LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

11-12-2009 ರ ಕಾರ್ಯಕ್ರಮಗಳು..

Author: ; Published On: ಶನಿವಾರ, ದಶಂಬರ 12th, 2009;

Switch to language: ಕನ್ನಡ | English | हिंदी         Shortlink:

ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು..
ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು..
ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು..
ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು..
ನಾವು ಶಂಕರಾಚಾರ್ಯರಾಗಿ ಇಲ್ಲಿಗೆ ಬಂದಿಲ್ಲ ಕಿಂಕರಾಚಾರ್ಯರಾಗಿ ಬಂದಿದ್ದೇವೆ,
ಈ ದೇಶದಲ್ಲಿ ಗೋ ಮಾತೆಯ ರಕ್ತ ಬೀಳುವವರೆಗೂ ಹೋಮ ಹವನ ಪೂಜಾದಿಗಳಿಗೆ ಯಾವುದೇ ಅರ್ಥ ವಿಲ್ಲ..ಆದ್ದ ರಿಂದ ಇನ್ನಾದರೂ ನಾವು ಗೋ ರಕ್ಷಣೆ ಗೆ ಮುಂದಾಗೋಣ ಎಂದು ತಿಳಿಸಿದರು..
ರಾತ್ರಿ ಪೂನಾದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಗಳು,
ನಮಗೂ ಪುನಾಕ್ಕು ವಿಶೇಷ ಸಂಬಂದವಿದೆ ಹೇಗೆಂದರೆ ನಾವು ಹಿಂದೆ ಪೂನಾದ ಬೈಫ್ ಸಂಸ್ಥೆ ಯ ಗೋಶಾಲೆಯನ್ನು ಸಂದರ್ಶಿಸಿದ್ದಾಗ ನಮ್ಮ ಕಣ್ಣಿಗೆ ಒಂದು ಬೃಹದಾಕಾರದ ಹೋರಿ ಗೋಚರಿಸಿತ್ತು ,
ಆಗ ನಾವು ವ್ಯವಸ್ಥಾಪಕರಲ್ಲಿ ಅದೇ ತರಹದ ಇನ್ನೊಂದು ನಂದಿಗಾಗಿ ವಿಚಾರಿಸಿದೆವು ಆದರೆ ಅವರು ಅದೇ ನಂದಿಯನ್ನೇ ನೀಡಿದರು.
ನಮ್ಮ ಎಲ್ಲಾ ಗೋ ರಕ್ಷಣಾ ಕಾರ್ಯಗಳಿಗೆ ಈ ಮಹಾನ೦ದಿಯೇ ಸ್ಪೂರ್ತಿ, ಅದು ಮಠಕ್ಕೆ ಆಗಮಿಸಿದ ಮೇಲೆ ಮಠದ ದಿಕ್ಕನ್ನೇ ಬದಲಾಯಿಸಿತು,
ನಾವು ಗೋ ರಕ್ಷಣೆಗಾಗಿ ರಾಜ್ಯ-ರಾಷ್ಟ್ರ ವ್ಯಾಪಿ ಹೋರಾಟಮಾಡಲು ಪ್ರೇರೇಪಣೆ ನೀಡಿತು ಎಂದು ತಮ್ಮ ಆಶೀರ್ವಚನ ದಲ್ಲಿ ಶ್ರೀಗಳು ನುಡಿದರು..
ಕಾರ್ಯಕ್ರಮದಲ್ಲಿ ಹಳದೀಪುರ ಮಠದ ವಾಮನಾಶ್ರಮ ಸ್ವಾಮೀಜಿ ಹಾಗೂ ಇನ್ನಿತರ ಸಂತ ಮಹಾಂತರು ಮತ್ತು ಜೈನ ಸಾಧ್ವಿಯರು ಭಾಗವಹಿಸಿದ್ದರು..
ಕಾರ್ಯಕ್ರಾದ ನಂತರ ಅಲ್ಲಿಯೇ ನಡೆದ ಹವ್ಯಕ ಶಿಷ್ಯರ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾರ್ಗದರ್ಶನ ದಯಪಾಲಿಸಿದರು..

1 Response to 11-12-2009 ರ ಕಾರ್ಯಕ್ರಮಗಳು..

 1. Raghavendra Narayana

  ಗುರುಗಳೇ, ನಿಮ್ಮ ಈ ಕೆಳಗಿನ ಮಾತುಗಳು ತು೦ಬಾ ಸ್ಪೂರ್ತಿದಾಯಕವಾಗಿದೆ. ನಮ್ಮಲ್ಲೂ ಈ ನಿಷ್ಠೆ ಬರಲಿ. ಒ೦ದು ಹೋಮಕ್ಕೆ / ಹವನಕ್ಕೆ ಕನಿಷ್ಟ ಒ೦ದು ಗೋವನ್ನು ಉಳಿಸುವ ಕಾರ್ಯ ಮಾಡದೆ, ಹೋಮ ಮುಗಿಯದೆ ಇರಲಿ, ಇದು ಶಾಸ್ತ್ರವಾಗಲಿ.

  _____________________________________________________________
  “ನಾವು ಶಂಕರಾಚಾರ್ಯರಾಗಿ ಇಲ್ಲಿಗೆ ಬಂದಿಲ್ಲ ಕಿಂಕರಾಚಾರ್ಯರಾಗಿ ಬಂದಿದ್ದೇವೆ,
  ಈ ದೇಶದಲ್ಲಿ ಗೋ ಮಾತೆಯ ರಕ್ತ ಬೀಳುವವರೆಗೂ ಹೋಮ ಹವನ ಪೂಜಾದಿಗಳಿಗೆ ಯಾವುದೇ ಅರ್ಥ ವಿಲ್ಲ..ಆದ್ದ ರಿಂದ ಇನ್ನಾದರೂ ನಾವು ಗೋ ರಕ್ಷಣೆ ಗೆ ಮುಂದಾಗೋಣ ಎಂದು ತಿಳಿಸಿದರು..”

  [Reply]

Leave a Reply

Highslide for Wordpress Plugin