಲ್ಲವಲ್ಲ. ಹುಟ್ಟುತಾಗಲೇ ಸಹಜ ಸಾನಿಧ್ಯ. ಸಹಜ ಪ್ರತಿಷ್ಠೆ ಇದ್ದ ಹಾಗೆ ಅಂತ. ಯಾರೋ ಪ್ರತಿಷ್ಠಾಪನೆ ಮಾಡಿದ ಬಳಿಕ ಸಾನಿಧ್ಯ ಬಂತು ಅಂತ ಅಲ್ಲ. ಹುಟ್ಟುವಾಗಲೇ ಇತ್ತು ಅದು. ಹಾಗಾಗಿ ಎಂದೂ ಪೂಜಾರ್ಹ. ಎಲ್ಲ ಗೋವುಗಳೂ ಪೂಜಾರ್ಹ.

5. ಸನಾತನ ಸಂಸ್ಕೃತಿಯ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ (ಆಧುನಿಕ/ಆಯುರ್ವೇದ) ಹಿನ್ನೆಲೆಯಿದ್ದೇ ಇರುತ್ತದೆ ಎಂಬುದನ್ನು ಕೇಳಿದ್ದೇವೆ. ಗೋಪೂಜೆಗೂ ಏನಾದರೂ ಇದೆಯೇ?
ಈ ಪ್ರಶ್ನೆಗೆ ತುಂಬ ದೊಡ್ಡ ತುಂಬ ದೀರ್ಘ ತುಂಬ ಆಳವಾದ ಉತ್ತರ ಕೊಡಬೇಕಾಗುತ್ತದೆ. ಅಂತಹ ಪ್ರಶ್ನೆ ಅದು. ಆದರೆ ಇಲ್ಲಿ ಮಿತಿಯನ್ನು ಗಮನಿಸಿ ಒಂದೋ ಎರಡೋ ಮತ್ತನ ಹೇಳುತ್ತೇವೆ. ಮುಖ್ಯವಾಗಿ ಒಂದೇ ಒಂದು ವಿಷಯ. ವಿಜ್ಞಾನದ ನಿಯಮ ಏನೆಂದರೆ ಎರಡು ವಸ್ತುಗಳು ಸೇರಿದಾಗ ಶಕ್ತಿಯ ಹರಿವು ಉಂಟಾಗುತ್ತದೆ ಅಲ್ಲಿ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿ ಹರಿತದೆ. ಎಲ್ಲೇ ಕನೆಕ್ಷನ್ ಏರ್ಪಟ್ಟರೆ, ಎರಡು ವಸ್ತುಗಳ ಮಧ್ಯೆ ಕನೆಕ್ಷನ್ ಏರ್ಪಟ್ಟರೆ, ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ಶಕ್ತಿ ಹರಿತದೆ. ಎಲ್ಲಿಂದ ಎಲ್ಲಿಗೆ ಹರಿದೆ ಎಂದರೆ ಎಲ್ಲಿ ಜಾಸ್ತಿ ಇದೆಯೋ ಅಲ್ಲಿಂದ ಎಲ್ಲಿ ಕಡಿಮೆ ಇದೆಯೋ ಅಲ್ಲಿಗೆ ಶಕ್ತಿ ಪ್ರವಾಹ ಎಂಬುವುದು ವಿಜ್ಞಾನದ ನಿಯಮ. ಹೀಗೇ ಗೋವಿನಲ್ಲಿ ಸಹಜವಾಗಿ ತುಂಬಾ ಶಕ್ತಿ ಇದೆ. ನಮ್ಮ ಕಲ್ಪನೆಗೆ ಮೀರಿದ, ನಮಗೂ ಗೋವಿಗೂ ಹೋಲಿಕೆ ಮಾಡಕೊಳ್ಳಲೇ ಆಗುವುದಿಲ್ಲ ಅಷ್ಟು ದೊಡ್ಡ ವ್ಯತ್ಯಾಸವಿದೆ. ಅಂತಹ ಶಕ್ತಿ ಕೇಂದ್ರ ಗೋವು. ನಾವು ಗೋವಿನ ಸಂಪರ್ಕಕ್ಕೆ ಬರುತ್ತೇವೆ ನಾವು ಪೂಜೆ ಮಾಡಬೇಕಾದರೆ. ನಾವು ಗೋ ವನ್ನು ನೋಡುತ್ತೇವೆ, ಗೋವು ನಮ್ಮನ್ನು ನೋಡುತ್ತೆ ನಾವು ಗೋವನ್ನು ಮುಟ್ಟುತ್ತೇವೆ. ನಾವು ಮನಸಲ್ಲಿ ಭಾವಿಸ್ತೇವೆ. ಅದರ ಉಸಿರು ನಮ್ಮ ಉಸಿರು ಒಂದಾಗುತ್ತೆ. ಈ ತರಹ, ನಾವು ಕೈಯಾರೆ ತಿನ್ನಿಸುತ್ತೇವೆ. ಅದರ ಪ್ರಸಾದ ತಗೋತೇವೆ. ಸಂಪರ್ಕ ಏರ್ಪಡುತ್ತದೆ ನೋಡಿ. ಆಗ ಗೋವಿನ ಕಡೆಯಿಂದ ನಮ್ಮ ಕಡೆಗೆ ಒಂದು ಪುಣ್ಯ ಪ್ರವಾಹ, ಶಕ್ತಿ ಪ್ರವಾಹ, ಅದರೊಳಗಿರತಕ್ಕಂತಹ ಊರ್ಜೆ ಅದರೊಳಗಿರತಕ್ಕಂತಹ ಚೈತನ್ಯ ಅದು ಸಹಜವಾಗಿ ನಮ್ಮ ಕಡೆಗೆ ಹರಿಯೋದರಿಂದ ಅದು ನಮಗೆ ದೊಡ್ಡ ಲಾಭವನ್ನೇ ಅಂತರಂಗಕ್ಕೆ ಊಹೆ ಮಾಡಿಕೊಳ್ಳಬಹುದು. ಇನ್ನು ಇನ್ನು ಬೇಕಾದಷ್ಟು ರೀತಿಯಲ್ಲಿ ಹೇಳಬಹುದು. ಅದರ ಪ್ರಯೋಜನವನ್ನು ನಮ್ಮ ಬುದ್ಧಿಗೆ ನಮ್ಮ ಮಾತಿಗೆ ಮೀರಿದ ಪ್ರಯೋಜನಗಳೂ ಖಂಡಿತಾ ಇದ್ದಾವೆ.

 

 

 

Read Gouvaani E-Magazine: www.gouvaani.in 

www.gouvaani.in

Facebook Comments Box