ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ?
ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’.
ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು.

ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು ಕಡಿಮೆ ಎಂಬಂತೆ ಮುಂದಿನ ತಿಂಗಳಿಗೆ ತನ್ನ ಹೆಸರಿರಿಸಿದ. ಮಾತ್ರವಲ್ಲ, ಆ ತಿಂಗಳಲ್ಲೂ ಒಂದು ದಿನವನ್ನು ವೃದ್ಧಿಗೊಳಿಸಿದ. ಮೂವತ್ತೊಂದು ದಿನಗಳ ಆಗಸ್ಟ್ ತಿಂಗಳು ಚಾಲ್ತಿಯಲ್ಲಿ ಬಂದದ್ದು ಹೀಗೆ..!

ಪರಿಣಾಮವಾಗಿ, ಬಡಪಾಯಿ ಪೆಬ್ರವರಿ ತಿಂಗಳು ಎರಡು ದಿನಗಳನ್ನು ಕಳೆದುಕೊಂಡು ಇಪ್ಪತ್ತೆಂಟಕ್ಕೇ ನಿಂತು ಬಿಟ್ಟಿತು !
ನಾಚಿಕೆಗೇಡು..!!

ಕಾರಣವಿಷ್ಟೇ…
ಕಾಲನಿರ್ಣಯವಾಗಬೇಕಾದದ್ದು ಸೂರ್ಯಚಂದ್ರರ ಚಲನ-ವಲನಗಳ ಮೇಲೆಯೇ ಹೊರತು ವ್ಯಕ್ತಿಗಳ ಇಷ್ಟಾನಿಷ್ಟದ ಮೇಲಲ್ಲ
.

ಸಮಗ್ರ ಭಾರತೀಯ ಸಂಸ್ಕೃತಿಯನ್ನೇ ‘ಅಂಧಾನುಕರಣೆ’ ಎಂಬ ಒಂದೇ ಪದದಲ್ಲಿ ಹೀಗಳೆಯುವ ಪಾಶ್ವಾತ್ಯರೇ !!
ಈ ದೇಶದಲ್ಲಿಯೇ ವಾಸಿಸುವ ಅವರ ಮಾನಸ ಪುತ್ರರೇ !! ಕಣ್ತೆರೆದು ನೋಡಿ !!
ಭಾರತೀಯ ಕಾಲಗಣನೆ ಅದೆಷ್ಟು ವೈಜ್ಞಾನಿಕ. .!! ಅದೆಷ್ಟು ನಿಸರ್ಗ ಸಂವಾದಿ…!

ಪೂರ್ಣಿಮೆಯೆಂದರೆ,ಜುಲೈ-ಆಗಸ್ಟ್  ಗಳ ಹಾಗೆ ಹುಲು ಮಾನವರ ನಡುವಿನ ಒಡಂಬಡಿಕೆಯಲ್ಲ, ಖಗೋಳದಲ್ಲಿ ಅದಕ್ಕೆ ಆಧಾರವಿದೆ. ’ಮಾ’ ಎಂದರೆ ಚಂದ್ರ – ಪೂರ್ಣಿಮಾ ಎಂದರೆ ಚಂದ್ರ ಪೂರ್ಣ ನಾಗುವ ಸಮಯ.
ಗಗನದಲ್ಲಿ ಬೆಳಗುವ ಪೂರ್ಣಚಂದ್ರನೇ ‘ಪೂರ್ಣಿಮೆ’ಎಂಬ ವ್ಯವಹಾರಕ್ಕೆ ಆಧಾರ. ಅಮಾವಾಸ್ಯೆಯೆಂಬುದು ಯಾವ ದೊರೆಯ ಹೆಸರಲ್ಲ.

’ಅಮಾ’ ಎಂದರೆ ಚಂದ್ರನಿಲ್ಲದಾಗುವ ಸಮಯ. ಅಮಾವಾಸ್ಯೆಯೆಂಬ ವ್ಯವಹಾರಕ್ಕೆಚಂದ್ರನ ಅಭಾವವೇ ಆಧಾರ. ಚಂದ್ರನ ಒಂದೊಂದೇ ಕಲೆಗಳು ವೃದ್ಧಿಯಾದಂತೆ, ಕ್ಷಯಿಸಿದಂತೆ ಪ್ರಥಮ, ದ್ವಿತೀಯ ಮೊದಲಾದ ತಿಥಿಗಳು ಉಂಟಾಗುತ್ತವೆ.

ಸೂರ್ಯ ಸಿಂಹರಾಶಿಯಲ್ಲಿ ಸಂಚರಿಸುವ ಮೂವತ್ತು ದಿನಗಳಿಗೆ ಸಿಂಹಮಾಸ ಎಂದು ಹೆಸರು. ತಿಂಗಳ ಹುಣ್ಣಿಮೆಯಂದು ಚಂದ್ರ ಯಾವ ನಕ್ಷತ್ರದೊಂದಿಗೆ ಇರುತ್ತಾನೋ, ಆ ತಿಂಗಳ ಹೆಸರು ಆ ನಕ್ಷತ್ರದಿಂದಾಗಿ ಉಂಟಾಗುತ್ತದೆ.

ಉದಾಹರಣೆಗೆ:
ಯಾವ ತಿಂಗಳ ಹುಣ್ಣಿಮೆಯಂದು ಚಂದ್ರ ಚಿತ್ರಾ ನಕ್ಷತ್ರದೊಡನೆ ಇರುತ್ತಾನೆಯೋ, ಅದು ಚೈತ್ರಮಾಸ…!
ಹೀಗೆಯೇ ವಿಶಾಖಾ ನಕ್ಷತ್ರ ದೊಡನೆ ಇದ್ದರೆ ವೈಶಾಖ ಮಾಸ. ಜ್ಯೇಷ್ಠಾ ನಕ್ಷತ್ರದೊಡನೆ ಇದ್ದರೆ ಜ್ಯೇಷ್ಠ ಮಾಸ. ಅಶ್ವಿನಿ ನಕ್ಷತ್ರದೊಡನೆ ಇದ್ದರೆ, ಆಶ್ವೀನ ಮಾಸ. ಹೀಗೇ..

ನಮ್ಮ ಹುಣ್ಣಿಮೆ ಅಮಾವಾಸ್ಯೆಗಳನ್ನು ಆಕಾಶದಲ್ಲಿ ತೋರಿಸಬಹುದು, ಆದರೆ, ಜುಲೈ ಆಗಸ್ಟ್ ಗಳನ್ನು ಸ್ಮಶಾನಗಳಲ್ಲಿ -ಗೋರಿಗಳಲ್ಲಿ ಹುಡುಕಬೇಕಾದೀತು!!
ನಮ್ಮ ಚೈತ್ರ-ವೈಶಾಖಗಳಿಗೆ, ಸಿಂಹ-ಧನುರ್ಮಾಸ ಗಳಿಗೆ ಖಗೋಳದಲ್ಲಿ ಆಧಾರವಿದೆ. ಜನವರಿ ಫೆಬ್ರವರಿಗಳಿಗೆ ಆಧಾರವೆಲ್ಲೋ..?

ಭಾರತೀಯಕಾಲಗಣನೆ ಸೃಷ್ಟಿಯ ಮೇಲೆ ನಿಂತಿದೆ.
ಜುಲೈ-ಆಗಸ್ಟ್ ಗಳು ವ್ಯಕ್ತಿಗಳ ಮೇಲೆ ನಿಂತಿವೆ..!!

ಟೆಲಿಸ್ಕೋಪ್  ಗಳಂತಹ ಯಂತ್ರಗಳು ಬರುವುದಕ್ಕಿಂತ ಎಷ್ಟೋ ಮೊದಲು ಕುಳಿತಲ್ಲಿಂದಲೇ ಗ್ರಹಗತಿಗಳನ್ನು, ಗ್ರಹಣಗಳನ್ನು ಕರಾರುವಾಕ್ಕಾಗಿ ಅಳೆಯುತ್ತಿದ್ದ, ಮಾನವ ಜೀವನದ ಮೇಲೆ ಅವುಗಳು ಬೀರುವ ಪರಿಣಾಮವನ್ನು ನಿಖರವಾಗಿ ತಿಳಿಯುತ್ತಿದ್ದ, ನಮ್ಮ ಪೂರ್ವಜರ ಮೇಧಾಶಕ್ತಿಗೆ-ತಪಸ್ಸಿಗೆ ಅಪಚಾರವೆಸಗುತ್ತಿದ್ದೇವೆ .

ಹಾಗಲ್ಲವಾದರೆ……
ಪಂಚಾಂಗಗಳೇಕೆ  ಬೇಡ ? ಗ್ರೆಗೊರಿ ಕ್ಯಾಲೆಂಡರ್ ಗಳೇ ಏಕೆ ಬೇಕು ?
ಶಾಲಿವಾಹನ -ವಿಕ್ರಮ ಶಕೆಗಳು ಮರೆತವೇಕೆ ? ಕ್ರಿಸ್ತಶಕೆಯೇ ಎಲ್ಲೆಲ್ಲೂ ಮೆರೆಯುವುದೇಕೆ ?
ಖಂಡಿತವಾಗಿಯೂ ನಾವು ಕ್ರಿಸ್ತನ ವಿರೋಧಿಗಳೇನೂ ಅಲ್ಲ. ಆದರೆ..
ದೋಷಗಳಿದ್ದರೆ ಯಾವುದನ್ನಾದರೂ ಬಿಡಬಹುದು.. ಗುಣಗಳಿದ್ದರೆ ಯಾವುದನ್ನಾದರೂ ಸ್ವೀಕರಿಸಬಹುದು..
ಹಾಗಿಲ್ಲದಿದ್ದಲ್ಲಿ ಅದು ‘ಅಂಧಾನುಕರಣೆ’ ಎನಿಸಿ ಕೊಳ್ಳುತ್ತದೆ.

ಭಾರತೀಯ ಕಾಲಗಣನೆಯನ್ನು ಬಿಡುವಾಗ ಅದರಲ್ಲಿ ನಾವು ಕಂಡ ದೋಷವಾದರೂ ಏನು ? ಅನ್ಯಪದ್ಧತಿಗಳನ್ನು  ಆಶ್ರಯಿಸುವಾಗ ಅವುಗಳಲ್ಲಿ ಯಾವ ಗುಣವನ್ನು ಕಂಡೆವು ? ಇದಲ್ಲವೇ ಅಂಧಾನುಕರಣೆ..!!??
ಕಣ್ ತೆರೆದು ನೋಡೋಣವೇ ಸೂರ್ಯ-ಚಂದ್ರರನ್ನು ?
ವ್ಯಕ್ತಿ ಪೂಜೆಯನ್ನು ದಾಟಿ ಇನ್ನಾದರೂ ಸೃಷ್ಟಿ ಪೂಜೆಗೆ ತೊಡಗೋಣವೇ?

ಕಾಲಾಯ ತಸ್ಮೈ ನಮಃ

|| ಹರೇ ರಾಮ ||

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ?

ಜೂಲಿಯಸ್ ಸೀಜ಼ರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ.

ಅದೇ ಜುಲೈ.

ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ.

ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು.

ಮತ್ತೆ ಬಂದ, ಅಗಸ್ಟಿಸ್ ಸೀಜ಼ರ್ – ತಾನೇನು ಕಡಿಮೆ ಎಂಬಂತೆ ಮುಂದಿನ ತಿಂಗಳಿಗೆ ತನ್ನ ಹೆಸರಿರಿಸಿದ.

ಮಾತ್ರವಲ್ಲ, ಆ ತಿಂಗಳಲ್ಲೂ ಒಂದು ದಿನವನ್ನು ವೃದ್ಧಿಗೊಳಿಸಿದ.

ಮೂವತ್ತೊಂದು ದಿನಗಳ ಆಗಸ್ಟ್ ತಿಂಗಳು ಚಾಲ್ತಿಯಲ್ಲಿ ಬಂದದ್ದು ಹೀಗೆ,.

ಪರಿಣಾಮವಾಗಿ, ಬಡಪಾಯಿ ಪೆಬ್ರವರಿ ತಿಂಗಳು ಎರಡು ದಿನಗಳನ್ನು ಕಳೆದುಕೊಂಡು ಇಪ್ಪತ್ತೆಂಟಕ್ಕೇ ನಿತ್ತಿತು.

ಈ ಸಂಗತಿಯನ್ನು ಮೊಟ್ಟಮೊದಲ ಬಾರಿಗೆ ತಿಳಿದಾಗ,

ನಮ್ಮನ್ನು ನೋಡಿ ನಾವೇ ನಗುವಂತಾಯಿತು,.

ಕಾರಣವಿಷ್ಟೇ…

ಕಾಲನಿರ್ಣಯವಾಗಬೇಕಾದದ್ದು, ಸೂರ್ಯಚಂದ್ರರ ಮೇಲೆಯೇ ಹೊರತು ವ್ಯಕ್ತಿಗಳ ಇಶ್ಃಟಾನಿಷ್ಟದ ಮೇಲಲ್ಲ್.

ಸಮಗ್ರ ಭಾರತೀಯ ಸಂಸ್ಕೃತಿಯನ್ನೇ ಅಂಧಾನುಕರಣೆ ಎಂಬ ಒಂದೇ ಪದದಲ್ಲಿ ಹೀಗಳೆಯುವ ಪಾಶ್ವಾತ್ಯರು ಮತ್ತು ಈ ದೇಶದಲ್ಲಿಯೇ ವಾಸಿಸುವ ಅವರ ಮಾನಸ ಪುತ್ರರು,

ಕಣ್ತೆರೆದು ನೋಡಬೇಕಾದ ಸಂಗತಿಗಳು ಬಹಳ ಇದೆ.

ಉದಾಹರಣೆಗೆ ಭಾರತೀಯ ಕಾಲಗಣನೆಯನ್ನೇ ತೆಗೆದುಕೊಳ್ಳಿ..

ಅದೆಷ್ಟು ವೈಜ್ಞಾನಿಕ, ನಿಸರ್ಗ ಸಂವಾದಿ…?

ಹುಣ್ಣಿಮೆಯೆಂದರೆ, ಹುಲು ಮಾನವರ ನಡುವಿನ ಒಡಂಬಡಿಕೆಯಲ್ಲ.

ಖಗೋಳದಲ್ಲಿ ಅದಕ್ಕೆ ಆಧಾರವಿದೆ.

ಮಾ ಎಂದರೆ ’ಚಂದ್ರ’. ಪೂರ್ಣಿಮಾ ಎಂದರೆ ಚಂದ್ರ ಪೂರ್ಣ ನಾಗುವ ಸಮಯ.

ಅಮಾವಾಸ್ಯೆಯೆಂಬುದು ಯಾವ ದೊರೆಯ ಹೆಸರಲ್ಲ. ಅಮಾ’ ಚಂದ್ರನಿಲ್ಲದಾಗುವ ಸಮಯ.

ಚಂದ್ರನ ಒಂದೊಂದೇ ಕಲೆಗಳು ವೃದ್ಧಿಯಾದಂತೆ, ಕ್ಷಯಿಸಿದಂತೆ ಪ್ರಥಮ, ದ್ವಿತೀಯ – ತಿಥಿಗಳು ಉಂಟಾಗುತ್ತವೆ.

ಸೂರ್ಯ ಸಿಂಹರಾಶಿಯಲ್ಲಿ ಸಂಚರಿಸುವ ಮೂವತ್ತು ದಿನಗಳಿಗೆ ಸಿಂಹಮಾಸ ಎಂದು ಹೆಸರು.

ಯಾವ ತಿಂಗಳ ಹುಣ್ಣಿಮೆಯಂದು ಚಂದ್ರ ಕೃತ್ತಿಕಾ ನಕ್ಷತ್ರದ ಒಡನೆ ಇರುತ್ತಾನೆಯೋ, ಅದು ಕಾರ್ತಿಕ ಮಾಸ.

ಅಶ್ವಿನಿ ನಕ್ಷತ್ರದೊಡನೆ ಇದ್ದರೆ, ಆಶ್ವೀನ ಮಾಸ.

ಚಿರಾ ನಕ್ಷತ್ರದೊಡನೆ ಇದ್ದರೆ ಚೈತ್ರಮಾಸ.

ಹೀಗೇ..

ನಮ್ಮ ಕಾಲಗಣನೆ ಸೃಷ್ಟಿಯ ಮೇಲೆ ನಿಂತಿದೆಯೇ ಹೊರತು ವ್ಯಕ್ತಿಗಳ ಮೇಲಲ್ಲ.

ಹುಣ್ಣಿಮೆ ಅಮಾವಾಸ್ಯೆಗಳನ್ನು ಆಕಾಶದಲ್ಲಿ ತೋರಿಸಬಹುದು.

ಆದರೆ,

ಜುಲೈ ಆಗಸ್ಟ್ ಗಳನ್ನು ಸ್ಮಶಾನಗಳಲ್ಲಿ -ಗೋರಿಗಳಲ್ಲಿ ಹುಡುಕಬೇಕಾದೀತು!!

ನಾವೇಕೆ ಹೀಗಾದೆವು?

ನಮ್ಮ ಕಾಲಗಣನೆ ವಿಶ್ವದಲ್ಲಿಯೇ ಅತಿ ಪುರಾತನ.

ಆದರೆ, ನಿತ್ಯ ನೂತನ.

ಸಂಪೂರ್ಣ ವೈಜ್ಞಾನಿಕವಾದ ಸೃಷ್ಟಿ ಸಹಜವಾದ ಕಾಲ ನಿರ್ಣಯ ನಮ್ಮದು.

ಕುಳಿತಲ್ಲಿಂದಲೇ ಗ್ರಹಗತಿಗಳನ್ನು, ಗ್ರಹಣಗಳನ್ನು ಕರಾರುವಾಕ್ಕಾಗಿ ಅಳೆಯುತ್ತಿದ್ದ,

ಮಾನವ ಜೀವನದ ಮೇಲೆ ಅವುಗಳು ಬೀರುವ ಪರಿಣಾಮವನ್ನು ನಿಖರವಾಗಿ ತಿಳಿಯುತ್ತಿದ್ದ,

ನಮ್ಮ ಪೂರ್ವಜರ ಮೇಧಾಶಕ್ತಿಯ ಪ್ರತೀಕವೇ ಆಗಿರುವ,

ಪಂಚಾಂಗಗಳನ್ನೇಕೆ ನಾವು ಮರೆತೆವು?

ನಾವು ಖಂಡಿತವಾಗಿಯೂ ಕ್ರಿಸ್ತನ ವಿರೋಧಿಗಳೇನೂ ಅಲ್ಲ,

ಆದರೆ,

ಈ ಮಣ್ಣಿನ ಮಕ್ಕಳಾದ ಶಾಲಿವಾಹನ ವಿಕ್ರಮರ ಯಾವ ತಪ್ಪಿಗಾಗಿ ಅವರ ಹೆಸರಿನ ಶಕೆಗಳನ್ನು ನಾವು ಬಿಟ್ಟುಬಿಟ್ಟೆವು?

ಚಿಕ್ಕಂದಿನಲ್ಲಿ ನಿತ್ಯವೂ ಹೇಳಬೇಕಾಗಿದ್ದ ಬಾಯಿಪಾಟದ ನೆನಪು…

೧. ಪಾಡ್ಯ- ಯುಗಾದಿ ಪಾಡ್ಯ, ೨. ಬಿದಿಗೆ- ಭಾವನ ಬಿದಿಗೆ, ೩. ತದಿಗೆ – ಅಕ್ಷತ್ತದಿಗೆ ೪. ಚೌತಿ – ವಿನಾಯಕನ ಚೌತಿ.

ಪಂಚಮಿ – ನಾಗರ ಪಂಚಮಿ

೬ ಷಷ್ಟಿ – ಚಂಪಾ ಷಷ್ಠಿ,

೭ ಸಪ್ತಮಿ – ರಥ ಸಪ್ತಮಿ

೮ ಅಷ್ಟಮಿ – ಗೋಕುಲಾ

೯ ನವಮಿ -ರಾಮ

೧೦ ದಶಮಿ – ವಿದ್ಯಾ

೧೧. ಪ್ರಥಮ ಏಕಾದಶಿ

೧೨ ಉತ್ಥಾನ

೧೩ ಖನಿ

೧೪ ಅನಂತನ

೧೫ ನೂಲ ಹುಣ್ನಮೆ

ಎಳ್ಳಮಾವಾಸ್ಯೆ

ಭಾರತೀಯ ಸಂಸ್ಕೃತಿಯಲ್ಲಿ ಭಗವತ್ಸೇವೆಗೆ ಯೋಗ್ಯವಲ್ಲದ ದಿನವೇ ಇಲ್ಲ.

ವಾರಕ್ಕೊಮ್ಮೆ ಪ್ರಾರ್ಥನೆ ಮಾಡುವ ಸಂಸ್ಕೃತಿ ನಮ್ಮದಲ್ಲ.

ಇಲ್ಲಿ ಎಲ್ಲ ದಿನಗಳೂ ಹಬ್ಬವೇ..

ಸ್ವಾಮಿ ಶಿವಾನಂದರ ಆಶ್ರಮದಲ್ಲಿ ನಡೆದ ಒಂದು ಘಟನೆ:

ಸಂಸಾರದಲ್ಲಿ ವಿರಕ್ತಿಯನ್ನು ತಾಳಿ ಸನ್ಯಾಸವನ್ನು ಬಯಸಿ ಅನೇಕ ಶಿವಾನಂದರ ಬಳಿ ಬರುತ್ತಿದ್ದರು.

ಹಾಗೆ ಬಂದವರಿಗೆ ಶಿವಾನಂದರು ಒಮ್ಮೆಲೇ ಸನ್ಯಾಸ ದೀಕ್ಷೆ ಕೊಡುತ್ತಿರಲಿಲ್ಲ.

ಕೆಲ ಕಾಲ ಇಂಥವರನ್ನು ಪ್ರೊಬೆಷನರಿಗಳಾಗಿ ಇರಿಸಿ ಪರೀಕ್ಷಿಸಿ ವೈರಾಗ್ಯವನ್ನು ಧೃಡಪಡಿಸಿಕೊಂಡು ಮತ್ತೆ ಸನ್ಯಾಸವನ್ನು ನೀಡುತ್ತಿದ್ದರು.

ಕ್ಷಣಿಕ ಆವೇಶದಲ್ಲಿ ಮನೆಯವರ ಮೇಲೆ ಕೋಪಗೊಂಡು ಮನೆಬಿಟ್ಟು ಬಂದವರು ಆರು ತಿಂಗಳಾಗುವಾಗ ಮನೆಯ ಉಪಿನಕಾಯಿ ನೆನಪಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಮರ್ಳುವುದು ಸಾಮಾನ್ಯ ಸಂಗತಿಯಾಗಿದೆ.

ಆಶ್ರಮವಾಸಿಗಳೆಲ್ಲರೂ ಬೆಳಗಿನ ಜಾವ ನಾಲಕ್ಕು ಗಂಟೆಗೆ ಏಳಬೇಕೆಂಬ ನಿಯಮವಿದ್ದಿತು.

ಒಂದು ಭಾನುವಾರ ಏಳುಗಂಟೆಯಾದರೂ ಏಳದೇ ಮಲಗಿದ್ದ ಯುವಕನೊಬ್ಬನನ್ನು ಸ್ವತಃ ಸ್ವಾಮಿ ಶಿವಾನಂದರೇ ಎಬ್ಬಿಸಿದರು.

ನಿದ್ರೆಯ ಸವಿಯನ್ನು ತೊರೆಯಲೊಲ್ಲದ ಯುವಕ ಶಿವಾನಂದರಿಗೆ ನಿದ್ದೆಗಣ್ಣಿನಲ್ಲಿಯೇ ಹೇಳುತ್ತಾನೆ ’ಟುಡೇ ಈಸ್ ಹಾಲಿಡೇ, ಪ್ಲೆಅಸೆ ಲೆತ್ ಮೆ ಸ್ಲೀಪ್’…!

ಶಿವಾನಂದರು ಉತ್ತರಿಸಿದರು – ಥೆರೆ ಅರೆ ನೊ ಹೊಲಿದಯ್ಸ್, ಎವೆರ್ಯ್ದಯ್ ಇಸ್ ಹೊಲಿ ದಯ್.

ಹಾಲಿಡೇ ಮೋಜಿನಲ್ಲಿ ಮೈಮರೆತ ಇಂಡಿಯನರು (ಭಾರತೀಯರ)..

ಭಾರತದ ಹೋಲಿಡೇ ಗಳ ತಿರುಗಿ ನೋಡುವುದೆಂದು?

Facebook Comments