LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಬದಲಾಗಲಿ ದೇಶದ ದಶೆ – ದಿಶೆಗಳು..!!

Author: ; Published On: ಗುರುವಾರ, ಜನವರಿ 14th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಭಗವಾನ್ ಸೂರ್ಯದೇವನ ಗತಿಯಲ್ಲಿ ಮಹತ್ತರ ಬದಲಾವಣೆಯಾಗುವ ಸಮಯವಿದು..

ದಕ್ಷಿಣದಿಂದ ಉತ್ತರದೆಡೆಗೆ..

ಯಮರಾಜನ ದಿಶೆಯಿಂದ ಧನರಾಜನ ದಿಶೆಯೆಡೆಗೆ..

ಸಾವಿನಿಂದ ಸಮೃದ್ಧಿಯೆಡೆಗೆ..

ಬೆಳಕಿನ ದೇವತೆ ತನ್ನ ಗತಿಯನ್ನು ಬದಲಾಯಿಸುವ ಸುಮುಹೂರ್ತವಿದು..!!

ಸ್ವರ್ಗದಲ್ಲಿ ಸೂರ್ಯೋದಯವಾಗುತ್ತಿದೆ..!

ಮಾನವರ ಒಂದು ವರ್ಷ ದೇವತೆಗಳಿಗೆ ಒಂದು ದಿನ..!!

ಉತ್ತರಾಯಣದ ಆರು ತಿಂಗಳು ಸ್ವರ್ಗದಲ್ಲಿ ಹಗಲಾದರೆ..

ದಕ್ಷಿಣಾಯನದ ಆರು ತಿಂಗಳು ರಾತ್ರಿ..!!

ಭೂಮಿಯಲ್ಲಿ ದಕ್ಷಿಣಾಯನ ಮುಗಿದು ಈಗ ಉತ್ತರಾಯಣ ಪ್ರಾರಂಭವಾಗುತ್ತಿದ್ದರೆ..

ಸ್ವರ್ಗದಲ್ಲಿ ಇರುಳು ಕಳೆದು ಹಗಲು ಪ್ರಾರಂಭವಾಗುವ ಹೊತ್ತಿದು..!!

ಬೆಳಗಾಗುವಾಗ ನಾವು ಮನೆಬಾಗಿಲು ತೆರೆಯುವಂತೆ..

ದೇವತೆಗಳು ಸ್ವರ್ಗದ ಬಾಗಿಲುತೆರೆಯುವ ಮಹಾಪುಣ್ಯಕಾಲ..!!

ಆದುದರಿಂದಲೇ ಸತ್ಪುರುಷರು ಉತ್ತರಾಯಣದ ಮೃತ್ಯುವನ್ನು ಬಯಸುವುದು..

ಭಗವಾನ್ ಭಾಸ್ಕರನ ದಿಶೆ ಬದಲಾಗುವಾಗ ಭವ್ಯ ಭಾರತದ ದಿಶೆ – ದಶೆಗಳೂ ಬದಲಾಗಲೆಂದು ಹಾರೈಸೋಣವೇ..??

ಕಳೆಯಲಿ ನರಕ.. ಇಳೆಗಿಳಿಯಲಿ ನಾಕ..

ನರರಾಗಲಿ ನಾರಾಯಣರೆಂದು ಮಹಾಕಾಲನಲ್ಲಿ ಮೊರೆಯಿಡೋಣವೇ..??

|| ಹರೇರಾಮ ||

4 Responses to ಬದಲಾಗಲಿ ದೇಶದ ದಶೆ – ದಿಶೆಗಳು..!!

 1. Raghavendra Narayana

  ಸು೦ದರವಾಗಿದೆ.
  .
  ನರ ನಾರಾಯಣನಾಗಬೇಕೆ೦ದು
  – ಬೇಡುವ ವರಕ್ಕಿ೦ತ ದೊಡ್ಡ ವರವಿಲ್ಲ
  – ಕಾಣುವ ಕನಸಿಗಿ೦ತ ಬೇರೆ ಸು೦ದರ ಕನಸಿಲ್ಲ
  – ಕಲ್ಪನೆಗಿ೦ತ ಬೇರೆ ಮೋಹಕ ಮೌನವಿಲ್ಲ
  – ಭಾವಕ್ಕಿ೦ತ ಬೇರೆ ವಿಶಾಲ ಭಾವವಿಲ್ಲ
  – ಆ ಕಾಮಾಕ್ಕೆ, ಕಾರ್ಯಕ್ಕೆ, ಪದವಿಗೆ, ಸ೦ಪತ್ತಿಗೆ, ಗುರಿಗೆ, ಜ್ಞಾನಕ್ಕೆ ಬೇರೆ ಯಾವುದು ಸಾಟಿ ಇದೆ?
  – ಬಯಸಿ ಹೋಗುವ ಲೋಕಕ್ಕೆ ದ್ವಾರಪಾಲಕರಿಲ್ಲ – ಬಾಗಿಲೇ ಇಲ್ಲ, ಉತ್ತರಾಯಣ ದಕ್ಷಿಣಾಯಣಗಳಿಲ್ಲ, ಹಾದಿ ತು೦ಬ ನಾರಾಯಣರೆ, ಆದಿ ಅ೦ತ್ಯ ತು೦ಬ ನಾರಾಯಣನೆ. ಏಕಾ೦ಗಿ ಪ್ರಯಣವಾದರು ಆಯಾಸವಿಲ್ಲ. ನಾರಾಯಣನ ಸರಳ ಸಹಜ ಸ್ವಾಗತವಿದೆ, ಶ೦ಕರನ ಜೊತೆ ಇದೆ – ಪಾದಕ್ಕೊ, ತೆಕ್ಕೆಗೊ, ಮಡಿಲಿಗೊ….

  [Reply]

 2. Shreekant Hegde

  हरॆ राम, प्रणामाः ।

  पुनातु मां तत्सवितुर्वरॆण्यम् ।

  [Reply]

 3. JaiGanesh

  Sorry

  Mujhe kannada nahin aati…

  Pranaam !

  Jai Ganesh !

  [Reply]

 4. vdaithota

  ಭವ್ಯ ಭಾರತ ಭೂತ ಕಾಲ..???!!!!
  ನವ್ಯ ಭಾರತ ವರ್ತಮಾನ…???!!!!
  ಯಾವ ಭಾರತ ಭವಿಷ್ಯದಲ್ಲಿ..!!!!???????
  ತಿರುಗುವುದೇ ಕಾಲಚಕ್ರ ಭೂತಕಾಲದೆಡೆಗೆ???!!!!!

  [Reply]

Leave a Reply

Highslide for Wordpress Plugin