LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀ ಮೂಕಾಂಬಿಕಾ ಅಷ್ಟಕಮ್

Author: ; Published On: ರವಿವಾರ, ಜೂನ್ 16th, 2013;

Switch to language: ಕನ್ನಡ | English | हिंदी         Shortlink:

ವಿಶ್ವ ಜನನಿ ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನರಾಗಿರುವುದು ಕೊಡಚಾದ್ರಿಯ ಅಂದದ ಬೆಟ್ಟದ ಸಾಲಿನಲ್ಲಿ ಸೌಪರ್ಣಿಕಾ ನದಿಯ ದಡದಲ್ಲಿ; ಶಿವಶಕ್ತಿಯರಿಬ್ಬರೂ ಜ್ಯೋತಿರ್ಲಿಂಗ ರೂಪಿಯಾಗಿರುವ ಕೊಲ್ಲೂರಿನಲ್ಲಿ.
ಈ ಮಹಾಮಾತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಅವತಾರ.
ಜಗನ್ಮಾತೆಯ ಪಂಚಲೋಹದ ವಿಗ್ರಹವನ್ನು ಶ್ರೀ ಚಕ್ರದ ಮೇಲೆ ಸುಮಾರು ಸಾವಿರದ ಇನ್ನೂರು ವರ್ಷಕ್ಕೂ ಮೊದಲು ಶ್ರೀ ಶಂಕರಾಚಾರ್ಯರು ಸ್ಥಾಪನೆ ಮಾಡಿದ್ದರು.

ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆ ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನ.
ಈ ಪುಣ್ಯದಿನದಂದು ಜಗಜ್ಜನನಿಯ ನಾಮಸ್ಮರಣೆಯ ಮೂಲಕ ಕಳೆದು ಸಕಲ ಸೌಭಾಗ್ಯಗಳನ್ನು ಪಡೆಯೋಣ.
ಮಂಗಳರೂಪಿಯಾಗಿ ಮಂಗಳಕರಳಾದ ಅಮ್ಮ ಸಕಲರ ಕಷ್ಟ ಪರಿಹರಿಸಿ ಮಂಗಳವನ್ನು ಕೊಡಲಿ ಎಂಬ ಹಾರೈಕೆ.

ಶ್ರೀ ಮೂಕಾಂಬಿಕಾ ಅಮ್ಮನವರು

ಶ್ರೀ ಮೂಕಾಂಬಿಕಾ ಅಮ್ಮನವರು

~

ಶ್ರೀ ಗುರು ಸಂದೇಶ:

ವಿಶ್ವ ಜನನಿಯ ಜನ್ಮ ದಿನದ ಬಗ್ಗೆ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶಿಷ್ಯರಿಗೆ ಕೊಟ್ಟ ಸಂದೇಶ:
(2012 Audio)
[audio:DailyPravachana/janani_janisida_dinadandu.mp3]

~

ಮೂಕಾಂಬಿಕಾಷ್ಟಕಮ್ :

ಕೊಲ್ಲೂರಿನ ಮೂಕಾಂಬಿಕೆಯ ಸೌಂದರ್ಯ ವೈಭವದ ಕುರಿತಾಗಿ ಆದಿ ಗುರು ಶ್ರೀ ಶಂಕರಾಚಾರ್ಯರು ರಚಿಸಿರುವ ಕೃತಿಯೇ ಈ ಮೂಕಾಂಬಿಕಾಷ್ಟಕಮ್.
ಮೂಕಾಂಬಿಕೆಯ ರೂಪ ವರ್ಣನೆಯನ್ನು, ಮಹಿಮೆಯನ್ನು ಈ ಕೃತಿಯಲ್ಲಿ ವಿಶಷವಾಗಿ ಕಾಣಬಹುದು.

~
ರಚನೆ: ಶ್ರೀ ಶಂಕರಾಚಾರ್ಯರು
ಧ್ವನಿ: ದೀಪಿಕಾ ಭಟ್, ಬೆಂಗಳೂರು
Link:
https://soundcloud.com/deepikabangalore/mookambika-ashtakam
Play:

~

ಶ್ರೀಚಕ್ರಾಂಕಿತಬಿಂದುಮಧ್ಯನಿಲಯಾಂ ಪೀತಾಂಬರಾಲಂಕೃತಾಂ
ಶಂಖಂ ಚಕ್ರವರಾಭಯಂ ಚ ದಧತೀಂ ಬಾಲೇಂದುಮೌಳೀಂ ಶುಭಾಮ್ |
ಸಿಂಹಸ್ಯೋಪರಿಸಂಸ್ಥಿತಾಂ ತ್ರಿನಯನಾಂ ಮೂಕಾಸುರಚ್ಛೇದಿನೀಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೧॥

ಮೂರ್ಧಾಗ್ರಾಂಚಿತರತ್ನಮೌಲಿವಿಲಸತ್ ಪೂರ್ಣೇಂದುಬಿಂಬಾನನಾಂ
ಫಾಲೇ ಕುಂಕುಮಲಾಂಛನಾಂ ನಿಟಿಲಯೋರ್ಮಧ್ಯಸ್ಥಕಸ್ತೂರಿಕಾಮ್ |
ಕರ್ಣಾಲಂಕೃತರತ್ನರಾಜಿತಘನಶ್ರೀಚಕ್ರಯುಗ್ಮಾನ್ವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೨॥

ಕಾಮಾಕ್ಷೀಂ ಕರುಣೇಕ್ಷಣಾಂ ಪರಿಲಸತ್ ದಿವ್ಯಾಂಬಜನೈಃ ರಂಜಿತಾಂ
ನಾಸಾಯಾಂ ನವಮೌಕ್ತಿಕಾಂ ವಿದಧತೀಂ ಮಾಧುರ್ಯಗಾನಪ್ರಿಯಾಮ್ |
ಆದರ್ಶೋಪಮಕಾಂತಿಗಂಡಯುಗಲಾಂ ಹಾರಿದ್ರಚೂರ್ಣಾನ್ವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೩॥

ಬಿಂಬೋಷ್ಠೀಂ ನವಪೀಠಿಕಾರಸಲಸತ್ ಸೌಂದರ್ಯಮಾನಾಧರಾಂ
ಶ್ರೀಮದ್ದಾಡಿಮಬೀಜಕಾಂತಿದಶನಾಂ ಮಂದಸ್ಮಿತೇನಾನ್ವಿತಾಮ್ |
ಮಾಧುರ್ಯಾಕ್ಷರಸಂಯುತಾಂ ಸುಖಕರೀಂ ಮಾರೇಣ ಸಂಸೇವಿತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೪॥

ಯೈಃ ಷಡ್ಭಿರ್ವದನೈಃ ನಿಪೀತಸುಭಗಾಲಂಕಾರಪೀನಸ್ತನೀಂ
ಸ್ಕಂದಸ್ಯಾಮಿತತೇಜಸಃ ಸುಜನನೀಂ ಮಂದಾರಮಾಲಾಧರೀಮ್ |
ಮಧ್ಯೇ ಸೌಷ್ಠವರೋಮರಾಜಿತಿಲಕಾಂ ಗಂಭೀರನಾಭೀಹೃದಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೫॥

ನಾನಾರತ್ನವಿಚಿತ್ರಭೂಷಣಕರಾಂ ವಾಮೋರುಜಾನುದ್ವಯಾಂ
ಜಂಘಾಗ್ರಾಂಚಿತಹಂಸಕಾದಿಕರುಣೋದ್ಭೂಷಾ ವಿಶೇಷಾನ್ವಿತಾಮ್ |
ಇಂದ್ರಾದ್ಯಾಮರವೃಂದವಂದಿತಪದಾಂ ಭಕ್ತೇಷ್ಟದಾನವ್ರತಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೬॥

ಮಾಯಾಮಾಧವಮುಖ್ಯದೇವನಿಚಯೈಃ ಸಂಸೇವ್ಯಮಾನಾಂ ಶುಭಾಂ
ಮಾರಾರಾತಿವಧೂಟಿಕಾಂ ಶುಭಕರೀಂ ಆನಂದ ಸಂದಾಯಿನೀಮ್ |
ಸೌವರ್ಣಾಂಚಿತಲಿಂಗಮೂರ್ದ್ನಿಪತಿನಾ ಸಾರ್ಥಸ್ವಸಾನ್ನಿಧ್ಯಕಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್||೭॥

ಶ್ರೀ ವಾಣೀ ತುಹಿನಾದ್ರಿಜಾ ದಿತಿಸತೀ ಸ್ವಾಹಾಸ್ವಧಾನ್ವೇಷಿಣೀಂ
ಶ್ರೀಕಂಠಾದಿಸಮಸ್ತದೈವತಮುಖೈಃ ಸಂಪ್ರಾರ್ಥಿತಾಂ ಚಿನ್ಮಯೀಮ್ |
ಶ್ರೀಕಾಮೋದ್ಧತಮೂಕವಾಗ್ವಿಹತಿದಾಂ ಲಕ್ಷ್ಮೀಂ ಮಹಾಪೂರ್ವಿಕಾಂ
ಶ್ರೀಕೋಲಾಪುರವಾಸಿನೀಂ ಭಗವತೀಂ ಧ್ಯಾಯಾಮಿ ಮೂಕಾಂಬಿಕಾಮ್ ||೮॥

~*~

~

ಸೂ:

~*~

(ಸಂಗ್ರಹ: ಶ್ರೀದೇವಿ ವಿಶ್ವನಾಥ್, ಪುತ್ತೂರು)

7 Responses to ಶ್ರೀ ಮೂಕಾಂಬಿಕಾ ಅಷ್ಟಕಮ್

 1. dentistmava

  harerama
  impada swaradalli amma mookambikeya ashtakagalu moodibandive.shubhashayagalu deepikakka.dhanyavadagalu hareraama taanakke.
  harerama.

  [Reply]

 2. K....P....

  ಹರೇ ರಾಮ ! ಶ್ರೀಗುರುಭ್ಯೊ ನಮಃ
  ಇಂದು ಕೊಲ್ಲೂರು ಶ್ರೀ ಮೂಕಾಂಬಿಕೆ ಲೋಕೋದ್ಧಾರಕ್ಕಾಗಿ ಭೂಮಿಯಲ್ಲಿ ಅವತರಿಸಿದ ದಿನ. ಆಮ್ಮಾ !!! ಶ್ರೀ ಮಾತಾ ತ್ರಿದೇವಿಗೆ, ಮೂಕಾ೦ಬಿಕಾ ಆಮ್ಮನಿಗೆ , ಪ್ರಕೃತಿ-ಪುರುಷರಿಬ್ಬರೂ ಒ೦ದೆ ಸ್ಥಳದಲ್ಲಿ ಜ್ಯೋತಿರ್ಲಿಂಗವಾದ ಸತ್ಯಕ್ಕೆ ನನ್ನ ಹೃದಯ-ಸ್ಪರ್ಶಿ ನಮನ,ಶರಣು,ಶರಣು,ಶರಣು!

  ಈ ಶುಭ ದಿನದ೦ದು ತಾಯಿಯನ್ನು ಅ೦ತರ೦ಗದಲ್ಲಿ ನೆನೆ-ನೆನೆದು ಮಾತೆಯ ಸೇವೆಯನ್ನ ಮಾಡೋಣ !

  ಹರೇ ರಾಮ !

  [Reply]

 3. shyamala bhat.

  Hare raama. chennagi hadidlu.

  [Reply]

 4. pooja

  ಹರೇರಾಮ. ದೀಪಿಕಾ ಅವರು ಹಾಡಿದ ಸ್ತೋತ್ರ, ಕೇಳುವವರ ಹ್ರುದಯದಲ್ಲಿ, ಭಾವ ಭಕ್ತಿಗಳನ್ನು ತುಂಬವಂತೆ ಮಾಡಿತು. ಧನ್ಯವಾದಗಳು. ಹರೇರಾಮ.

  [Reply]

 5. DATTU, DOMBIVLI

  HARERAAMA,

  E HOTTU NAVELRU DHANYRU SHREE SHREE AVAR ANUGRAHDINDA.

  DATTU, DOMBIVLI

  [Reply]

 6. seetharama bhat

  ಹರೇರಾಮ್,

  ಹರೇರಾಮದಲ್ಲಿ ಮೂಕಾ೦ಬಿಕೆಯು ಸದಾ ಮಾತಾಡುತಿರಲಿ.
  ನಮಗದು ಅ೦ತರ೦ಗ ಬಹಿರ೦ಗದಳೆರಡರಲ್ಲೂ ಕೇಳುತಿರಲಿ

  [Reply]

 7. Prabhakar N. Rao

  It is really wonderful and sung very melodiously.
  I thank the whole team
  best wishes

  [Reply]

Leave a Reply

Highslide for Wordpress Plugin