ಪೆರಾಜೆ-ಮಾಣಿ ಮಠಃ 29.8.2013, ಗುರುವಾರ

ಇಂದು ಸಿದ್ಧಾಪುರ ಮಂಡಲದ ಅಂಬಾಗಿರಿ, ಸಿದ್ಧಾಪುರ ಹಾಗೂ ಬಿದಿರಕಾನ ವಲಯಗಳ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಮೂರೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ಸಿದ್ಧಾಪುರ ಮಂಡಲದ ಶಿಷ್ಯರಿಗೆ ಶ್ರೀಗುರುಗಳು ಮಾರ್ಗದರ್ಶನ ನೀಡಿ ಅನುಗ್ರಹ ಮಂತ್ರಾಕ್ಷತೆಯಿತ್ತರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಿದ್ಧಾಪುರ ವಲಯದ ಶ್ರೀ ಅನಂತರಾಮಯ್ಯರವರು ವಲಯಗಳ ಪರವಾಗಿ ಗುರುಭಿಕ್ಷಾಸೇವೆ ನೆರವೇರಿಸಿದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಸಹಿತ ರಾಹು ಬೃಹಸ್ಪತಿ ಸಂಧಿ ಶಾಂತಿ, ಗಣಪತಿ ಹವನ, ಪುರುಷಸೂಕ್ತ ಹವನ, ಸಂತಾನಗೋಪಾಲಕೃಷ್ಣ ಹವನ, ಕೂಶ್ಮಾಂಡ ಹವನ, ಗೋಪೂಜೆ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞಗಳು ನಡೆದವು.

ಪಾದಪೂಜೆಃ ಶ್ರೀ ವಿಶ್ವನಾಥ ಮಹಾಬಲೇಶ್ವರ ಹೆಗಡೆ ಹಾಲ್ಮನೆ ಅಂಬಾಗಿರಿ, ಶ್ರೀ ಮಂಜುನಾಥ ರಾಮಚಂದ್ರ ಹೆಗಡೆ ಬಿದಿರಕಾನ

~

ಸಾಂಸ್ಕೃತಿಕ ಕಾರ್ಯಕ್ರಮಃ

ವಿದುಷಿ ವಾಣೀ ಆರ್ ಭಟ್ ಮೈಸೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶರ್ಮಿಳಾ ಉಡುಪಿ ಹಾಗೂ ಮೃದಂಗದಲ್ಲಿ ಶ್ರೀ ಪ್ರಸನ್ನ ಎಸ್ ಭಟ್ ಬಲ್ನಾಡು ಸಹಕರಿಸಿದ್ದರು. ಶ್ರೀ ಶಿವರಾಮ ಕಜೆ, ಶ್ರೀ ಶಂಕರಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಡಾ.ವೈ ವಿ ಕೃಷ್ಣಮೂರ್ತಿ ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನಿತ್ತು ಗೌರವಿಸಿದರು.

~

Facebook Comments