LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಶ್ರೀರಾಮಾಯಣದ ಅಂಕುರ ವಲ್ಮೀಕದಲ್ಲಿ…!!

Author: ; Published On: ಶುಕ್ರವಾರ, ಮಾರ್ಚ 5th, 2010;

Switch to language: ಕನ್ನಡ | English | हिंदी         Shortlink:

ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ . .
ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ . . .
ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
ಅಲ್ಲೊಂದು…
ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ…

ಅಲ್ಲಿ. . .
ಮೈಮೇಲೆ ಹುತ್ತವೇ ಬೆಳೆದರೂ ಅರಿವಾಗದಂತೆ ಮೈಮರೆತ ಪರಮ ತನ್ಮಯತೆಯ ಮಹಾಮುನಿ. . .
ಆ ಮುನಿಯ ಮಹಾಮನದಲ್ಲಿ ಮೂಡಿಬಂದಿತ್ತೊಂದು ಮಹಾಪುರುಷನ ದಿವ್ಯ ಮೂರ್ತಿ. . .
ತಮಸೆಯ ಪರಿಶುದ್ಧಿ. .
ಗಿರಿಶಿಖರಗಳ ಅಚಲತೆ, ಉನ್ನತಿ, ಗಾಂಭೀರ್ಯ. .
ಕಾನನಗಳ ಸೌಂದರ್ಯ,ಸೌಮ್ಯತೆ . .
ಆಶ್ರಮದ ಪವಿತ್ರತೆ . .
ಮುನಿಯತ್ಯಾಗ..

ಚಿನ್ಮಯಮೂರ್ತಿಯ ಧ್ಯಾನದಲ್ಲಿ ಮೃಣ್ಮಯಿಯಾದ ಮಹಾಮುನಿ..!ಇವೆಲ್ಲವೂ ಮೇಳೈಸಿದ್ದವು ಆ ಮೂರ್ತಿಯಲ್ಲಿ..


ಕೋಟಿಸೂರ್ಯ ಪ್ರಕಾಶ..!!!
ಆದರೆ ಕೋಟಿ ಚಂದ್ರರ ತಂಪು..!!!!!
ಆ ಮೂರ್ತಿಯ ಮೂಲದ್ರವ್ಯ ಶಿಲೆಯಾಗಿರಲಿಲ್ಲ – ಚೈತನ್ಯದ ಸೆಲೆಯಾಗಿತ್ತು..!!
ಮರದ ಮೂರ್ತಿಯದಲ್ಲ – ಅಮರ ಮೂರ್ತಿ..!!
ಮೃಣ್ಮಯವಲ್ಲ – ಚಿನ್ಮಯಮೂರ್ತಿ..!!
ಒಂದೇ ಒಂದೂ ಕುಂದೂ ಇಲ್ಲದ ಚಂದದ ಮೂರ್ತಿ…


ಒಮ್ಮೆ ನೋಡಿದರೆ ಮತ್ತೊಮ್ಮೆ..
ಮತ್ತೊಮ್ಮೆ ನೋಡಿದರೆ ಮಗದೊಮ್ಮೆ..
ನೋಡುತ್ತಲೇ ಇರುವಂತೆ ಮಾಡುವ ಮಾಟ..
ಜೀವಕೋಟಿಯ ನೋಟವನ್ನೆಲ್ಲ ತನ್ನೆಡೆಗೆ ಸೆಳೆಯುವ ಹೂಟ..
ಕಬ್ಬಿಣದ ದೃಷ್ಟಿಯನ್ನೂ ಕದಲಗೊಡದ ಚುಂಬಕಮೂರ್ತಿ…


ಹೃದಯಕಮಲದಲ್ಲಿ ಕುಳಿತು ಆ ಮೂರ್ತಿ ಮುನಿಯ ಹೊರಗಣ್ಣು ಮುಚ್ಚಿಸಿ…ಜಗವ ಮರೆ ಮಾಡಿತು…
ಒಳಗಣ್ಣು ತೆರೆಯಿಸಿ ತನ್ನನ್ನು ತಾನೇ ತೋರಿಸಿತು…!!

ಸೂರ್ಯನ ಗುರುತ್ವಾಕರ್ಷಣೆಗೆ ಸಿಕ್ಕಿ, ಸೂರ್ಯನಿಂದ ದೂರ ಸರಿಯಲಾರದೇ, ಸೂರ್ಯನ ಸುತ್ತವೇ ಸತತವಾಗಿ ಸುತ್ತುವ ಭೂಮಿಯಂತಾಯ್ತು ಮುನಿಯ ಮನ..
ತನ್ನೊಳಗೇ ತಾನು ಆ ಮಂಗಲಮೂರ್ತಿಯನ್ನೇ ಕಾಣುತ್ತಾ . . . .
ಕಣ್ಣು ಹಿಂದಿರುಗಿಸಲಾರದೇ……….
ಸ್ವಯಂ ಮೂರ್ತಿಯಂತೆಯೇ ಕುಳಿತ ಮುನಿಗೆ ಮೈಮೇಲೆ ಹುತ್ತ ಬೆಳೆದರೂ ಗೊತ್ತಾಗಲೇ ಇಲ್ಲ . . . ! ! !

16 Responses to ಶ್ರೀರಾಮಾಯಣದ ಅಂಕುರ ವಲ್ಮೀಕದಲ್ಲಿ…!!

 1. nandaja haregoppa

  Hare raama

  ತಮೋನಿರ್ಮುಕ್ತೆ ತಮಸೆಯ ಪರಿಶುದ್ಧಪ್ರವಾಹ . .
  ಮುಗಿಲು ಮುತ್ತಿಕ್ಕುವ ಗಿರಿಶಿಖರಗಳ ಅಚಲತೆ, ಗಾಂಭೀರ್ಯ, ಔನ್ನತ್ಯ . . .
  ಝರಿಗಳ ತಂಪು, ಹಸಿರಿನ ಸೊಂಪು, ಕುಸುಮಗಳ ಕಂಪುಗಳೊಡನೆ ಕಂಗೊಳಿಸುವ ಕಾನನಮಂಡಲ…
  ಅಲ್ಲೊಂದು…
  ಪಾವನತೆಯೇ ಪಡಿಮೂಡಿದಂತಿದ್ದ ಪರ್ಣಕುಟಿ… tumbaaa channagide,

  alli kulitu ramayanavannomme keluva

  nanasaaguttide,munde

  namage intha avakasha sigabahude?

  Pranamagalu

  [Reply]

 2. vdaithota

  ಹರೇ ರಾಮ….
  ನಿರೀಕ್ಷಣೆಯೂ ಒಂದು ತಪಸ್ಸೇ ಅಲ್ಲವೇ….!!!!
  ಮುಂದಿನ ಭಾಗದ ನಿರೀಕ್ಷಣೆಯಲ್ಲಿ…..

  [Reply]

  Raghavendra Narayana Reply:

  We are missing your comments…
  .
  Shri Gurubhyo Namaha

  [Reply]

 3. ravi n

  ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಳಂ…
  ಸತ್ವಪೂರ್ಣ ಧರ್ಮಮಯ ಮಂಗಳಮೂರ್ತಿಶ್ರೀ ರಾಮಚಂದ್ರನ ಚರಣಕಮಲಗಳಲ್ಲಿ ಕೋಟಿ ನಮನಗಳು..
  ಹರೇರಾಮ

  [Reply]

  Raghavendra Narayana Reply:

  We are missing your comments..
  .
  Shri Gurubhyo Namaha

  [Reply]

 4. seetharama bhat

  hare rama,

  rama nama smaraNeyalli

  [Reply]

 5. Shreekant Hegde

  ಹರೇ ರಾಮ,

  ವಂದೇ ವಾಲ್ಮೀಕಿಕೋಕಿಲಮ್ ||

  [Reply]

 6. Raghava Hegde

  ಹರೇರಾಮ,

  ವಾಲ್ಮೀಕಿ ಆ ಮರ,ಈ ಮರ ಹೇಳಿ ರಾಮ ರಾಮ ಎಂದು ರಾಮನ ದರ್ಶನ ಮಾಡಿ ಅಮರನಾದ,ಹಾಗೆಯೇ ಜಗತ್ತಿನ ಜೀವ ಜಂತುಗಳೆಲ್ಲ ರಾಮನ ಸ್ಮರನೆ ಮಾಡಿ ಸದ್ಗತಿ ಹೊಂದುವಂತೆ ಗುರುವು ದಾರಿ ತೋರಿಸಲಿ

  [Reply]

 7. RAVINDRA T L BHATT

  ಬದುಕ ಬೇಸಿಗೆಯಲ್ಲಿ,
  ಉರಿವ ಸೂರ್ಯನ ದಗೆಗೆ,
  ಬಳಲಿ ಬಸವಳಿದು,
  ಉಸ್ಸೆಂದು ಧರೆಗೊರಗಿ,
  ಕುಳಿತ ಗಳಿಗೆಯಲಿ,
  ಭರತ ತಂದೊರಗಿಸಿದ,
  ಸಿಹಿಯ ಗಂಗೆಯ ತೆರದಿ,
  ಬರುತಿರುವ
  ನಮ್ಮೆಲ್ಲರ ಶ್ರೀರಾಮನ
  ಪಾವನ,ಪುನೀತ ಕಥನ.
  ಗುರೂಜಿ, ನಿಮಗಿದೋ..

  [Reply]

 8. Madhu Dodderi

  ಪರಮ ಪಾವನೆಯಾದ ಆ ನದಿಗೇಕೆ ’ತಮಸಾ’ ಎಂಬ ಹೆಸರು?

  [Reply]

  ಮಂಗ್ಳೂರ ಮಾಣಿ... Reply:

  ತಮಸ್ಸನ್ನು ಕಳೆಯುತ್ತಾಳೆ ಎಂದಿರಬೇಕು..

  [Reply]

 9. Dr J Thirumala Prasad

  ಮಹಾಪುರುಷರೆಂದೂ ಹಾಗೆಯೇ ಅಲ್ಲವೇ? ಲೋಕಕಲ್ಯಾಣಾರ್ಥವಾಗಿ ತಮ್ಮ ಅಂತರಂಗದಲ್ಲಿ ಎನನ್ನು ಕಾಣುತ್ತಾರೋ ಅದು ಬಹಿರಂಗದಲ್ಲಿ ಕಾಣಲಿ. ಜಗತ್ತಿಗೆ ಅದರಿಂದ ಒಳ್ಲೆಯದಾಗಲಿ ಎಂದು ಬಯಸುತ್ತಾರೆ.
  ಮಹಾತ್ಮರ, ಮಹಾಪುರುಷರ, ದೇವತಾ ಸ್ವರೂಪರುಗಳ ಮನಸ್ಸಿನಲ್ಲಿ ಏನು ಉದಯಿಸುತ್ತದೋ ಅದು ಬಹಿ: ಪ್ರಪಂಚಕ್ಕೆ ಪೂರ್ಣ ರೂಪದಿಂದ ಸಿಗುತ್ತದೆ. ವಿಶ್ವ ಗೋ ಸಮ್ಮೇಳನ, ವಿಶ್ವ ಮಂಗಲ ಗೋಗ್ರಾಮ ಯಾತ್ರೆಗಳೂ, ಮಹಾಮಂಡಲ-ಮಂಡಲಗಳ ರಚನೆಗಳೂ ಅದರ ಮೂರ್ತ ರೂಪಗಳೇ ಅಲ್ಲವೇ………….

  [Reply]

 10. Ravi subrahmanya

  ಹರೇ ರಾಮ.

  ಭಗವಂತನ ಧ್ಯಾನ ಕೇವಲ ನೆಪಕ್ಕಾಗಿ ಅಲ್ಲ. ಅಂತರಾತ್ಮದಲ್ಲಿ ಭಗವಂತನ ಧ್ಯಾನದಿಂದ ಆತನ ಕೃಪೆಗೆ ಸಾಧ್ಯ.

  ಶ್ರೀ ಗುರುಭ್ಯೋ ನಮಃ

  [Reply]

 11. Sharada Jayagovind

  Horagannanu muchisi olagannu thereyisi gurugale

  [Reply]

 12. govindaraj korikkar

  Hareraama,Vaalmiki darushana adbhuthavagithu ,
  Ramana Darushanakkagi Shabariyagiddene

  [Reply]

 13. Raghavendra Narayana

  ಜೈ ಗಣೇಶ
  ಶ್ರೀ ಗುರುಭ್ಯೋ ನಮಃ
  .
  .
  ತಾ೦ಡವ ಆಡುವ ಒಳ ಹೊರ ಮನಸನ್ನು ನಿಗ್ರಹಿಸಿ, ಕ್ಷಣವಲ್ಲ ಯುಗಗಳನ್ನೆ ಕಳೆಯುವ ಸ್ಥಿತಿ ತಲುಪಿದ್ದ ಋಷಿ ವಾಲ್ಮಿಕಿಯ ಸ್ಥಿರ ಅ೦ತರ೦ಗದಲಿ ತರ೦ಗಗಳನ್ನು ಎಬ್ಬಿಸಿ, ಪರದೆಯೊಳ್ ಮಹಾಕಾವ್ಯವ ಮೂಡಿಸಿ ಕವಿಯಾಗಿ ಮಾಡಿಸಿದ ನಾರಾಯಣ, ಕಾಣಿಕೆಯಾಗಿ ರಾಮನ ಅ೦ತರ೦ಗದ ಪೂರ್ಣ ದರ್ಶನ ಮಾಡಿಸಿದ….?
  .
  ಸ್ಥಾಣುವಾಗಿ ಕುಳಿತು, ಸ್ವ೦ತವನ್ನು ಮರೆತು, ಆನ೦ದವನ್ನೆ ನೆನೆಯುತ್ತಿರುವಾಗ ಮೂಡಿದ ರಾಮನ, ರಾಮಾಯಣದ ಅನ೦ತ ವರ್ಣಚಿತ್ರಗಳ ನೋಡುತ್ತ ನೋಡುತ್ತ ಇನ್ನೂ ಕಳೆದು ಹೋದನೆ ವಾಲ್ಮಿಕಿ.. ಈ ಸ್ಥಿತಿಯಲ್ಲಿ ವಾಲ್ಮಿಕಿ ಕಳೆದ ಯುಗಗಳೇಷ್ಟೋ..
  .
  ನಿಸರ್ಗ ತ೦ಗಾಳಿ ನದಿಯ ದ೦ಡೆ ಸ೦ಗೀತದ ನಡುವಿನಿ೦ದ ಧ್ಯಾನದ ಮಡುವಿಗೆ, ಧ್ಯಾನದ ಮಡುವಿನಿ೦ದ ನಾರಾಯಣನ ತೆಕ್ಕೆಗೆ ಸೇರಿ ತೇಲುತ್ತಲಿರುವಾಗ, ಶ್ಲೋಕದ ರೂಪ ಕೊಡುವ ಕಷ್ಟ ಮತ್ತು ಸುಖ.

  [Reply]

Leave a Reply

Highslide for Wordpress Plugin