ನ್ಯಾಯಾಲಯವೊಂದರ ಆವರಣದಲ್ಲಿ ಹತಭಾಗ್ಯಳಾದ ತಾಯಿಯೊಬ್ಬಳು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳ ಕಾಲನ್ನೇ ಹಿಡಿದು ಹೊರಳಾಡುವ, ಕಗ್ಗಲ್ಲೂ ಕರಗಿ ಕಣ್ಣೀರಾಗಿ ಹರಿಯುವಂತೆ ರೋದಿಸುವ ಹೃದಯವಿದಾರಣ ದೃಶ್ಯವೊಂದನ್ನು ನೋಡಿಬಿಟ್ಟೆವು. “ಮಗಳೇ! ನನ್ನ ಮಗಳೇ! ನನ್ನ ಚಿನ್ನವೇ! ನನ್ನನ್ನು ಬಿಟ್ಟು ಹೋಗಬೇಡಾsssss” ಎಂದು ಕೊರಳೊಡೆದು ಆಕೆ ಒರಲುವಾಗ ಭೂಮಿತಾಯಿಯ ಎದೆಯೇ ಬಿರಿದಿರಬೇಕು!! ಆ ಕ್ಷಣದಿಂದ ಈ ಕ್ಷಣದವರೆಗೆ ಆ ತಾಯಿಯ ಕರುಳು ಹರಿಯುವ ಕೂಗು ಕಿವಿಯನ್ನು ಬಿಟ್ಟು ಕದಲುತ್ತಿಲ್ಲ! ಹುಣವಿ ಚಂದಿರನ ಹೆಣವ ನೆನಪಿಸುವ ಆಕೆಯ ಮ್ಲಾನವದನ ಕಣ್ಣಿನಿಂದ ಮಾಸುತ್ತಿಲ್ಲ! #LokaLekha by @SriSamsthana SriSri RaghaveshwaraBharati MahaSwamiji

ಲವ್-ಜಿಹಾದ್ ಎಂಬ ಭೂತ ಹಿಡಿದು ಮತಿಮಾಸಿದ ಮಗಳ ತಾಯಿಯವಳು; ಮಗಳನ್ನು ಹೆತ್ತ ತಪ್ಪಿಗೆ ಆಕೆ ಇಂದು ಅತ್ತು ಅತ್ತು ಬದುಕುತ್ತಿದ್ದಾಳೆ, ಅಲ್ಲಲ್ಲ, ಸತ್ತು ಸತ್ತು ಬದುಕುತ್ತಿದ್ದಾಳೆ! ವಿಪರ್ಯಾಸವೆಂದರೆ ಲವ್ ಜಿಹಾದ್ ಎಂಬ ಪ್ರೇಮಪಿಶಾಚಿಯು ಹಿಡಿಯುವುದು ಮಕ್ಕಳನ್ನು; ಆದರೆ ರೋದಿಸುವುದು ತಾಯ್ತಂದೆಯರು!

“ವಿಶ್ವವಂದ್ಯೇನ ಯತಿನಾ ಪ್ರಸೂಃ ವಂದ್ಯಾ ಪ್ರಯತ್ನತಃ” – ಸರ್ವಸಂಗಪರಿತ್ಯಾಗಿಯಾಗಿ, ವಿಶ್ವಕ್ಕೇ ವಂದ್ಯನಾಗುವ ಯತಿಯೂ ತನ್ನ ತಾಯಿಯ ಪಾದಾಭಿವಂದನವನ್ನು ಮಾಡಬೇಕೆಂದು ಶಾಸ್ತ್ರಗಳು ವಿಧಿಸುತ್ತವೆ! ಆದರೆ ಇಲ್ಲಿ ಹೆತ್ತ ತಾಯಿಯೇ ಹೊಟ್ಟೆಯಲ್ಲಿ ಹುಟ್ಟಿದ ಮಗಳ ಕಾಲು ಹಿಡಿದು ಹೊರಳಾಡುವುದನ್ನು ಕಂಡು ಒಂದು ಕ್ಷಣ ಇಂಥ ಮಕ್ಕಳು ಯಾಕಾದರೂ ಹುಟ್ಟುವರೋ ಎನ್ನಿಸಿದ್ದು ಸುಳ್ಳಲ್ಲ!

ಹೆಣ್ಣುಹೆತ್ತವರೇ!, ಮಕ್ಕಳ ಮೇಲೆ ಎಡೆಬಿಡದೆ ಕಾಯುವ ಕಣ್ಣಿಡಿ; ವಾತ್ಸಲ್ಯದ ಜೊತೆಗೆ ಎಚ್ಚರವೂ ಇರಲಿ. ಕೈ ಬಿಡದಿರಿ. ಎಚ್ಚರದ ಕಣ್ಮುಚ್ಚಿದರೆ, ಮಕ್ಕಳ ಕೈಬಿಟ್ಟರೆ – ಒಂದು ದಿನ ಕಾಲನ್ನೇ ಹಿಡಿಯುವ ಪರಿಸ್ಥಿತಿ ಬಂದೀತು!!

Heart Breaking: Love Jihad Victim Mother Begging And Crying For Her Daughter And Holding Her Feet To Get Back Her Girl

ತಾಯಿಯ ಪ್ರೀತಿಯನ್ನು, ತಾಯಿಧರ್ಮದ ಪ್ರೀತಿಯನ್ನು, ಕೊನೆಗೆ ತಾಯ್ನಾಡಿನ ಪ್ರೀತಿಯನ್ನೂ ಛಿದ್ರಗೊಳಿಸುವ ಲವ್ ಜಿಹಾದ್ ನಿಜವಾದ ಲವ್`ನ ಮೇಲೆಯೇ ಸಾರಿದ ಜಿಹಾದ್!

ತಾಯ್ತಂದೆಯರು ನಮಗೆ ಜೀವನವಿತ್ತ ದೇವರು. ಅವರ ಪ್ರೀತಿ-ತ್ಯಾಗ-ನೋವುಗಳ ಅಡಿಪಾಯದ ಮೇಲೆ ನಮ್ಮ ಬದುಕಿನ ಸೌಧವು ನಿಂತಿದೆ! ತಾಯ್ತಂದೆಯರಿಗಾಗಿ ರಾಜ್ಯವನ್ನೇ ತ್ಯಜಿಸಿದ ರಾಮನ ಮಾತು ಕೇಳಿ: ‘ತಾಯಿ~ತಂದೆ~ಗುರುಗಳು ಕಣ್ಣಿಗೆ ಕಾಣುವ ದೇವರುಗಳು; ಅವರನ್ನು ಉಪೇಕ್ಷಿಸಿ-ನೋಯಿಸಿ ಗೈವ ಕಾಣದ ದೇವರುಗಳ ಪೂಜೆಗಳಿಗೆ ಅರ್ಥವೇ ಇಲ್ಲ!’. ನಮ್ಮ ಸುಖಕ್ಕಾಗಿ ತಮ್ಮ ಸುಖವನ್ನು ಬಲಿ ಕೊಟ್ಟ ನಮ್ಮ ಕಾರಣ ಪುರುಷರನ್ನು, ಇದೀಗ ಬಂದ ಮಾಯಾ ಪುರುಷನು ನೀಡುವ ಕ್ಷುಲ್ಲಕ-ಕ್ಷಣಿಕ-ಪರಿಣಾಮಕಂಟಕವಾದ ಸುಖಕ್ಕಾಗಿ ಕಸದ ಬುಟ್ಟಿಗೆ ಎಸೆದು ಬಿಡುವುದೇ!! ನಮ್ಮನ್ನು ಈ ಮಣ್ಣಿಗೆ ತಂದವರ ಪ್ರೀತಿಯನ್ನು ಮಣ್ಣು ಪಾಲು ಮಾಡಿ, ಅವರನ್ನು ನೋವಿನ ನಿತ್ಯ ನರಕಕ್ಕೆ ದೂಡಿ ಪಡುವ ಅಂಥ ಸುಖಕ್ಕೆ ನಮ್ಮ ಧಿಕ್ಕಾರ!! #LokaLekha by @SriSamsthana SriSri RaghaveshwaraBharati MahaSwamiji

ಲವ್ ಜಿಹಾದಿನ ಮೂಲ ಉದ್ದೇಶವೇ ಮತಾಂತರ; ಅದು ನಮ್ಮ ಧರ್ಮಕ್ಕೇ  ಗಂಡಾಂತರ! ಮತಾಂತರಕ್ಕಾಗಿ ಎಷ್ಟು ಹತ್ಯೆಗಳು; ಹಲ್ಲೆಗಳು! ಅದೆಷ್ಟು ಹಿಂಸೆಗಳು; ಮಾನಭಂಗಗಳು; ಪ್ರಾಣಭಂಗಗಳು! ಮೂರು ಪವಿತ್ರ ಸಾಗರಗಳು ಕಣ್ಣಿಗೆ ಕಾಣುವಂತೆ ಭಾರತವನ್ನು ಸುತ್ತುವರೆದಿವೆ; ಮತಾಂತರಕ್ಕಾಗಿ ಭಾರತದಲ್ಲಿ ಹರಿದ ಭಾರತೀಯರ ರಕ್ತವು ನಾಲ್ಕನೆಯ ಸಾಗರವಾಗಿ ಭಾರತ ಮಣ್ಣಿನಲ್ಲಿ ಇಂಗಿ ಹೋಗಿದೆ! ಇಷ್ಟಾಗಿಯೂ ಅನ್ಯ ಮತಗಳ ರಕ್ತಾಕಾಂಕ್ಷಿಗಳಿಗೆ ತೃಪ್ತಿಯಿಲ್ಲ! ಕೊನೆಯ ಕಾಫಿರನು(ನಾವು-ನೀವು!) ಮುಸಲ್ಮಾನನಾಗುವವರೆಗೆಗೂ ಆ ರಕ್ತಾಕಾಂಕ್ಷೆಯು ಹಿಂಗುವುದೂ ಇಲ್ಲ!

ಭಾರತದಲ್ಲಿ ಸುಮಾರು 17 ಕೋಟಿ ಮುಸಲ್ಮಾನರಿದ್ದಾರೆ; ಇವರಲ್ಲಿ ಯಾರೊಬ್ಬರೂ ಮೂಲ ಮುಸಲ್ಮಾನರಲ್ಲ! ಪಾಕಿಸ್ಥಾನದಲ್ಲಿ  ಸುಮಾರು 20 ಕೋಟಿ ಮುಸಲ್ಮಾನರಿದ್ದಾರೆ; ಇವರಲ್ಲಿ ಯಾರೊಬ್ಬರೂ ಮೂಲತಃ ಮುಸಲ್ಮಾನರಲ್ಲ! ಬಾಂಗ್ಲಾದಲ್ಲಿ 15 ಕೋಟಿ ಮುಸಲ್ಮಾನರಿದ್ದಾರೆ; ಅಫ್ಘಾನಿಸ್ತಾನದಲ್ಲಿ 3 ಕೋಟಿ 30 ಲಕ್ಷ ಮುಸಲ್ಮಾನರಿದ್ದಾರೆ; ಮೊದಲು ಭಾರತದ ಭಾಗವೇ ಆಗಿದ್ದ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಇನ್ನಷ್ಟು ಕೋಟಿ ಮುಸಲ್ಮಾನರಿದ್ದಾರೆ; ಇವರೆಲ್ಲರೂ ಒಂದು ಕಾಲದಲ್ಲಿ ನಮ್ಮವರೇ! ಆದರೆ ಬಲಾತ್ಕಾರದ ಮತಾಂತರಕ್ಕೆ ಒಳಗಾಗಿ ಪರಕೀಯರಾದವರು! ಪುರುಷನಾದರೆ ಬಲಾತ್ಕಾರದ ಗೋಮಾಂಸಭಕ್ಷಣ; ಸ್ತ್ರೀಯಾದರೆ ಮಾನಭಂಗ! ಇವು ಮತಾಂತರದ ರಕ್ಕಸ ವಿಧಾನಗಳು!

ಹೌದು, ಮತಾಂತರಕ್ಕೊಳಗಾದವರು ಪರಕೀಯರೇ ಆಗುತ್ತಾರೆ; ದೇಶದ್ವೇಷಿಗಳಾಗುತ್ತಾರೆ; ಧರ್ಮದ್ರೋಹಿಗಳಾಗುತ್ತಾರೆ! ಅವರು ಈ ದೇಶದಲ್ಲಿದ್ದರೂ ಅವರ ನಿಷ್ಠೆ ‘ಆ’ ದೇಶದಲ್ಲಿರುತ್ತದೆ; ಅಂಥವರ ಸಂಖ್ಯೆ ಹೆಚ್ಚಾದಾಗ ದೇಶವೇ ಹರಿದು ಚೂರಾಗುತ್ತದೆ! ಹೀಗೆ ಒಡೆದು ಬೇರೆಯಾದ ದೇಶಗಳು ನಮ್ಮ ದೇಶದ ಪರಮಶತ್ರುಗಳಾಗಿ ಮಾರ್ಪಾಡಾಗುತ್ತವೆ. ಇದಕ್ಕೆ ಜ್ವಲಂತ ಉದಾಹರಣೆಯೇ ಪಾಕಿಸ್ಥಾನ!

ಆದುದರಿಂದಲೇ ‘ಯಾರೋ ಯಾರನ್ನೋ ಮದುವೆಯಾದರೆ ಆಗಲಿ ಬಿಡಿ, ನಿಮ್ಮದೇನು ಹೋಯಿತು?’ ಎಂದು ಕೇಳುವಂತಿಲ್ಲ. ಲವ್ ಜಿಹಾದ್ ಎಂದರೆ ಅದು ಯಾವುದೋ ಒಂದು ವ್ಯಕ್ತಿಯ ಜೀವನಸಂಗಾತಿಯ ಆಯ್ಕೆಯ ಪ್ರಶ್ನೆಯೋ, ಒಂದು ಕುಟುಂಬದೊಳಗಿನ ಮದುವೆ ಸಮಾಚಾರವೋ ಮಾತ್ರವಲ್ಲ; ಅದು ಧರ್ಮದ್ರೋಹದ, ದೇಶನಾಶದ ಮಹಾಷಡ್ಯಂತ್ರ! ಅದೊಂದು ವ್ಯಕ್ತಿಯ, ಕುಟುಂಬದ ಪ್ರಶ್ನೆ ಅಲ್ಲವೇ ಅಲ್ಲ; ಅದು ಸಂಸ್ಕೃತಿಯ ಸತ್ತೆಯ ಪ್ರಶ್ನೆ; ಅದು ದೇಶದ ಭದ್ರತೆಯ ಪ್ರಶ್ನೆ; ಭವಿಷ್ಯದ ಪ್ರಶ್ನೆ!

ಸೀತೆಗೆ ಚೆಲುವು ಚೆಲುವಾದ ಮಾಯಾಮೃಗ ಕಾಣಿಸಿತು; ಅದರೊಳಗಿನ ಮಾರೀಚ ಕಾಣಲೇ ಇಲ್ಲ! ಇನ್ನು ಆಗ ಸೂತ್ರಧಾರನಾದ ರಾವಣನು ಕಾಣಿಸುವುದು ಬಲು ದೂರದ ಮಾತಾಯಿತು! ಕಂಡಾಗ ಎಲ್ಲವೂ ಕೈಮೀರಿತ್ತು!

ಪೊಳ್ಳು ಪ್ರೇಮದ ಪೊರೆ ಬಂದು ಕುರುಡಾದ ನಮ್ಮ ಹೆಣ್ಣುಮಕ್ಕಳ ಕಣ್ಣಿಗೆ ಕಾಣುವುದು ‘ಲವ್’ ಮಾತ್ರ; ಅದರ ಹಿಂದಿರುವ ‘ಜಿಹಾದ್’ ಅವರಿಗೆ ಕಾಣಿಸುವುದೇ ಇಲ್ಲ! ಚೆಂದದ ಮುಖದ ಬಣ್ಣದ ಮಾತುಗಳ ಮುಖವಾಡದ ಹಿಂದಿರುವ ಭಯಂಕರ ರಾಕ್ಷಸನ ಕಲ್ಪನೆಯೇ ಅವರಿಗಿರುವುದಿಲ್ಲ! ಹಿಂದೂ ಧರ್ಮವನ್ನು ಹೀನಾಯವಾಗಿ ಹಳಿದು, ಮೋಹದ ಮದುವೆಗಾಗಿ ಇಸ್ಲಾಮಿಗೆ ಮತಾಂತರಗೊಂಡ ಹೀನಾಳ ದಾರುಣ ಕಥೆಯನ್ನು ಆಕೆಯನ್ನು ಕಟ್ಟಿಕೊಂಡ, ಬಳಿಕ ಕೆಡಿಸಿ ಕೊಂದ, ಆಕೆಯ ಪ್ರಿಯಕರನ ಬಾಯಿಯಿಂದಲೇ ಕೇಳಿ!

ಈ ಪರಿಯ ಹೀನಾಯವಾದ ಸಾವನ್ನು ಸಾಯುವ ಬದಲು ಧರ್ಮಕ್ಕಾಗಿ, ದೇಶಕ್ಕಾಗಿ ಅಥವಾ ಮಾನಕ್ಕಾಗಿ ಹೋರಾಡುತ್ತಾ ಅಸು ನೀಗಿದರೆ ಅದು ಮರಣವಲ್ಲ, ಮುಕ್ತಿಯ ತೋರಣವಾದೀತು! #LokaLekha by @SriSamsthana SriSri RaghaveshwaraBharati MahaSwamiji

ಲವ್ ಜಿಹಾದಿನ ಗಾಳಕ್ಕೆ ಸಿಲುಕಿದ ಕನ್ಯಾಮೀನಗಳೇ! ನೆನಪಿಡಿ, ಒಂದು ಬಾರಿ ತವರೆಂಬ ವರವನ್ನು ಕಳೆದುಕೊಂಡರೆ ಮತ್ತೆ ಬದುಕು ಶಾಪವೇ! ಈ ಮಾತು ತವರು ಮನೆಗೆ ಹೇಗೋ, ತವರು ಧರ್ಮಕ್ಕೂ- ತವರು ದೇಶಕ್ಕೂ ಹಾಗೆಯೇ ಅನ್ವಯಿಸುತ್ತದೆ. ನಾವು ನಾವಾಗದ ಮೇಲೆ ಮತ್ತೆ ಯಾರಾದರೇನು!? ಏನಾದರೇನು!?

ಇಂಥವರಿಗಾಗಿಯೇ ಕೃಷ್ಣ ಭಗವದ್ಗೀತೆಯ ಸಾಲೊಂದನ್ನು ಮೀಸಲು ಮಾಡಿದ್ದಾನೆ:

“ಸ್ವಧರ್ಮೇ ನಿಧನಂ ಶ್ರೇಯಃ, ಪರಧರ್ಮೋ ಭಯಾವಹಃ” – “ಸತ್ತರೂ ಸರಿ, ಸ್ವಧರ್ಮವೇ ಒಳಿತು; ಪರಧರ್ಮದ ಬದುಕು ಎಂದಿದ್ದರೂ ಭಯಂಕರವೇ!”

ಭಾರತವೆಂಬ ಪವಿತವನದಲ್ಲಿ ಅರಳುತ್ತಿರುವ ಕನ್ಯಾಮುಕುಲಗಳೇ! ನೀವು ದೇಶವೆಂಬ ದೇವರ ಪೂಜೆಗೆ ಸಲ್ಲಬೇಕು; ಮತಾಂತರವೆಂಬ ದೇಶ-ಧರ್ಮಗಳ ನಾಶಕ್ಕಾಗಿ ನಡೆಯುತ್ತಿರುವ ವಾಮಾಚಾರಕ್ಕಲ್ಲ! ಭಾರತಮಾತೆಯ ಮಂಗಲತಿಲಕವಾಗಬೇಕಾದ ನೀವು ಅಳಿಸಲಾಗದ ಕಲಂಕವಾಗಬಾರದು! ಮೋಹದ ಮದುವೆಗಿಂತ ಮಾತಾ-ಪಿತೃಗಳು ಅದೆಷ್ಟೋ ದೊಡ್ಡವರು! ದೇಶ-ಧರ್ಮಗಳು ಎಷ್ಟೆಷ್ಟೋ ದೊಡ್ಡವು! ದೇವರು ವರವಾಗಿ ನಮಗಿತ್ತ ದೇಶವನ್ನು, ಪೂರ್ವಪುರುಷರು ತಪಗೈದು ನಮಗಿತ್ತ ಧರ್ಮವನ್ನು ನಶ್ವರವಾದ ಶರೀರ ಸುಖಕ್ಕಾಗಿ ನಾಶಗೈಯದಿರಿ!#

LokaLekha by @SriSamsthana SriSri RaghaveshwaraBharati MahaSwamiji

 

~*~

ತಿಳಿವು-ಸುಳಿವು:

 

Facebook Comments