ಪೆರಾಜೆ-ಮಾಣಿ ಮಠಃ 16.9.2013, ಸೋಮವಾರ

ಇಂದು ಬೆಂಗಳೂರು ಮಂಡಲದ ಸಂಜಯ ನಗರ, ಮಲ್ಲೇಶ್ವರ, ಸರ್ವಜ್ಞ ಹಾಗೂ ಕೋರಮಂಗಲ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಡಲಾಯಿತು. ಶ್ರೀ ದಿವಾಣ ಕೇಶವ ಕುಮಾರ್ ಸರ್ವಜ್ಞ ವಲಯದವರಿಂದ ವಲಯಗಳ ಪರವಾಗಿ ಭಿಕ್ಷಾಕಾರ್ಯ ನೆರವೇರಿತು.  ಶ್ರೀ ಜಿ ಎಮ್ ಹೆಗಡೆ ಚಾಮರಾಜನಗರ ಮೈಸೂರು, ಶ್ರೀ ಹಿತೇಶ್ ಪಟೇಲ್ ಮಂಗಳೂರು, ಶ್ರೀ ಯೋಗೀಶ್ ಕುಮಾರ್ ಮಂಗಳೂರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಃ

ಭಿಕ್ಷಾಂಗ ಆಂಜನೇಯ ಹವನ, ಸೀತಾಕಲ್ಯಾಣೋತ್ಸವ, ಸಂಜೀವಿನೀ ಹವನ, ಗಣಪತಿ ಹವನ ಮೇಧಾದಕ್ಷಿಣಾಮೂರ್ತಿ ಹವನ, ನವಗ್ರಹ ಶಾಂತಿ ಧನ್ವಂತರಿ ಹವನ, ಧನ್ವಂತರಿ ಹವನ, ಭೂವರಾಹ ಹವನ, ಗೋಪೂಜೆ ಗೋಗ್ರಾಸ ಗೋದಾನ, ಶ್ರೀರಾಮ ಪೂಜೆ, ಶ್ರೀ ರಾಮತಾರಕಹವನ, ಆಂಜನೇಯನಿಗೆ ಸೀಯಾಳಾಭಿಷೇಕಗಳು ನಡೆದವು.

ಪಾದಪೂಜೆಃ ದೇಶಭಂಡಾರಿ ಸಮಾಜ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ ಶ್ರೀ ಎಸ್ ಜಿ ಹೆಗಡೆ, ಶ್ರೀ ಡಿ ಎನ್ ಸೂರ್ಯನಾರಾಯಣ ಪೆರ್ಲಂಪಾಡಿ

~

ಸಾಂಸ್ಕೃತಿಕ ಕಾರ್ಯಕ್ರಮಃ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ವಿದುಷಿ ಆರ್ ಎ ರಮಾಮಣಿಯವರ ಶಿಷ್ಯೆಯರು ನಡೆಸಿಕೊಟ್ಟರು.  ವಿದುಷಿ ವತ್ಸಲಾ ಸುನಿಲ್, ವಿದುಷಿ ಶ್ರೀದೇವಿ ಗರ್ತಿಕರೆ, ವಿದುಷಿ ಅಶ್ವಿನಿ ಪಿ ಆರ್, ವಿದುಷಿ ಸುಮಾ ಶ್ರೀನಿವಾಸ, ವಿದುಷಿ ಪ್ರೀತಾ ಪಾರ್ಥಸಾರಥಿ, ವಿದುಷಿ ಕಮಲಾ ಮಧು, ವಿದುಷಿ ಸೌಮ್ಯಾ ಸುಬ್ಬಗಂಗಾ. ವಯಲಿನ್ ನಲ್ಲಿ ವಿದ್ವಾನ್ ಬಾಲರಾಜ್, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಸಹಕರಿಸಿದರು.

ನಂತರ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಕಲಾವಿದರು ನಡೆಸಿ ಕೊಟ್ಟ ಕಾರ್ಯಕ್ರಮಗಳುಃ ಬಡಗು ತಿಟ್ಟಿನ ಯಕ್ಷಪ್ರಯೋಗ ‘ದಶಾವತಾರ’, ಆಂಧ್ರದ ಜಾನಪದ ನೃತ್ಯ ಬಾಂಜಾರ್, ಮಣಿಪುರಿ ಕಲಾವಿದರಿಂದ ಸ್ಟಿಕ್ ಡ್ಯಾನ್ಸ್, ಜೀವನ್ ರಾಮ್ ಸುಳ್ಯ ನಿರ್ದೇಶನದ ಕಿರುನಾಟಕ “ದೇವವೃದ್ಧರು’, ಶ್ರೀಲಂಕಾ ಕಲಾವಿದರಿಂದ ‘ಕ್ಯಾಂಡಿಯನ್ ನೃತ್ಯ’, ಪಶ್ಚಿಮ ಬಂಗಾಲದ ‘ಪುರುಲಿಯಾ ಸಿಂಹನೃತ್ಯ’, ಕಥಕ್ ಸಮ್ಮೋಹನಮ್’.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments