LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

3- ಸೆಪ್ಟೆಂಬರ್-2013: ಶ್ರೀರಾಮಚಂದ್ರಾಪುರಮಠದ ದಿಗ್ದರ್ಶಕ ಮಂಡಳಿಯಿಂದ ಗುರುಭಿಕ್ಷಾಸೇವೆ

Author: ; Published On: ಮಂಗಳವಾರ, ಸೆಪ್ಟೆಂಬರ 3rd, 2013;

Switch to language: ಕನ್ನಡ | English | हिंदी         Shortlink:

ಪೆರಾಜೆ-ಮಾಣಿ ಮಠಃ3.9.2013, ಮಂಗಳವಾರ

ಇಂದು ಶ್ರೀರಾಮಚಂದ್ರಾಪುರಮಠದ ದಿಗ್ದರ್ಶಕ ಮಂಡಳಿಯಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಡೆಸಿದ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಎಮ್ ಬಿ ಮುಳಿಯ ದಂಪತಿ ಗುರುಭಿಕ್ಷಾಸೇವೆಯನ್ನು ಮಂಡಳಿಯ ಪರವಾಗಿ ನೆರವೇರಿಸಿದರು. ಶ್ರೀ ಉರಿಮಜಲು ರಾಮ ಭಟ್,  ಶ್ರೀಪ್ರಮೋದ್ ಹೆಗಡೆ ಯಲ್ಲಾಪುರ, ಶ್ರೀ ಆರ್ ಕೆ ಶರ್ಮಾ ಕೊಲ್ಕೊತ್ತ, ಶ್ರೀ ಆರ್ ವಿ ಶಾಸ್ತ್ರೀ, ಶ್ರೀ ವಾಸುದೇವ ಹೆಬ್ಬಾರ್ ರಾಣಿಬೆನ್ನೂರು, ಶ್ರೀ ಬಿ ಜಿ ರಾಮ ಭಟ್ ಗೋಳಿತ್ತಡ್ಕ, ಶ್ರೀ ಕಾಂತಾಜೆ ಈಶ್ವರ ಭಟ್,  ಶ್ರೀ ಐ ವಿ ಭಟ್ ಕಾಸರಗೋಡು, ಶ್ರೀ ಭೀಮ ಭಟ್ಟ ಚೆನ್ನೈ ಶ್ರೀಗುರುಗಳಿಂದ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಕುಜ ಶಾಂತಿ, ಆಶ್ಲೇಷ ಬಲಿ, ನಾಗನಿಗೆ ಪವಮಾನಾಭಿಷೇಕ, ಸುಬ್ರಹ್ಮಣ್ಯ ಹವನ, ಸ್ವಯಂವರ ಪಾರ್ವತಿ ಪೂಜೆ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ಮಳಿ ಶಿವರಾಮ ಭಟ್ಟ ಅಡ್ಯನಡ್ಕ, ಶ್ರೀ ನರಸಿಂಹ ಪ್ರಣವ ಉಬರಡ್ಕ ಮಿತ್ತೂರು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಇಂದಿನ ದಿನದ ರಾಮಕಥೆ ಶ್ರೀಗುರುಗಳು ಶ್ರೀರಾಮ ಮತ್ತು ಆಂಜನೇಯನಿಗೆ ಪುಷ್ಪಾರ್ಚನೆ ಮಾಡಿ ಪ್ರಾರಂಭಿಸಿದರು. ಸೀತೆಯನ್ನು ಹುಡುಕಲು ಶ್ರೀರಾಮ ಅಖಿಲಜಗತ್ತಿನ ಪ್ರಾಣವಾದ ಮುಖ್ಯಪ್ರಾಣನನ್ನು ಕಳುಹಿಸಿಕೊಟ್ಟ ಕಥಾನಕವನ್ನು ಮುಂದುವರಿಸಿ, ಸುರಸೆಯನ್ನು ಗೌರವದಿಂದ ಬೀಳ್ಕೊಂಡು ಹನುಮ ಸಮುದ್ರ ಹಾರುವಾಗ, ಸಮುದ್ರ ನಡುವಿನಲ್ಲಿದ್ದ ಛಾಯಾಗ್ರಾಹಿ ಸಿಂಹಿಕೆ  ಹನುಮನ ನೆರಳನ್ನು ಎಳೆಯಲಾರಂಭಿಸುತ್ತಾಳೆ. ತನ್ನ ಶಕ್ತಿ ಕುಂದುತ್ತಿರುವುದನ್ನು ಕಂಡ ಹನುಮ ಕಾರಣ ತಿಳಿದು ಸಿಂಹಿಕೆಯ ಬಾಯಿಗೆ ಸೂಕ್ಷ್ಮರೂಪದಲ್ಲಿ ಒಳ ಹೋಗಿ ಬೃಹದಾಕಾರವಾಗಿ ಹೊರ ಬಂದು ಸಂಹರಿಸುತ್ತಾನೆ. ವಿವಿಧ ಉದಾಹರಣೆಗಳೊಂದಿಗೆ ಈ ಕಥಾಭಾಗವನ್ನು ಶ್ರೀಗುರುಗಳು ಶಿಷ್ಯಕೋಟಿಗೆ ವಿವರಿಸಿದರು. ರಾಮಕಥೆಯ ಕಲಾವಿದರು ಈ ಕಥಾಭಾಗವನ್ನು ರೂಪಕದಲ್ಲಿ ಪ್ರಸ್ತುತ ಪಡಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ವಿರಾಮ ಪಡೆಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಶ್ರೀ ಬಾಲಕೃಷ್ಣ ಶೆಟ್ಟಿ ಪಡಂಗಡಿ. ಸಹಪ್ರಾಯೋಜಕರು ಶ್ರೀ ಹರಿಕೃಷ್ಣ ಭಟ್ಟ ಮಾಡಾವು ಪುತ್ತೂರು,  ಶ್ರೀ ಪಾತಾಳ ವೆಂಕಟ್ರಮಣ ಭಟ್ಟ ಉಪ್ಪಿನಂಗಡಿ, ಶ್ರೀ ಇ ಕೃಷ್ಣ ಮೋಹನ ಭಟ್ ಮಾಯಿಪ್ಪಾಡಿ ಕಾಸರಗೋಡು.

~

1 Response to 3- ಸೆಪ್ಟೆಂಬರ್-2013: ಶ್ರೀರಾಮಚಂದ್ರಾಪುರಮಠದ ದಿಗ್ದರ್ಶಕ ಮಂಡಳಿಯಿಂದ ಗುರುಭಿಕ್ಷಾಸೇವೆ

  1. PAKALAKUNJA GK

    hare raama

    [Reply]

Leave a Reply

Highslide for Wordpress Plugin