ಪೆರಾಜೆ- ಮಾಣಿ ಮಠಃ28.8.2013, ಬುಧವಾರ

ಇಂದು ಕೃಷ್ಣಜನ್ಮಾಷ್ಟಮೀ. ಜಗದ್ಗುರು ಶ್ರೀಕೃಷ್ಣನ ಜನ್ಮದಿನವನ್ನು ಭಕ್ತಿಶ್ರದ್ಧೆಗಳಿಂದ ಶ್ರೀಮಠದ ಶಿಷ್ಯರು ಆಚರಿಸುವ ದಿನ. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು.  ಶ್ರೀ ಸುರೇಶ್ ಗೋಪಿ ಮತ್ತು ಏಶಿಯಾನೆಟ್ ಸುದ್ದಿ ಮಾಧ್ಯಮದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಸಂತಾನಗೋಪಾಲಕೃಷ್ಣ ಹವನ, ಪುರುಷಸೂಕ್ತ ಹವನ, ಆಂಜನೇಯ ಹವನ, ಕುಂಭವಿವಾಹ ಕುಜಶಾಂತಿ, ಶತಕಂಠ ಮಹಾನಾರಾಯಣ ಉಪನಿಷತ್ ಪಾರಾಯಣ, ಶ್ರೀರಾಮಪೂಜೆ, ಶ್ರೀರಾಮತಾರಕಯಜ್ಞ, ಆಂಜನೇಯನಿಗೆ ಸೀಯಾಳಾಭಿಷೇಕ, ಗೋಪೂಜೆಗಳು ನಡೆದವು. ಶ್ರೀಕೃಷ್ಣ ಜನ್ಮಾಚರಣೆ ಪ್ರಯುಕ್ತ ಲಕ್ಷತುಲಸಿ ಅರ್ಚನೆ, ಜನ್ಮಸಂಭ್ರಮಗಳು ನಡೆದವು.

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ಸಾಂಸ್ಕೃತಿಕ ಕಾರ್ಯಕ್ರಮಃ

ಇಂದು ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಠದಲ್ಲೆಲ್ಲಾ ಬಾಲಕೃಷ್ಣರ ಸಂಭ್ರಮ! ನೂರಕ್ಕೂ ಮಿಕ್ಕಿ ಕೃಷ್ಣವೇಷಧಾರಿ ಪುಟಾಣಿಗಳು ನಲಿದಾಡಿದರು.

~

Facebook Comments