LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನೀನಾರಿಗಾದೆಯೋ ಎಲೆ ಮಾನವಾ!!

Author: ; Published On: ಬುಧವಾರ, ಸೆಪ್ಟೆಂಬರ 14th, 2011;

Switch to language: ಕನ್ನಡ | English | हिंदी         Shortlink:

ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ..
ಪ್ರಕೃತಿಯೆಂದರೆ ನಮ್ಮ ತಾಯಿ.

ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು!
ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ.
ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:

ಮನುಷ್ಯನೊಬ್ಬನಿಗೆ ಸುಮಾರು 550 ಲೀಟರುಗಳಷ್ಟು ಆಮ್ಲಜನಕದ ಅಗತ್ಯವಿದೆ ಎಂದು ವಿಜ್ಞಾನವು ಹೇಳುತ್ತದೆ.
ಅಂದರೆ ಈಗಿನ ಕೃತಕ ಆಮ್ಲಜನಕ ಸಿಲಿಂಡರುಗಳಲ್ಲಿ ಮೂರು ಸಿಲಿಂಡರುಗಳಷ್ಟು..

ಒಂದು ಸಿಲಿಂಡರಿನ ಬೆಲೆ 700 ರೂ.ಗಳೆಂದಾದರೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ 2100 ರೂ.ಗಳಷ್ಟು ಮೌಲ್ಯದ ಆಮ್ಲಜನಕ ಸೇವಿಸುತ್ತಾನೆ ಎಂದಾಯಿತು!
ಅಂದರೆ ಒಂದು ವರ್ಷಕ್ಕೆ 766500 ರೂ.ಗಳು!

ಹಾಗಿದ್ದಲ್ಲಿ ಆತನ ಇಡೀ ಜೀವಮಾನಕ್ಕೆ ಅಗತ್ಯವಾಗುವ ಆಮ್ಲಜನಕದ ಮೌಲ್ಯವೆಷ್ಟೆಂದು ಊಹಿಸಿ..!!
ಇಷ್ಟೊಂದು ಬೆಲೆಬಾಳುವ ಸಂಪತ್ತನ್ನು ಪ್ರಕೃತಿಮಾತೆ ಏನೇನೂ ಪ್ರತಿಫಲಾಪೇಕ್ಷೆಯಿಲ್ಲದೇ ಈಯುತ್ತಿದ್ದಾಳೆ.
ನಾವು ಮಾತ್ರ ಅವಿವೇಕಿಗಳಂತೆ ನಮ್ಮ ಇಹದಿರವಿನ ಇರುವಿಕೆಗೆ ಮೂಲಾಧಾರವಾದ ವೃಕ್ಷಸಂಪತ್ತನ್ನು ನಾಶಪಡಿಸುತ್ತಲೇ ಇದ್ದೇವೆ…

ಎಂಥ ನಷ್ಟ!
ಎಂಥ ನಷ್ಟವಿದು!

ನಮಗೆ ನಾವೇ ಮಾಡಿಕೊಳ್ಳುತ್ತಿರುವ ನಷ್ಟ!

(ಸಂಪಾದಿತ)

 

10 Responses to ನೀನಾರಿಗಾದೆಯೋ ಎಲೆ ಮಾನವಾ!!

 1. gopalakrishna pakalakunja

  ಹರೇ ರಾಮ।

  ವೃಕ್ಷ ಕಡಿದು ವಕ್ಷ ಕ್ಕೆ ನೋವು ಕೊಡುವ ವಿಚಾರ ಅತ್ಯಂತ ಪ್ರಸ್ತುತ.

  [Reply]

 2. Anruadha Parvathi

  How ungreatful?????!!!!

  [Reply]

 3. ನಂದ ಕಿಶೋರ ಬೀರಂತಡ್ಕ

  [Reply]

 4. Vidyalaxmi, mangalore

  ಮರ ಬೆಳೆಸೋಣ, ಪ್ರಕೃತಿ ಉಳಿಸೋಣ …

  [Reply]

 5. Dr.Amrita Prasad

  ಹರೇ ರಾಮ, ಅಲ್ಪ ಸುಖಕ್ಕಾಗಿ ಮನುಷ್ಯ ವಿವೇಚನೆಯಿಲ್ಲದ ಕೆಲಸ ಮಾಡುತ್ತಲೇ ಇದ್ದರೂ ತಾನೇ ಬುದ್ಧಿಜೀವಿ ಎಂದು ಬೇರೆ ತಿಳಿದಿದ್ದಾನೆ . ಇದರ ಅರಿವಾಗುವುದು ಹೇಗೆ/ಯಾವಾಗ?

  [Reply]

 6. Vidya Ravishankar

  ಹರೇರಾಮ। ನಿಜ . ಕಾಡೇ ನಾಡಿನ ಸಂಪತ್ತು. ಹಸಿರೇ ಉಸಿರು .ಇದನ್ನರಿಯದ ಮಾನವನ ಅಂತ್ಯ ಖಂಡಿತ.

  [Reply]

 7. ಜಗದೀಶ ಬಿ. ಆರ್.

  ಮನುಜನಿಗೆ ಬೇಕು ಆಮ್ಲಜನಕ.. ದುರಂತವೆಂದರೆ, ಮನುಜನಾಗುತ್ತಿದ್ದಾನೆ ವಿಷಜನಕ :(
  ಬೇಕಿರುವುದು ಬೇಡವಾಗಿದೆ, ಬೇಡವಾದದ್ದೇ ಬೇಕಾಗಿದೆ.

  [Reply]

 8. seetharama bhat

  ಹರೇರಾಮ್,

  ಪ್ರಕ್ರತಿ ಯಿತ್ತ ನೀರು, ಗಾಳಿ, ಬೆಳಕು,ಬೆ೦ಕಿ, ಜಾಗ ಗಳಿಗೆ ನಾವು ಬಾಡಿಗೆ/ಕ್ರಯ
  ಕೊಡಬೇಕೆ೦ದರೆ ಅದು ಯಾವ ಜನ್ಮದಲ್ಲಾದರೂ ಸಾದ್ಯವೇ?

  ಅದನ್ನು, ಉಳಿಸಿ,ಬಳಸಿ,ಬೆಳೆಸುವುದರಿ೦ದ ಮಾತ್ರವೇ ಸ್ವ್ಲಲ್ಪವಾದರೂ
  ಸಾಲ ದ ಬಡ್ಡಿ ತೀರಿಸಬಹುದೇನೋ?

  [Reply]

 9. ನಂದ ಕಿಶೋರ ಬೀರಂತಡ್ಕ

  ಕಳೆದ ಆದಿತ್ಯವಾರದ (18.09.2011) ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಬಂದ ಸುದ್ದಿಯೊಂದಿದೆ…
  ನಮ್ಮ ಮಠದ ಆಶ್ರಯದಲ್ಲಿ ನೆಡಿಸಲ್ಪಟ್ಟ ಗಿಡಗಳ ಬಗ್ಗೆ..
  ಇಲ್ಲಿ ನೋಡಿ, ಚಿನ್ಮಯಿ ಎಂಬ 3ನೆಯ ತರಗತಿಯ ಹುಡುಗಿ ಬರೆದದ್ದು..

  http://74.127.61.106/epaper/Display.aspx?Pg=H&Edn=MN&DispDate=9/18/2011

  ಹರೇ ರಾಮ..

  [Reply]

 10. seetharama bhat

  ಹರೇರಾಮ್,

  ಕ್ಷಮೆಯಿರಲಿ ಗುರುದೇವಾ

  [Reply]

Leave a Reply

Highslide for Wordpress Plugin