ಮರುಮಹಾರಾಜನು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಪುನಃ ಬೆಳಗಿಸುವವನಾದರೆ ಚಂದ್ರವಂಶದ ದೇವಾಪಿಯು ಈ ಯುಗಾಂತ್ಯದಲ್ಲಿ ಚಂದ್ರವಂಶವನ್ನು ಪುನಃ ಮುಂದುವರೆಸುವನು. ಶಂಭಲ ಎಂಬ ಗ್ರಾಮದಲ್ಲಿ  ವಿಷ್ಣುಯಶಸ ಎಂಬ ಮಹಾತ್ಮನಾದ ಬ್ರಾಹ್ಮಣನಮನೆಯಲ್ಲಿ ಪ್ರಾದುರ್ಭವಿಸುವ ಕಲ್ಕಿಯ ಆಜ್ಞೆಯಂತೆ ಮರು ಮಹಾರಾಜ ಹಾಗೂ ದೇವಾಪಿಯರೀರ್ವರೂ ಸತ್ಯಯುಗದಲ್ಲಿ ಸನಾತನಧರ್ಮವನ್ನು ಬೆಳೆಸುತ್ತಾರೆ. ಇವರಿಬ್ಬರು ಅದ್ಭುತ ಯೋಗಶಕ್ತಿಯನ್ನು ಪಡೆದವರಾಗಿದ್ದು ಈಗ “ಕಲಾಪ” ಗ್ರಾಮದಲ್ಲಿ ಗೋಪ್ಯವಾಗಿ ತಪಸ್ಸನ್ನಾಚರಿಸುತ್ತಿದ್ದಾರೆ..
ದೇವಾಪಿ :-
ಭೀಷ್ಮಪಿತಾಮಹನ ತಂದೆಯಾದ ಶಂತನು ಮಹಾರಾಜನ ಅಣ್ಣನೇ ದೇವಾಪಿ. ಪ್ರತೀಪ-ಸುನಂದೆಯರ ಮೊದಲಮಗ. ಎರಡನೆಯವಶಂತನು ಹಾಗೂ ಮೂರನೆಯವ ಬಾಹ್ಲೀಕ.
ಪ್ರತೀಪನ ನಂತರ ಇವನೇ ಅಧಿಕಾರಕ್ಕೆ ಬಂದಿದ್ದ. ಆದರೆ ಇವನು ಕುಷ್ಠ ರೊಗಪೀಡಿತನಾದುದರಿಂದ ಪ್ರಜೆಗಳು ಶಂತನುವನ್ನು ಪಟ್ಟಕ್ಕೆತಂದರು. ವೈರಾಗ್ಯವನ್ನು ತಳೆದ ದೇವಾಪಿಯು ಸನ್ಯಾಸವನ್ನು ಸ್ವೀಕರಿಸಿದ. ಆದರೆ ರಾಜ್ಯದಲ್ಲಿ ಅನಾವೃಷ್ಟಿ ತಲೆದೋರಿತು. ಪ್ರಜೆಗಳು ಕಷ್ಟಕ್ಕೆಸಿಲುಕಿದರು. ಆಗ ಶಂತನುವು ಅಣ್ಣನ ಬಳಿಗೆ ಹೋಗಿ ತನ್ನ ಅಪರಾಧವನ್ನು ಮನ್ನಿಸುವಂತೆ ಪ್ರಾರ್ಥಿಸಿದ. ಆಗ ಸುವೃಷ್ಟಿಯಾಯಿತು. ಇವನು”ಕಲಾಪ” ಗ್ರಾಮದಲ್ಲಿದ್ದು ಯೋಗವಿದ್ಯೆಯನ್ನು ಅಭ್ಯಾಸ ಮಾಡಿದ. ಮುಂದಿನ ಕೃತಯುಗದಲ್ಲಿ ಚಂದ್ರವಂಶವನ್ನು ಇವನೇ ಬೆಳೆಸುತ್ತಾನೆ.

” ದೇವಾಪಿ: ಶಂತನಃ ಭ್ರಾತಾ ಮರುಶ್ಚೇಕ್ಷ್ವಾಕುವಂಶಜಃ | ಕಲಾಪಗ್ರಾಮ ಆಸಾತೇ ಮಹಾಯೋಗಬಲಾನ್ವಿತೌ ||
ತಾವಿಹೈತ್ಯ ಕಲೇರಂತೇ ವಾಸುದೇವಾನುಶಿಕ್ಷಿತೌ |ವರ್ಣಾಶ್ರಮಯುತಂ ಧರ್ಮಂ ಪೂರ್ವವತ್ ಪ್ರಥಯಿಷ್ಯತಃ  ||
—ಶ್ರೀಮದ್ಭಾಗವತದಲ್ಲಿಶುಕಮಹರ್ಷಿಗಳಿಂದ ಪ್ರೋಕ್ತ..

ಸಂಗ್ರಹ :- ಸತ್ಯನಾರಾಯಣ ಶರ್ಮಾ

Facebook Comments Box