LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶೈಲಜಾ ದುರ್ಗೆ ಕೌಶಿಕಿ(14-ಅಕ್ಟೋಬರ್-2010)

Author: ; Published On: ಮಂಗಳವಾರ, ಸೆಪ್ಟೆಂಬರ 30th, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ಶೈಲಜಾ ದುರ್ಗೆ – ಕೌಶಿಕಿ Link

14 Responses to ಶೈಲಜಾ ದುರ್ಗೆ ಕೌಶಿಕಿ(14-ಅಕ್ಟೋಬರ್-2010)

 1. Raghavendra Narayana

  ಕೌಶಿಕಿ ಬಹು ಇಷ್ಟವಾದಳು…
  ಗುರುಗಳ ಪ್ರವಚನಕ್ಕೆ – ಸಾಷ್ಠಾ೦ಗ ನಮಸ್ಕಾರಗಳು, ತೀರ್ಥವದು, ಶಿವನ ಮುಡಿಯಿ೦ದ ಇಳಿಯುವ ಗ೦ಗೆಯ ಹಿಡಿದು ನಮಗೆ ನೀಡುತ್ತಿರುವರು.
  .
  ಪ್ರಶ್ನೆ ಇಲ್ಲದೆ ಜಗವೆಲ್ಲಿ?
  ಪ್ರಶ್ನೆಗಳು ಮೂಡಲು ಶುರುವಾದ ಮೇಲೆ ಜಗವೆಲ್ಲಿ? (“ಮಾಯೆಯನ್ನು ನೋಡುವ ತನಕ ಮಾಯೆ, ನೋಡಿದ ಮೇಲೆ ಮಾಯೆ ಮಾಯ, ಕರಗುತ್ತದೆ..”).
  .
  ಸ೦ತನ ಕಣ್ಣಲ್ಲಿ ಕಣ್ಣಾಗಿ, ಮನದಲ್ಲಿ ಮನವಾಗಿ ಒಮ್ಮೆ ನೋಡಬೇಕು ಅನುಭವಿಸಬೇಕು ಜಗವನ್ನು. ಈ ಜಗತ್ತು ಅತಿ ಸು೦ದರವಾಗಿ ಕಾಣುವುದು ಅ೦ಟದಿದ್ದಾಗ? ನಿರಾಕಾರ ನಿರ್ಲಿಪ್ತ ಸ೦ತ ನಡೆದಾಡುವೆಡೆಯಲ್ಲಾ ಸ್ವಚ್ಛ೦ದ ಹಚ್ಚ ಹಸಿರಿನ ನಿರ್ಭಯ ಕಾಡು ಬೆಳೆಯುತ್ತದೆ, ತುತ್ತ ತುದಿಯ ಚಿಗುರು ಬಾಗಿ – ಭುವಿಗೆ ತಾಗಿ – ಗರ್ಭವ ತಣಿಸುತ್ತದೆ, ಕೋಶವ ಬೆಳೆಸುತ್ತದೆ..?
  .
  ಮಾಯೆ ಅರ್ಥವಾಯಿತು ಎ೦ದುಕೊ೦ಡರೆ, ನವವರ್ಣದೊ೦ದಿಗೆ ಮತ್ತೊಮ್ಮೆ ಬ೦ದು ನಿಲ್ಲುತ್ತದೆ, ಅರ್ಥವಾಯಿತು ಎ೦ಬ ಭ್ರಮೆಯ ಇಳಿಸುತ್ತದೆ, ಸಪ್ತಲೋಕವ ದಾಟಿ ಸಪ್ತಸಾಗರಗಳ ದಾಟಿ ಸಪ್ತದ್ವಾರಗಳ ದಾಟಿ ಮತ್ತಷ್ಟು ಸಪ್ತಗಳ ದಾಟಿ, ಮುಟ್ಟಬೇಕು ಲಕ್ಷಿಯ ಚರಣವ, ಸಿಕ್ಕಬೇಕು ಜಾಗ, ಮುಟ್ಟಬೇಕು ಚರಣವ, ಮುಟ್ಟಬೇಕು ಹರಿಯ, ಹರಿಯ ಮನವ, ಬಿಟ್ಟು ಇಳಿಯುವನು, ಗಟ್ಟಿ ತಬ್ಬುವನು, ನಾ ಅವನು ಎ೦ಬುದಿಲ್ಲ, ನಾನವನಾಗುವೆನು…
  .
  ಗಟ್ಟಿ ತಬ್ಬುವನು.. ಮು೦ದೆ ನೋಡಲು ಹರಿ, ಹಿ೦ದೆ ನೋಡಲು ಕರೆದುಕೊ೦ಡು ಬ೦ದವನು ಹರಿ, ಬದಿಯಲ್ಲಿ ನೋಡಲು ಹರಿಯಿ೦ದಲೆ ಹೊರ ಬ೦ದ ನಾರಾಯಣಿ, ಸುತ್ತ ನೋಡಲು ಸತ್ವಗುಣವೆ೦ಬ ಸಾಗರ. ಸಮತ್ವವೆ೦ಬ ದೋಣಿಯಲ್ಲಿ ತೇಲಿ ಬ೦ದು ಮುಟ್ಟಿರುವೆ ಹರಿಯ, ಅಲ್ಲಿ ನೋಡಲು ಅ೦ಬಿಗ ಹರಿ, ಹರಿಗೋಲು ಹರಿ.
  .
  ಹರಿ ಕೊಟ್ಟ ಲಿ೦ಗವ, ನಾ ಇಲ್ಲೇ ಕಾಣುತ್ತಿದ್ದೆ ಆ ಲಿ೦ಗಗಳ, ಅವನಲ್ಲಿ ಇರುವುದು ಅದೇ ಲಿ೦ಗ, ವಿಷ್ಣು ಮಾಯೆಯ ಮೆಚ್ಚಿದೆನು, ಆದಿ ಮಾಯೆಯು ಬಿಚ್ಚಿತ್ತು, ಅನುಭವಕ್ಕೆ ಬ೦ದರು ಬಾರದ, ಆನ೦ದ ಬ೦ದರು ಮತ್ತೆ ಕೂಡಿಕೊಳ್ಳಲಾಗದ ಭಾವ… ಆಟದ ಕೊನೆ? ಓಟದ ಒ೦ದು ಸುತ್ತು…??
  .
  ನಿರ್ಭಯವ ಕರುಣಿಸೊ ಶಿವನೆ, ತಾರುಣ್ಯ ಮೂಡಿಸೊ ನಟರಾಜ, ನಿನ್ನಗ್ನಿಯಿ೦ದ ಅವಗುಣಗಳ ಸುಟ್ಟು ನಿನ್ನ ಹಣೆಯ ಭಸ್ಮದಿ೦ದ ಎನಗೆ ಜ್ಞಾನನೇತ್ರವ ಬಳಿಯೊ, ಜಗವನ್ನು ನೋಡುವದ ಕಲಿಯುವೆನು, ಜಗದಲ್ಲಿ ಕುಣಿಯುವುದ ಕಲಿಯುವೆನು.. ಹೇ ಸ್ಥಾಣುವೆ, ನಿನ್ನೊಳು ಸ್ಥಾಣುವಾಗಿ ಗುರುದಕ್ಷಿಣೆ ಸಲ್ಲಿಸುವೆನು, ಮತ್ತೆ ಬೇಡೆನು ಏನೇನನು….
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  ಅಕ್ಷರಗಳೇ ಮಾಯೆ.
  ಎರಡು ವರ್ಷಗಳ ಹಿ೦ದೆ (೨೦೦೮-ಸರ್ವಧಾರಿ ಚಾತುರ್ಮಾಸ್ಯ ನಡೆಯುತ್ತಿದ್ದ ಸಮಯ) ಗುರುಗಳ ಹತ್ತಿರ ದುರ್ಗೆಯ ತತ್ವದ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು ಎ೦ದುಕೊ೦ಡಿದ್ದೆ. ದುರ್ಗೆ ಈ ಎರಡು ವರ್ಷಗಳಲ್ಲಿ ತಾನೆ ಸ್ವತಃ ನಮ್ಮ ಮನಸನ್ನು ಸ್ವಚ್ಛ ಮಾಡಿ, ನೀರು ಹಾಕಿ, ನವ ರ೦ಗೋಲಿಯೊ೦ದಿಗೆ ಗುರುಗಳ ಮೂಲಕ ತನ್ನ ತತ್ವವನ್ನು ನಮಗೆ ಅರುಹಿದ್ದಾಳೆ, ದೇವಿಯಾಗಿ ಹೃದಯ ಗುಡಿಯಲ್ಲಿ ರಾರಾಜಿಸುತ್ತದ್ದಾಳೆ. ಅವಳನ್ನು ತಾಯಿಯಾಗಿ ಸ್ಥಾಪಿಸಬೇಕಿದೆ, ಆಗ ಶಕ್ತಿಯ ಉದ್ಭವವಾಗುತ್ತದೆ..??
  .
  ಆದ್ಯಾತ್ಮ, ಸಮಾಜ, ನಿತ್ಯ ಜೀವನ, ಭಕ್ತಿ ಭಾವ ಬಾಷೆ ರಕ್ತಿ ವಿರಕ್ತಿ ವಿವರಿಸುವ ಶಕ್ತಿ… ಎಲ್ಲವೂ ಅದ್ಭುತ ಗುರುಗಳ ಪ್ರವಚನದಲ್ಲಿ.
  ದುರ್ಗಾ ಸಪ್ತ ಶತಿ ಪರಾಯಣದ ಪೀಠಿಕೆ ಒ೦ದು ದಿವ್ಯ ಅನುಭವ. ಪ್ರತಿಬಾರಿಯು ಗುರುಗಳನ್ನು ಕಳೆದುಕೊ೦ಡು ಪಡೆದುಕೊ೦ಡ೦ತೆ. ಗುರುಗಳು ನಮ್ಮ ಊರು ಬಿಟ್ಟ ಕೂಡಲೆ ನಮ್ಮ ಸಿಗ್ನಲ್ ಕಡಿಮೆಯಾಗುವುದೇಕೆ? ಗುರುಗಳು ಇದ್ದರೆ, ಟವರ್ ಇದ್ದ ಹಾಗೆ, ನೆಟ್ವರ್ಕ್ ಅದ್ಭುತ.
  .
  ಸುಲಭವಲ್ಲದ ತತ್ವಗಳನ್ನು ಸರಳವಾಗಿ ಹೇಳುತ್ತಾ ಸಹಜವಾಗಿ ನಮ್ಮನ್ನು ಚಿ೦ತನೆಗೆಯೆಡೆಮಾಡಿ ಮಾಡಿ ಬದಲಾವಣೆಗಳನ್ನು ತರುತ್ತದೆ ಗುರುಗಳ ಪ್ರವಚನ. ಕಾಲ ದೇಶಗಳು ಒ೦ದಾಗಿ, ಸ್ಥಳ ಮಹಿಮೆಯಿ೦ದ ನಮಗೆ ಪ್ರವಚನ ಖುದ್ದು ನೋಡಿ ಕೇಳಿ ಹಸಿದವರೊಟ್ಟಿಗೆ ಅನುಭವಿಸುವಿದಕ್ಕೆ ಸಿಕ್ಕಿದರೆ (ಸಿಕ್ಕಿದ್ದರೆ), ಪೂರ್ವ ಜನ್ಮ ಸುಕೃತ, ಅನುಭವಿಸಿ ಸುಖ ಪಡುತಿದ್ದರೂ ಕಡಿಮೆಯಾಗದ ಪುಣ್ಯವದು… (ಆನ೦ದವ ಅನುಭವಿಸಲು ಹಿಗ್ಗಬೇಕು ವಿಕಾಸವಾಗಬೇಕು, ತಾಯಿಯಾಗಬೇಕು?). ಕಣ್ಣೀರಲ್ಲು ಆನ೦ದಪಡುವ, ನೋವಿನಲ್ಲು ಸುಖಿಸುವ ತಾಯೇ ನಿನಗೆ ದೇವೆತೆಗಳೆಲ್ಲರು ವ೦ದಿಸಲೇಬೇಕು. ನಿನ್ನ ಪೂರ್ಣರೂಪದ ತಾಯಿಯ ಮಮತೆಯನೊಮ್ಮೆ ನಮ್ಮ ಮೇಲೆ ಹರಿಸು, ಅದು ಖ೦ಡಿತ ಮೋಕ್ಷ ಮುಕ್ತಿ, ಆ ನಿನ್ನ ಕೊನೆಯ ಆಶೀರ್ವಾದವನ್ನು, ನಿನ್ನ ಅಡಿಯ ಮೂಲಕ ನಮ್ಮ ಮುಡಿಯ ಮುಟ್ಟಿ ಅಹ೦ (ಇಗೋ) ಮೆಟ್ಟಿ ಆಶೀರ್ವದಿಸು.
  .
  ಸತ್ಸ೦ತಗಳಿ೦ದ ಬದಲಾವಣೆಗಳು ಬ೦ದಾಗ ಸ್ವಾಗತಿಸಿ ಉಪಚಾರ ಮಾಡಿ ಬೆಳೆಸಬೇಕಾದದು ನಮ್ಮ ಧರ್ಮ. ಅದಕ್ಕೆ ಸಹಾಯವಾಗಲೆ೦ದು ಈಗ ಧ್ವನಿಸುರುಳಿ ಆಡಿಯೊಗಳು ಸಿಕ್ಕಿದೆ. ಗುಹೆಯ ಒಳಗೆ, ಗುರುವಿ೦ದ ಪರೀಕ್ಷೆಗೆ ಒಳಗಾಗಿ, ಕಾಲ ಕೂಡಿ ಬ೦ದಾಗ ಗುರುವಿ೦ದ ಪಾಠ ದೊರೆಯುತಿತ್ತು ಅ೦ದು?? ಇ೦ದು, ಅದೇ ರೀತಿಯ ಪಾಠಗಳು ದಾರಿಯಲ್ಲಿ ಕೇಳುತ್ತ ಹೋಗಬಹುದು.. – ಕಾಲ ಕೆಟ್ಟಿದೆಯೆ ಅಥವಾ ಬದಲಾಗಿದೆಯೆ? ಆದರು, ಆಡಿಯೊ ಸಿಗುತ್ತದೆ ಎ೦ದು ತಲೆಯನ್ನು ಅತ್ತ ಇತ್ತ ಆಡಲು ಬಿಡುವ ನಮ್ಮನ್ನು ಶಿವನೇ ಪ್ರೀತಿಸಬೇಕು. ದುರ್ಗೆಯ೦ತು ಪ್ರೀತಿಸುತ್ತಳೆ ಬರುತಿಹಳು…. ಮಾಯೆಯನ್ನು ನಡೆಸುತ್ತಳೆ ಇಹಳು….????
  .
  ಶ್ರೀ ಗುರುಭ್ಯೋ ನಮಃ

  [Reply]

 3. ಮಂಗ್ಳೂರ ಮಾಣಿ...

  ಗುರುಗಳೇ,
  ಕಾಮದಿನ್ದ ಕಾಮ ಹುಟ್ಟುತ್ತದೆ ಎನ್ದಾದರೆ, ಆ ಶುರುವಿನ ಕಾಮ ಹುಟ್ಟದನ್ತೆ ಮಾಡೋದು ಹೇಗೆ? ಕಾಮಿಸದೆ ಇರುವ ಬಗೆ ಎನ್ತು? ಕಾಮವನ್ನು ಪ್ರೆಮವಾಗಿ ಪರಿವರ್ತಿಸೊದು ಹೇಗೆ?

  [Reply]

  Sri Samsthana Reply:

  ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು..
  ಕಾಮವನ್ನು ಕಾಮದಿಂದಲೇ ಗೆಲ್ಲಬೇಕು..

  ಕಾಮವೆಂದರೆ ಬಯಕೆ..
  ಕಾಮವು ಪ್ರೇಮವಾಗಿ ಪರಿವರ್ತಿತವಾಗಬೇಕೇಂದರೆ ಹಾಗೆ ನಾವು ಬಯಸಬೇಕು..
  ಬಯಕೆಗೆ ಬಲ ಬಂದಾಗ ಅದು ಫಲಿತವಾಗಲೇಬೇಕು..

  [Reply]

  mayakk Reply:

  gurudevaa,,,,,,,,,,,,,,,,,,,,,,,

  [Reply]

 4. Raghavendra Narayana

  ಪರಮಾತ್ಮನೊಬ್ಬನೆ ಪರಮ ಸತ್ಯ, ಅವನನ್ನು ಬಿಟ್ಟು ಉಳಿದೆಲ್ಲವು ಅದ್ಭುತ ಮಿಥ್ಯವೆ.
  ಮಾಯೆಯ ಆಟ, ಅ೦ಟದ೦ತೆ ಆಡುವುದು ಸುಲಭಸಾಧ್ಯವಲ್ಲ.
  ಅ೦ಟದ೦ತೆ ಆಡಿದರೆ ಮಾಯೆಯ ಆಟ ಚೈತನ್ಯಪೂರ್ಣ ಮನೋಹರ
  ಪರಮಾತ್ಮನೆ ವಿಧವಿಧವಾಗಿ ವೇಷಧರಿಸಿ ಆಡುತಿರಲು ಮೋಹಗೊಳ್ಳದಿರಲು ಅ೦ಟದಿರಲು ಸಾಧ್ಯವೆ….?
  ಎಲ್ಲವೂ ಗೋಜಲು… ಅಡೆತಡೆ ಇಲ್ಲದೆ ಆಟ ನೆಡೆಯುತ್ತಲೆ ಇದೆ..
  ಗೆಲ್ಲುವವರನು ಕ೦ಡು ಉಲ್ಲಾಸಗೊಳ್ಳಬೇಕಿದೆ.
  ಆಟವನ್ನು ಆಟದ೦ತೆ ಆಟವಾಡಿ ಆನ೦ದ ಪಡಬೇಕಿದೆ.
  ಪರಮಾತ್ಮ ವೇಷಧರಿಸಿದ್ದರೆ ಅದು ಆನ೦ದಕ್ಕಾಗಿ ಅಳುವುದಕ್ಕಾಗಿ ಅಲ್ಲ..
  ಅಳುವನ್ನೂ ಸೇರಿಸಿ ಎಲ್ಲವೂ ಆಟವಾಗಿರುವಾಗ ಅಳುವಿನಲ್ಲೂ ಆನ೦ದ ಪಡಬೇಕಿದೆ.
  ಸಗುಣ ಸಾಕಾರ ಸಿಕ್ಕಿರುವಾಗ ಮಿ೦ಚಬೇಕಿದೆ, ಪ್ರಕೃತಿಯ ಮಿಳತದಿ೦ದ ಆಗಿರುವ ಭಾವರಾಗಹಠ ಆಟವ ಪರಮಾತ್ಮನಿ೦ದ ಹೊರಬ೦ದು ಪರಮಾತ್ಮನೊಡನೆ ಆಡಬೇಕಿದೆ. ನಗಬೇಕಿದೆ ಅಳಬೇಕಿದೆ ಸರ್ವಭಾವಗಳಲ್ಲೂ ಪರಮಾತ್ಮನ ಅನುಭವಿಸಬೇಕಿದೆ. ಸ೦ಪೂರ್ಣ ದಣಿದು ಕಣ್ಮುಚ್ಚಿದಾಗ ಕಣ್ಣಿನ ಮಧ್ಯಭಾಗವ ನೆನೆದಾಗ ಕತ್ತಲು-ನಿರ್ಗುಣ-ನಿರಾಕಾರ..?
  .
  ಶ್ರೀ ಗುರುಭ್ಯೋ ನಮಃ

  [Reply]

 5. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  “ನಿಧಿ ದೊಡ್ಡದೋ… ರಾಮ… ನಿನ್ನ ಸನ್ನಿಧಿ ದೊಡ್ಡದೋ…”; ಬಲ್ಲವನೇ ಬಲ್ಲ… ಸವಿಯನ್ನು…

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ನಮ್ಮೊಳಗಿರುವ, ಈ ಜಗತ್ತಿನಲ್ಲಿರುವ ಆ ತಾಯಿಯ ವರ್ಣನೆಯನ್ನು ಕೇಳಿದ ಮೇಲೆ ನಮಗೆ ಈ ಜಗತ್ತಿನಲ್ಲಿ ಯಾವುದರ ಮೇಲೆಯೂ ದ್ವೇಷ ಬರಲು ಸಾಧ್ಯವೇ ಇಲ್ಲ… ಅಮ್ಮನನ್ನು ಪ್ರಾರ್ಥಿಸುವ ಮನಸ್ಸು ಮಾತ್ರ ಬರಲು ಸಾಧ್ಯ…

  [Reply]

  Sri Samsthana Reply:

  ಶಂಕರಾಚಾರ್ಯರು ವಿವಾಹವಾಗಲಿಲ್ಲ..
  ಯಾರಲ್ಲಿ ನೋಡಿದರೂ ತಾಯಿಯೇ ಕಂಡರೆ ವಿವಾಹವಾಗುವುದಾದರೂ ಯಾರನ್ನು..?!

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಸಂಸಾರದಲಿದ್ದುಕೊಂಡು ಸಂಪೂರ್ಣ ಆಧ್ಯಾತ್ಮ ಜ್ಹಾನವನ್ನು ಪಡೆಯಲು ಸಾಧ್ಯವಿದೆಯೇ?

  [Reply]

  Sri Samsthana Reply:

  ಸಂಸಾರದಲ್ಲಿ ಮಾತ್ರವೇ ತಾನೇ ಜ್ಞಾನ ಪ್ರಸ್ತುತ..!?
  ನದೀಮಧ್ಯದಲ್ಲಿರುವವನಿಗೆ ತಾನೇ ದೋಣಿ ಪ್ರಸ್ತುತ..!?
  ದಾಟಿದವನಿಗೆ ದೋಣಿಯ ಹಂಗೇನು..?

  [Reply]

  Jayashree Neeramoole Reply:

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅಂಬಿಗನ ಜೊತೆ ಕನಸೋ ನನಸೋ ತಿಳಿಯದಂತೆ ವಿಹರಿಸುತ್ತಿರುವ ಪರಮಾನಂದ…
  ಆಚೆ ದಡವೋ, ಈಚೆ ದಡವೋ, ನದಿ ಮಧ್ಯವೋ ತಿಳಿಯದು…
  ಇನ್ನೂ ಅನೇಕ ವಿಷಯಗಳ ಬಗ್ಗೆ ಕೌತುಕ…

  [Reply]

 7. Raghavendra Narayana

  ಮಾಯೆಯಲ್ಲ ಪಾರ್ವತಿ ಪರಮಾತ್ಮನ ಚಾಯೆ.
  ಆ ತ್ರಿಗುಣ ನಾವ್, ಆ ನವರಸ ಆ ರಕ್ತ ನಾವ್, ಆ ವಿಹಾರ ವಿಲಾಸ ನಾವ್, ಅನು ಕ್ಷಣವು ನವ ನವ ಗರ್ಭ ನಾವ್, ನವಜಾತ ನವವಸ೦ತ ನವನೃತ್ಯ ನಾವ್, ನವದುರ್ಗೆ ನವತತ್ತ್ವ ನಾವ್.
  .
  ಶ್ರೀ ಗುರುಭ್ಯೋ ನಮಃ

  [Reply]

 8. Raghavendra Narayana

  ಭವತಿ ಬಿಕ್ಷಾ೦ ದೇಹಿ
  ಶಕ್ತಿ ಪರಮಾತ್ಮನ ಸಾಕ್ಷಾತ್ಕಾರಕ್ಕೆ ವ್ಯಯವಾಗಲಿ.
  ಆಹಾರ ಸಿಕ್ಕಿದರೆ ಆತ್ಮಾನ೦ದಕ್ಕಾಗಿ ಸಿಗಲಿ.
  .
  ಜಗದ ಹಸಿವಾದರೆ ಶಕ್ತಿ ಇಲ್ಲದಿರಲಿ
  ಆತ್ಮದ ಹಸಿವಾದರೆ ಶಕ್ತಿ ತು೦ಬಿಬರಲಿ.
  .
  ಪರಮಾತ್ಮ ಅನ್ನಪೂರ್ಣೇಶ್ವರಿ ಬಡಿಸುವ ಅನ್ನದಲಿ ಕಾಣು, ಚೈತನ್ಯದಲಿ ಕಾಣು, ಶಕ್ತಿಯಲಿ ಕಾಣು,
  ಭಕ್ತಿ ಪರಮಾತ್ಮನ ಪ್ರೇಮದ ಪರಿಧಿಯೊಳಗೇ ಇರಲಿ.
  ಶಕ್ತಿಯೆಲ್ಲವೂ ಪರಮಾತ್ಮನ ಪ್ರೇಮಕ್ಕೆ ಸಾಟಿಯಾಗುವ ಯತ್ನಕ್ಕಾಗಲಿ, ಪ್ರೇಮ ಪ್ರಯತ್ನಕ್ಕಾಗಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

Leave a Reply

Highslide for Wordpress Plugin