ನಮ್ಮ ಶ್ರೀ ರಾಘವೇಶ್ವರರು ಅನುದಿನ ಅನು ಕಾಲ ಪೂಜಿಸುವುದು ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ ಇರುವುದು ನಮ್ಮೆಲ್ಲರ ಸುಕ್ರತ
ಆದರೆ ಅದೇ ಸಮಯಕ್ಕೆ ನಾವು ಒಪ್ಪಿಕೊಳ್ಳಲೇ ಬೇಕಾದ್ದು ಇದು ಧಾವಂತದ ಬದುಕು . ಶ್ರೀಗಳ ಅಂತಹ ಲೋಕಮಾನ್ಯವಾದ ಮಾತುಗಳನ್ನು ಕೇಳಲು ದಿನ ನಿತ್ಯ ಶ್ರೀಗಳು ಇರುವಲ್ಲಿಗೆ ಹೋಗುವುದು ಕಾರ್ಯಸಾಧ್ಯವಾಗದ ಮಾತು . ಹಾಗಂತ ಶ್ರೀಗಳ ಅಮ್ರತ ನುಡಿ ಯನ್ನು ಕಳೆದು ಕೊಳ್ಳಲು ಸಾದ್ಯವೇ,ಖಂಡಿತ ಇಲ್ಲ,
ಶ್ರೀಗಳ ಭಕ್ತರು ಇಂತಹ ಸಮಸ್ಯೆ ಯನ್ನು ಹೋಗಲಾಡಿಸಲೇ ಶ್ರೀಗಳ ಮಾತುಗಳ ಚಿಕ್ಕ ಚಿಕ್ಕ ತುಣುಕು ಗಳುಳ್ಳ ವೀಡಿಯೊ ಮತ್ತು ಅಮೃತ ಮಾತುಗಳನ್ನು ಒಳಗೊಂಡ android ಅಪ್ ಅನ್ನು ಲೋಕಾರ್ಪಣ ಗೊಳಿಸುತ್ತಿದ್ದಾರೆ .

ಶ್ರೀಗುರುಗಳ ಹಿತನುಡಿಗಳು ಧರ್ಮಭಾರತಿಯಲ್ಲೂ, ಹರೇರಾಮ ವೆಬ್ ಸೈಟ್ ನಲ್ಲೂ , Facebook pageಗಳಲ್ಲೂ ಬಹಳ ಕಾಲದಿಂದ ಬಹಳ ಜನರನ್ನು ತಲುಪುತ್ತಿದೆ. ಇವೆಲ್ಲದರ ಜೊತೆಗೆ, ಇಂದು ಹೆಚ್ಚು ಬಳಕೆಯಲ್ಲಿರುವ ಮಾಧ್ಯಮವಾದ ‘App’ ಮಾಧ್ಯಮದಲ್ಲೂ ಅದನ್ನು ತರಲು ಸಲಹೆಗಳು ಬಂದಿತ್ತು. ಅದರಂತೆ ಈಗ ಒಂದು ‘ಗುರುಪದ’ Andriod App ನ್ನು ನಾಡಿದ್ದು 6 ನೇ ತಾರೀಖು ಭಾನುವಾರದಂದು ಗುರುಗಳು ಪೀಠಕ್ಕೆ ಬಂದ ಸಮಯದಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದೇವೆ.
~~~~~~~~~~~~~
ಅವತ್ತು ಇನ್ನೊಂದು ಕಾರ್ಯಕ್ರಮವೂ ಇದೆ.. ಅದು ರಾಮ ತಾರಕ ಹವನ .
ಅಂದು ರಾಮ ತಾರಕವನ್ನು ಅನು ದಿನ ಪಠಿಸುವ ಸ್ನೇಹಿತರಿಂದ ರಾಮ ತಾರಕ ಹವನ ಆಯೋಜಿತ ಆಗಿದೆ. ಶ್ರೀಗಳ ಮೂಲಕ ರಾಮನ ವಿಷಯವನ್ನ ಕೇಳುವ , ನಾವೆಲ್ಲರೂ ಒಟ್ಟಾಗಿ ರಾಮನನ್ನು ಪೂಜಿಸುವ ಅವಕಾಶವನ್ನು ಕಳೆದು ಕೊಳ್ಳಲು ನಮಗ್ಯಾರಿಗೆ ಹೇಗೆ ತಾನೇ ಮನಸ್ಸು ಬಂದೀತು . ನಾವೆಲ್ಲರೂ ನಮ್ಮವರೊಂದಿಗೆ ಸೇರಿ ರಾಮನಿಗಾಗಿ ಆ ದಿನವನ್ನೇ ಮೀಸಲಿಡೋಣ ಅಲ್ಲವೇ!!!

ನಮಸ್ಕಾರಗಳೊಂದಿಗೆ
ಅಂತರ್ಜಾಲ ವಿಭಾಗ

Gurupada Android App will be launched on 6th Dec. Sunday And also, Raamataraka Havana is organized on the same day.
All are invited,

With regards
IT (Antarjala) Wing

gurupada

Facebook Comments