ಪೆರಾಜೆ-ಮಾಣಿ ಮಠಃ15.8.2013, ಗುರುವಾರ

ಮೈಸೂರು ವಲಯದವರ ಗುರುಭಿಕ್ಷಾಸೇವೆ ಇಂದು ಮಾಣಿ ಮಠದಲ್ಲಿ ನಡೆಯಿತು. ಶ್ರೀ ಸದಾಶಿವ ಕೆ ಎಸ್ ಮೈಸೂರು ಇವರು ಭಿಕ್ಷಾಸೇವೆಯನ್ನು ವಲಯದ ಪರವಾಗಿ ನೆರವೇರಿಸಿದರು. ಶ್ರೀಗುರುಗಳ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಸೀತಾರಾಮ ರೈ ಸವಣೂರು, ಮೈಸೂರು ವಲಯದ ಶಿಷ್ಯವರ್ಗ, ಶ್ರೀಮಠದ ಪದಾಧಿಕಾರಿಗಳು ಶ್ರೀ ಸಂಸ್ಥಾನದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಗ್ರಹಶಾಂತಿ, ಮಹಾಗಣಪತಿ ಹವನ, ಮೃತ್ಯುಂಜಯ ತ್ರ್ಯಂಬಕ ಶಾಂತಿ, ನವಗ್ರಹ ಶಾಂತಿ ಶನಿಶಾಂತಿ, ಆಂಜನೇಯ ಹವನಗಳು, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮ ತಾರಕ ಯಜ್ಞ, ಶ್ರೀರಾಮ ಪೂಜೆ, ಗೋತುಲಾಭಾರ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ಶ್ಯಾಮ ಭಟ್ ಅದ್ರುಗುಳಿ, ಶ್ರೀ ಮಹಾಲಿಂಗೇಶ್ವರ ಭಟ್ ಕರ್ಮಳ ಪುತ್ತೂರು, ಶ್ರೀ ಗಣೇಶ್ ಭಟ್ ಕುಂಡೇರಿ, ಶ್ರೀ ಎಡಕ್ಕಾನ ಗಣಪತಿ ಭಟ್ ಬಡಿಲ, ಶ್ರೀ ಶಿವಕುಮಾರ್ ಮೈಸೂರು.

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣದ ಶ್ರೀಗುರುಗಳ ಪ್ರವಚನ ರೂಪದ ರಾಮಕಥೆ ಶ್ರೀಗುರುಗಳು ರಾಮನಿಗೂ, ಹನುಮನಿಗೂ ಪುಷ್ಪನಮನವನ್ನು ಸಲ್ಲಿಸಿದ ನಂತರ ಪ್ರಾರಂಭವಾಯಿತು. ಇಂದಿನ ವ್ಯಾಖ್ಯಾನದಲ್ಲಿ ಕಡಲತಡಿಯಲ್ಲಿದ್ದ ಕಪಿಗಳು ಪ್ರಾಣ ತ್ಯಾಗಮಾಡುತ್ತಿರುವ ಮಾತುಗಳನ್ನು ಕೇಳಿದ ಸಂಪಾತಿಯೆಂಬ ಹದ್ದು ತನಗೆ ಆಹಾರ ಸಿಕ್ಕುವ ನಿರೀಕ್ಷೆಯಲ್ಲಿ ಸಂತಸಗೊಂಡು ವಾನರರ ಸಾವನ್ನು ನಿರೀಕ್ಷಿಸುವ ಕಥೆಯನ್ನು ವಿವರಿಸಿದರು. ವಾನರರ ಮಾತಿನ ಕಡೆಗೆ ಗಮನ ಕೊಟ್ಟಾಗ ತನ್ನ ತಮ್ಮನ ಹೆಸರಾದ ಜಟಾಯುವಿನ ಬಗ್ಗೆ ಮಾತುಗಳು ಕೇಳಿ, ವಾನರರ ಬಳಿ ವಿವರಗಳನ್ನು ಕೇಳುತ್ತಾನೆ. ಇದುವರೆಗೆ ನಡೆದ ಕಥೆಯನ್ನು ಕೇಳಿ, ತಮ್ಮನ ಸಾವಿನ ಬಗ್ಗೆ ಕೇಳಿದಾಗ ತಮ್ಮನಿಗಾಗಿ ಬಹುವಾಗಿ ದುಃಖಗೊಂಡ ಸಂಪಾತಿ ತಮ್ಮ ಕಥೆಯನ್ನು ಹೇಳುತ್ತಾನೆ. ನಂತರ ಸೀತೆಯನ್ನು ಅಪಹರಿಸಿದ ರಾವಣನ ಬಗ್ಗೆ ಹೇಳಿ ಸೀತೆಯ ಇರವಿನ ಸೂಚನೆ ಕೊಡುತ್ತಾನೆ. ರಾಮಕಾರ್ಯದಲಿ ನೆರವಾದ ಸಂಪಾತಿಯ ಸುಟ್ಟ ರೆಕ್ಕೆ ಪುಕ್ಕಗಳು ಚಿಗುರುತ್ತವೆ. ರಾಮಸೈನ್ಯದ ಒಂದು ಭಾಗವಾಗುತ್ತಾನೆ. ಈ ಭಾಗವನ್ನು ಕಲಾವಿದರು ರೂಪಕದಲ್ಲಿ ನಡೆಸಿಕೊಟ್ಟರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆಯು ವಿರಾಮ ಪಡೆಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಕೆ ಎನ್ ವೆಂಕಟ್ರಮಣ ಭಟ್ ದೇರ್ಕಜೆ. ಸಹಪ್ರಾಯೋಜಕರು ಡಾ. ಗೋಪಾಲಕೃಷ್ಣ ಭಟ್ ಪೆರ್ವಜೆ.

~

Facebook Comments