LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶಂಕರ ಶುಭೋದಯ

Author: ; Published On: ರವಿವಾರ, ಮೇ 8th, 2011;

Switch to language: ಕನ್ನಡ | English | हिंदी         Shortlink:

ಗುರುವಿನಡಿಗೆ ಬಾಗುವ..

ಬೆಳಕಿನೆಡೆಗೆ ಸಾಗುವ..

21 Responses to ಶಂಕರ ಶುಭೋದಯ

 1. Jayashree Neeramoole

  ಎಂದೆಂದೂ ಗುರುಚರಣಗಳಡಿಯಲ್ಲಿ ಇರಲೆನ್ನ ಶಿರವು…

  [Reply]

 2. Raghavendra Narayana

  ಎ೦ದೆ೦ದೂ ಮರೆಯಲಾಗದ ಭಾವಚಿತ್ರ ಮರೆಯಬಾರದ ಜೀವನ.
  ಗುರುವಿನಡಿಗೆ ಬ೦ದರೆ, ಪರಮಾತ್ಮನಡಿಗೆ ಬ೦ದ೦ತೆ.
  .
  ಶ್ರೀ ಗುರುಭ್ಯೋ ನಮಃ

  [Reply]

 3. shwetha m shasthry

  ಉರಿಯುವ ದೀಪದ ಬಳಿ ಇರುವವರಿಗೆ ಕತ್ತಲೆಯ ಭಯವಿಲ್ಲ…..
  ಗುರುವಿನ ಚರಣಕೆ ಶರಣಾದವರಿಗೆ ಗುರಿ ತಲುಪುವ ತೊಡಕಿಲ್ಲ…….
  ಗುರುಗಳಾಶೀರ್ವಾದದ ಬಲವೊ೦ದಿದ್ದರೆ ಸಾಕು, ಬಾಳು ನ೦ದನವಾಗಲು ಇನ್ನೇನು ಬೇಕು?

  [Reply]

 4. Anuradha Parvathi

  ಆದಿ ಗುರು ಶಂಕರಾಚಾರ್ಯರಿಗೆ ಕೋಟಿ ಕೋಟಿ ಪ್ರಣಾಮಗಳು.

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಹರೇ ರಾಮ,

  ಅಧುನಿಕ ಜಗತ್ತು ಈ ದಿನವನ್ನು ‘ಅಮ್ಮಂದಿರ ದಿನ’ ಎಂದು ಆಚರಿಸುತ್ತಿರುವುದಕ್ಕೂ, “ಶ್ರೀ ಶಂಕರ ಜಯಂತಿ” ಯ ಈ ಸುದಿನಕ್ಕೂ ನಿಜವಾಗಿಯೂ ಸಂಬಂಧವಿದೆಯೂ ಅಥವಾ ಕಾಕತಾಳಿಯವೋ ತಿಳಿಯದು…

  ತಮ್ಮ ಸಂಕಲ್ಪ ಬಲದಿಂದ ಹಾಗೂ ತತ್ವಗಳಿಂದ ಇಂದಿಗೂ ಕೂಡ… ಅಧುನಿಕ ಜಗತ್ತಿನಲ್ಲಿ ನಾವು ಇಷ್ಟೊಂದು ತಪ್ಪುಗಳನ್ನು ಮಾಡುತ್ತಿದ್ದರೂ ಅಮ್ಮನಂತೆ ನಮ್ಮನ್ನು ರಕ್ಷಿಸುತ್ತಿರುವ “ಶ್ರೀ ಶಂಕರರು” ನಮ್ಮೆಲ್ಲರ ಅಮ್ಮನಲ್ಲವೇ?
  ಅವರ ತತ್ವಗಳನ್ನು, ಆದರ್ಶಗಳನ್ನು ಎತ್ತಿ ಹಿಡಿದು ಮತ್ತೆ ಭಾರತವು ಪ್ರಜ್ವಲಿಸುವಂತೆ ಮಾಡುವುದಕ್ಕೋಸ್ಕರ ನಮ್ಮ ಜೀವನವನ್ನು ಮುಡಿಪಾಗಿಡುವ ದೃಢ ಸಂಕಲ್ಪವನ್ನು ಈ ದಿನ ಮಾಡೋಣವೆ?

  [Reply]

 6. ಮಂಗ್ಳೂರ ಮಾಣಿ...

  ಮನಸಾರೆ ಬಾಗಿದೆ.
  ಬೆಳಕಿನೆಡೆಗಿನ ಪಯಣ ಇಂದಿನಿಂದಲೇ – ಈಗಿನಿಂದಲೇ.

  ಕತ್ತಲೆಯಲ್ಲಿ ಏನೂ ಕಾಣುವುದಿಲ್ಲ,
  ಯಾವುದು ತಪ್ಪು? ಯಾವುದು ಸರಿ ಎಂದೂ ತಿಳಿದಯದು,
  ಅದಕ್ಕೇ.. ಕತ್ತಲೆಯೆಂಬದರೆ ಭಯ ನನಗೆ..
  ಬೆಳಕೆಂದರೆ ನಿಶ್ಚಿಂತೆ.. ಅಲ್ಲಿ ಗುರುತ್ವವಿದೆ.. ಭಯವಲ್ಲ..
  ಪ್ರೀತಿಯಿದೆ.. ಭೀತಿಯಲ್ಲ..

  [Reply]

 7. Raghavendra Narayana

  “ಬೆಳಕಿನ ನಾಡು ಭಾರತದಲ್ಲಿ ಕತ್ತಲು ಆವರಿಸಿದಾಗ
  ಕೈಲಾಸದಿ೦ದ ತೇಜೋನ್ಮೂರ್ತಿಯಾದ ಶ೦ಕರನೆ ಧರೆಗಿಳಿದು ಬ೦ದು
  ಶ೦ಕರಾಚಾರ್ಯರು ಅ೦ತ ಅನ್ನಿಸಿಕೊ೦ಡರು.
  ದೇಶದಲ್ಲಿ ಧರ್ಮ ಸ್ಥಾಪನೆ ಮಾಡಿ, ಮಠಗಳನ್ನು ಸ್ಥಾಪನೆ ಮಾಡಿ,
  ಆ ಧರ್ಮವನ್ನ ಉಳಿಸಿಲಿಕ್ಕೆ ಬೆಳಸಲಿಕ್ಕೆ ಮಠಗಳನ್ನ ಸ್ಥಾಪನೆ ಮಾಡಿ,
  ಇಡೀ ದೇಶಕ್ಕೆ ಒ೦ದು ಪ್ರೇರಣೆ ಕೊಟ್ಟ, ಇಡೀ ದೇಶಕ್ಕೆ ಬೆಳಕನ್ನು ಕೊಟ್ಟ೦ತ,
  ಆ ಮಹಾಶಕ್ತಿಗೆ ಮೊದಲಾಗಿ ಪ್ರಣಾಮವನ್ನು ಸಮರ್ಪನೆ ಮಾಡೋಣ”
  .
  ಶ್ರೀಗಳ “ಆಶೀರ್ವಚನ-ಇಟಗಿ ವಲಯ ಸಭೆ” ಇದರ ಮೊದಲ ನುಡಿಗಳು.
  .
  ಶ್ರೀ ಗುರುಭ್ಯೋ ನಮಃ

  [Reply]

 8. Sri Samsthana

  ಶಂಕರರ ‘ಕಾಲಡಿ’ಯ ಧೂಳು ಸಾಕಲ್ಲವೇ ನಮ್ಮ ಗೋಳು ನೀಗಲು..?

  [Reply]

 9. Rama Ajjakana

  ಹರೇ ರಾಮ

  [Reply]

 10. mamata hegde

  || ಹರೇ ರಾಮ||

  ಆದಿ ಶಂಕರಾಚಾರ್ಯರಿಗೆ ಕೋಟಿ ಕೋಟಿ ನಮನಗಳು…….

  [Reply]

 11. seetharama bhat

  ಹರೇರಾಮ,

  ಆದಿ ಗುರುವಿಗೂ,
  ಅದೇ ಗುರುವಿಗು
  ಎರಗಿರುವೆ ಅನುದಿನ
  ಎರವಾಗುವವ ಅನುಕ್ಷಣ,

  ಕಾಲಡಿಯ ದೂಳು ಸಾಕು
  ಕಾಲು ಹಿಡಿದೇಳು ಸಾಕು
  ಕಾಲದ ಗೋಳಿಲ್ಲ ಸೋಕು
  ಕಾರುಣ್ಯ ವೇಕಿಲ್ಲ ಬೇಕು

  [Reply]

 12. Sri Samsthana

  ಪದ-ಪದ್ಯಗಳ ಅಪೂರ್ವಸಂಗಮ..

  [Reply]

  seetharama bhat Reply:

  ಹರೇರಾಮ್

  [Reply]

 13. Shridevi Vishwanath

  ಹರೇರಾಮ ಸಂಸ್ಥಾನ.

  ಗುರುಕೃಪಾಧಾರೆಯ ಆಶೀರ್ವಾದದ ಬಲದ ಪ್ರಭೆಯಲ್ಲಿ, ಬೆಳಕಾದ ನಮ್ಮ ಜೀವನದಾರಿಯ ಸುಲಭಗೊಂಡ ಪಥದಲ್ಲಿ, ಈ ಜೀವ ಸಾಗಲಿ ಕರ್ತವ್ಯ ನಿರ್ವಹಣೆಯ ಜೊತೆಗೆ ಭಕ್ತಿ, ಮುಕ್ತಿಯ ದಾರಿಯಲ್ಲಿ..
  ಹರೇರಾಮ.

  [Reply]

  Sri Samsthana Reply:

  ಭುಕ್ತಿ ವಿರಕ್ತಿಯಲ್ಲಿ, ವಿರಕ್ತಿ ವಿಮುಕ್ತಿಯಲ್ಲಿ ಪರ್ಯವಸಾನವಾಗುವಂತಿದ್ದರೆ…

  [Reply]

 14. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಆ ಪರಿಶುದ್ದ ಚೈತನ್ಯವನ್ನು ಸೇರುವಲ್ಲಿ ನಮಗಿರುವ ಅಡೆ ತಡೆಗಳೆಲ್ಲ ನಿವಾರಣೆಯಾಗಲಿ…

  [Reply]

 15. maruvala narayana

  ಹರೇ ರಾಮ

  ಆ ಶಂಕರಾಚಾಯ೯ರು ಅವತರಿಸಿದಾಗ ಇತ್ತಿದ್ದ ಕಾಲಕ್ಕೆ ಈ ಶಂಕರಾಚಾಯ೯ರು ಅವತರಿಸಿದ ಕಾಲವ ತುಲನೆ ಮಾಡಿದರೆ…ಅಂದು ಅವ್ಯೆದಿಕ ಆಚರಣೆಗೊ ಜಾಸ್ತಿಯಾಗಿಪ್ಪಗ ಆ ಶಂಕರಾಚಾಯ೯ರು ಭಾರತ ಪೂತಿ೯ ಸುತ್ತಿ ವ್ಯೆದಿಕ ಧಮ೯ವ ಮತ್ತೆ ಮೇಲಕ್ಕೆ ಎತ್ತಿದವು. ಇಂದು ಈ ಶಂಕರಾಚಾಯ೯ರು ಇದೇ ಕೆಲಸವ ಮಾಡುತ್ತಾ ಇದ್ದವು. ಆ ಶಂಕರಾಚಾಯ೯ರ ಪರಂಪರೆಗೆ ನಮೋ ನಮ

  [Reply]

  Sri Samsthana Reply:

  ನಿಮ್ಮ ಪ್ರೀತಿಯಿದು..

  [Reply]

 16. gopalakrishna pakalakunja

  ಭಾಸ್ಕರನ ಬೆಳಕನ್ನರಸುತ್ತಾ ಬಾಗಿ ಬೆಳೆವ ಸಸಿ

  ಬಾನೆತ್ತರಕ್ಕೆ ಬೆಳೆದು ಬೆಳಗವುದು ಜನ್ಮ ಸರ್ಥಕ್ಯದಿ

  ಶ್ರೀ ಗುರುವಿನ ಕೃಪಾಶೀರ್ವಾದ ಬಯಸಿ ಬರುವ ಶಿಶು

  ಶಂಕರಾನುಗೃಹದಿ ಪಡೆವುದಾ ಮುಕ್ತಿ ಆತ್ಮ ಜ್ನಾನವ ಹೊಂದಿ.

  [Reply]

 17. gopalakrishna pakalakunja

  ಭಾಸ್ಕರನ ಬೆಳಕನ್ನರಸಿ ಬಾಗಿ ಬೆಳವ ಸಸಿ

  ಬಾನೆರತ್ತರಕೆ ಬೆಳೆದು ಪಡೆವುದು ಜನ್ಮ ಸಾರ್ಥಕ್ಯವ

  ಶ್ರೀ ಗುರುವಿನ ಕೃಪಾಶೀರ್ವಾದ ಬಯಸಿ ಬಾಗುವ ಶಿಶು

  ಶಂಕರಾನುಗೃಹದಿ ಹೊಂದುವುದು ಮುಕ್ತಿ ಆತ್ಮ ಜ್ನಾನವ ಹೊಂದಿ….

  [Reply]

 18. Ganesh Bhat Madavu

  ಶಂಕರಾಚಾರ್ಯರ ಅಭಯದ ಕೈಗಳು ನಮ್ಮಲ್ಲಿ ಸುಜ್ಞಾನವನ್ನು ಸದಾ ಉದ್ದೀಪನಗೊಳಿಸಲಿ..ಹರೇರಾಮ

  [Reply]

Leave a Reply

Highslide for Wordpress Plugin