ಲವ್ ಜಿಹಾದ್….!!!
ಶತಶತಮಾನಗಳ ಕಾಲ ಭಾರತವರ್ಷದ ಮೇಲೆ ಆಳ್ವಿಕೆ ನಡೆಸಿದ – ದಬ್ಬಾಳಿಕೆ ನಡೆಸಿದ ಎರಡು ದಾಳಿಕೋರ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಎರಡು ಶಬ್ದಗಳವು.!!
ಬ್ರಿಟಿಷರ ಲವ್ ಮತ್ತು ಮೊಘಲರ ಜಿಹಾದ್ ಗಳ ಸಂಕರ ಸಂತಾನವೇ ಲವ್ – ಜಿಹಾದ್.

ಪ್ರೇಮವೆಂಬುದು ಬೇರೆ ಯಾವುದೋ ಉದ್ದೇಶಕ್ಕೆ ಬೇಕಾಗಿ ಕೃತ್ರಿಮವಾಗಿ ಉಂಟುಮಾಡಲು ಬರುವ ಸಂಗತಿಯಲ್ಲ..
ನಮ್ಮ ಅಂತರಂಗದ ಸಮಾನ ತರಂಗದಲ್ಲಿರುವ (Wave Length) ಯಾವುದೇ ವಸ್ತುವನ್ನು, ವ್ಯಕ್ತಿಯನ್ನು ಕಂಡಾಗ, ತಾನೇತಾನಾಗಿ ಚಿಲುಮೆಯಂತೆ ಚಿಮ್ಮಿ ಬರುವ ದಿವ್ಯಭಾವ..!

ಪ್ರೇಮವೆಂಬುದು ಬದುಕಿನ ಕಳಸ..
ಜೀವನದ ಜೀವಾಳವದು.!
ಬದುಕಿನ ಎಲ್ಲ ಸಂಗತಿಗಳು ಇರುವುದು ಪ್ರೇಮಕ್ಕಾಗಿ..
ಪ್ರೇಮ ಇರುವುದು ಬೇರೆ ಯಾವುದಕ್ಕಾಗಿಯೂ ಅಲ್ಲ.!

ಲವ್ ಜಿಹಾದ್ ಎನ್ನುವ ಶಬ್ದದ ಅರ್ಥ “ಜಿಹಾದ್ ಗಾಗಿ ಇರುವ ಲವ್ (ಯುದ್ದಕ್ಕಾಗಿ ಇರುವ ಪ್ರೇಮ)” ಎಂದಲ್ಲವೇ?
“ಪ್ರೇಮಕ್ಕಾಗಿಯೇ ಯುದ್ಧ ನಡೆಯುವುದು” ಸಹಜ.

ಮಾಯಾಮೃಗದ ಬಹಿರಂಗ "ರಮಣೀಯ"..

"ಮಾಯಾಮೃಗ" - ರಮಣೀಯವೋ ಮರಣೀಯವೋ?

ಉದಾಹರಣೆಗೆ:
ಸೀತೆಯ ಮೇಲಣ ರಾಮನ ಪ್ರೇಮಕ್ಕಾಗಿಯೇ ನಡೆದ ರಾಮಾಯಣ ಯುದ್ಧ.

ಆದರೆ ಯುದ್ಧದ ಉದ್ದೇಶಕ್ಕಾಗಿ ಪ್ರೀತಿಸಿದಂತೆ ನಟಿಸುವುದು ಪ್ರೇಮಕ್ಕೆ ಮಾಡಿದ ಘೋರ ಅಪಚಾರ..!
ದೇಶಕ್ಕಾಗಿ, ಧರ್ಮಕ್ಕಾಗಿ ಆದರೆ ಯುದ್ಧವನ್ನಾದರೂ ಸಹಿಸಬಹುದಿತ್ತೇನೋ!
ಈ ಯುದ್ಧದ (ಜಿಹಾದ್ ನ) ಉದ್ದೇಶ ಭವ್ಯ ಭಾರತದ ಭಂಗ…!!!
ಮತ್ತು ಸನಾತನ ಸಂಸ್ಕೃತಿಯ ಸರ್ವನಾಶ..!!!

ಹೀಗೆಂದ ಮಾತ್ರಕ್ಕೆ ಇದರಲ್ಲಿ ನಮ್ಮವರ ದೋಷವೇನೂ ಇಲ್ಲವೆಂದಲ್ಲ. ಒಳಗೆ ದೋಷ ದೌರ್ಬಲ್ಯಗಳು ಇಲ್ಲದಿದ್ದಲ್ಲಿ ಹೊರಗಿನ ಆಕ್ರಮಣಗಳು ಎಂದೂ ಯಶಸ್ವಿಯಾಗುವುದೇ ಇಲ್ಲ.
ರಾಷ್ಟ್ರಘಾತಕರ (ಘೋರ) ಚೆಲುವಿಗೆ ಮಾರುಹೋಗುವ ಭಾರತೀಯ ನಾರಿಯರ ಮನೋದೌರ್ಬಲ್ಯವೇ ಭಾರತದ ದೌರ್ಬಲ್ಯ..!

ಭವ್ಯ ಭಾರತದ ಭವಿಷ್ಯತ್ತಿನ ನಾರಿಯರೇ…
ಮೈ ಮರೆಯದಿರಿ..!!
ಮಾರೀಚನ ಮಾಯಾ ಮೃಗಕ್ಕೆ ಮಾರುಹೋಗದಿರಿ..
!!

ಗೋವನ್ನು ತಾಯಿ ಎಂದು ಪೂಜಿಸುವ ಅಸಲೀ ಭಾರತೀಯರ ಕೈ ಹಿಡಿದು ರಾಷ್ಟ್ರ ಭಕ್ತರಿಗೆ, ಧರ್ಮಯೋಧರಿಗೆ ಜನ್ಮ ನೀಡಿ..!
ಗೋವನ್ನು ಹಿಂಸಿಸಿ ತಿನ್ನುವ, ‘ವಾಸ ಭಾರತದಲ್ಲಿ – ನಿಷ್ಠೆ ಎಲ್ಲೋ’ ಎನ್ನುವ ಮನೋಭಾವದ ದೇಶದ್ರೋಹಿಗಳ ಕೈ ಹಿಡಿದು ಧರ್ಮಕ್ಕೆ ಕಳಂಕ ತರದಿರಿ..

ಅನರ್ಥ ಪರಂಪರೆಗೆ ಕಾರಣಗಳು ಎರಡು:

  1. ನಂಬಿಕೆ ಇಡಬೇಕಾದಲ್ಲಿ ಅಪನಂಬಿಕೆ..
  2. ಅಪನಂಬಿಕೆಯಿರಬೇಕಾದಲ್ಲಿ ನಂಬಿಕೆ..!

ಸರ್ವಥಾ  ನಂಬಿಕೆ ಇಡಬೇಕಾಗಿದ್ದ ಲಕ್ಷ್ಮಣನನ್ನು ಸೀತೆ ಸಂಶಯಿಸಿದಳು..!
ಎಷ್ಟು ಮಾತ್ರಕ್ಕೂ ಸಂಶಯಿಸಬೇಕಾಗಿದ್ದ ಮಾಯಾಮೃಗವನ್ನು ನಂಬಿದಳು..!

ಪರಿಣಾಮ ಮುಂದೇನಾಯಿತೆಂಬುದನ್ನು ಒಮ್ಮೆ ಚಿಂತಿಸಿ.!

ಮಾಯಾಮೃಗದ ಬಹಿರಂಗ “ರಮಣೀಯ“..
ಆದರೆ ಅದರ ಅಂತರಂಗ “ಮರಣೀಯ“..

ಬಂಗಾರದ ಜಿಂಕೆಯ ತೊಗಲಿನೊಳಗೆ ಅಡಗಿದ್ದು ಮೋಸದ ಮಹಾರಾಕ್ಷಸ..!
ಜಿಹಾದಿಗಳ ರಾಕ್ಷಸ ಶೃಂಗಾರದ ಬಲೆಗೆ ಸಿಲುಕಿ ಬಲಿಯಾಗದಿರಿ..!

ಅಸಲೀ ಪ್ರೇಮಕ್ಕೆ ಸರ್ವಾರ್ಪಣೆ ಮಾಡಬೇಕಾದದ್ದು ಎಷ್ಟು ವಿಹಿತವೋ,  ನಕಲೀ ಪ್ರೇಮವನ್ನು ಸಂಶಯಿಸಬೇಕಾದದ್ದು ಅಷ್ಟೇ ವಿಹಿತ – ಮಾತ್ರವಲ್ಲ ಅದು ನಿಮಗೂ, ಸಮಾಜಕ್ಕೂ, ಧರ್ಮಕ್ಕೂ, ದೇಶಕ್ಕೂ ಹಿತ..!
ಸಂದೇಹವೂ ಗುಣವಾಗಬಹುದಾದ ಸ್ಥಾನವಿದು..

ಶ್ರೀರಾಮನಂಥವರ ಸಹಧರ್ಮಚಾರಿಣಿಯರಾಗಿ ಮೈಥಿಲಿಯಂತೆ ನೀವು ಶೋಭಿಸುವುದನ್ನು ನೋಡಬಯಸುವೆವು..
ರಾವಣನ ಕೈ ವಶವಾಗಿ ಲಂಕೆಯನ್ನು ಸೇರಿ ಲಂಕಿಣಿಯರಾಗುವುದನ್ನು ನೋಡಲಾರೆವು..

ರಾಮಬಾಣಹೊರಗಿನ ಆಕ್ರಮಣಗಳಿಂದ ಭಾರತವರ್ಷದ ಸೀಮೆಗಳನ್ನು ವೀರಸೈನಿಕರು ಸಂರಕ್ಷಿಸಲಿ. . ಒಳಗಿನ ಆಕ್ರಮಣಗಳಿಂದ ಭಾರತೀಯರ ಮನದ ಸೀಮೆಗಳನ್ನು ಪೂಜ್ಯಸಂತರು ಸಂರಕ್ಷಿಸಲಿ.!

Facebook Comments Box