ನಮ್ಮ ಇಚ್ಛೆ ಮನೆಯವರ ಇಚ್ಛೆ, ಊರವರ ಇಚ್ಛೆ, ದೇಶದವರ ಇಚ್ಛೆ ಆಗಿದ್ರೆ ಸಾಲದು, ಅದು ದೈವೇಚ್ಛೆಯೂ ಇರಬೇಕು, ಅದಿಲ್ಲ ಅಂದರೆ ಗೋಳು ತಪ್ಪಿದ್ದಲ್ಲ.. ಇಡಿಯ ಲೋಕವೇ ರಾಮನನ್ನು ಪಟ್ಟಾಭಿಷಿಕ್ತನಾಗಿ ನೋಡಬೇಕು ಎಂದು ಬಯಸಿದ್ದರೂ ಆ ಕ್ಷಣದಲ್ಲಿ ದೈವೇಚ್ಛೆ ಬೇರೆಯದೇ ಇತ್ತು, ಹಾಗಾಗಿ ಅವನು ಪ್ರತಿಜ್ಞಾಪರಿಪಾಲಕನಾಗಿ ವನವಾಸಕ್ಕೆ ಹೊರಟ.
~
ರಾವಣ ಬಂದಿದ್ರಿಂದ ಜಟಾಯುವಿಗೆ ಮರಣ ಸ್ಥಿತಿ ಬಂತು, ರಾಮ‌ ಬಂದಿದ್ರಿಂದ ಜಟಾಯುವಿಗೆ ಮುಕ್ತಿ ಸಿಕ್ಕಿತು‌. ಪ್ರಾಣ ಹೋಗುವ ಕ್ಷಣದ ವರೆಗೂ ರಾಮನಿಗೆ ಸೀತಾಪಹರಣದ ಮಾಹಿತಿಯನ್ನು ಕೊಟ್ಟಿದ್ದಾನೆ. ಎಲ್ಲ ಕಾರ್ಯಕರ್ತರಿಗೂ ಜಟಾಯು ಮಹಾ ಪ್ರೇರಣೆ‌. ನಾವು ರಾಮನನ್ನು ಆಶ್ರಯಿಸಿದರೆ ಸುಖ-ಮುಕ್ತಿ, ಅದೇ ರಾವಣನನ್ನಾಶ್ರಯಿಸಿದರೆ ದುಃಖ, ತಾಪತ್ರಯಗಳು..
~
ಲೋಕ ಮರ್ಯಾದೆಗಾಗಿ ಸೀತೆಯನ್ನು ಅಗ್ನಿಪ್ರವೇಶಿಸುವಂತೆ ಮಾಡಿದ ರಾಮ, ಅಗ್ನಿದೇವನೇ ಸೀತೆಯನ್ನು ಹೊತ್ತು ಮೇಲೆದ್ದು ಬಂದಾಗ ಸೀತೆಯ ಪಾವಿತ್ರ್ಯತೆ ಲೋಕಕ್ಕೆ ಸಾಬೀತಾಯಿತು
~
ಲಂಕಾಪುರಿಯಲ್ಲಿ ವಿಭೀಷಣನನ್ನು ಚಕ್ರವರ್ತಿಯನ್ನಾಗಿ ಮಾಡಿ, ಸುದೀರ್ಘ 14ವರ್ಷಗಳ ನಂತರ ಭರತನ ಭೇಟಿಮಾಡಿ ಸೀತಾಸಮೇತ ರಾಮ ಅಯೋಧ್ಯೆಯನ್ನು ಪ್ರವೇಶಿಸಿದನು. ಇಲ್ಲಿಯ ತನಕ ನಡೆದದ್ದುಈ ಘಟನೆಗಳು. ಮುಂದಿನದು, ಕೋಸಲದಲ್ಲಿ ರಾಮರಾಜ್ಯ ಸ್ಥಾಪನೆ. ಇದು ನಾರದರು ವಾಲ್ಮೀಕಿಗಳಿಗೆ ಪ್ರಥಮ ಸರ್ಗದಲ್ಲಿ ಹೇಳಿದ ಸಂಕ್ಷಿಪ್ತ ರಾಮಾಯಣ.

ಪೂರ್ಣ ಪ್ರವಚನ ಇಲ್ಲಿ ಕೇಳಿರಿ : Dhara~Ramayana-Day2

ಪ್ರವಚನವನ್ನು ನೋಡಲು :

Facebook Comments