ಪೆರಾಜೆ-ಮಾಣಿ ಮಠಃ 30.8.2013, ಶುಕ್ರವಾರ

ಇಂದು ಸಿದ್ಧಾಪುರ ಮಂಡಲದ ಹಾರ್ಸಿಕಟ್ಟಾ, ಡೊಡ್ಮನೆ, ಇಟಗಿ ಹಾಗೂ ಚಪ್ಪರಮನೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಎಲ್ಲ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ವಲಯಗಳ ಪರವಾಗಿ ಶ್ರೀ ಗೋಪಾಲ ಗಣಪತಿ ಹೆಗಡೆ ಚಪ್ಪರಮನೆ ಭಿಕ್ಷಾಸೇವೆ ನಡೆಸಿದರು.

~

ಯಾಗಶಾಲೆಃ

ಭಿಕ್ಷಾಂಗ ಆಂಜನೇಯ ಹವನ, ಗಣಪತಿ ಹವನಪೂರ್ವಕ ಕಾಮಧೇನು ಹವನ, ಗಣಪತಿ ಹವನ ನವಗ್ರಹ ಶಾಂತಿ ಪಂಚಮಾರಿಷ್ಟ ಶಾಂತಿ ಅನ್ನಪ್ರಾಶನ, ನವಗ್ರಹ ಶಾಂತಿ ಅನ್ನ ಪ್ರಾಶನ, ವಾಲ್ಮೀಕಿ ರಾಮಾಯಣ ಪಾರಾಯಣ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಆಂಜನೇಯನಿಗೆ ಸೀಯಾಳಾಭಿಷೇಕ, ಗೋಪೂಜೆ, ರಾತ್ರಿಗೆ ದುರ್ಗಾ ಪೂಜೆಗಳು(೪), ಸಪ್ತಶತಿ ಪಾರಾಯಣಗಳು (೨) ನಡೆದವು.

ಪಾದಪೂಜೆಃ ಶ್ರೀ ಕಾಶೀನಾಥ ಇಗ್ಗಪ್ಪ ಹೆಗಡೆ ತಾರಗೋಡ, ಶ್ರೀ ರವೀಂದ್ರ ಸುಬ್ರಾಯ ಹೆಗಡೆ ಹಾರ್ಸಿಕಟ್ಟ
ವೈಯಕ್ತಿಕಃ ಶ್ರೀ ರಾಘವೇಂದ್ರ ರಾವ್ ಮಂಗಳೂರು, ಶ್ರೀ ಎಮ್ ತಿರುಮಲೇಶ್ವರ ಭಟ್ಟ ಮಿತ್ತೂರು, ಶ್ರೀ ಮೋಂತಿಮಾರು ಕೃಷ್ಣ ಭಟ್ಟ ಮಂಗಳೂರು, ಶ್ರೀ ರಾಮಚಂದ್ರ ಭಟ್ ಬೆಂಗಳೂರು.

~

ಸಾಂಸ್ಕೃತಿಕ ಕಾರ್ಯಕ್ರಮಃ

ವಿದುಷಿ ವಾಣಿಶ್ರೀ ಕಲ್ಲಾಜೆಯವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್ ನಲ್ಲಿ ಶ್ರೀ ಪ್ರಭಾಕರ ಕುಂಜಾರು ಹಾಗೂ ಮೃದಂಗದಲ್ಲಿ ಶ್ರೀ ವಸಂತಕೃಷ್ಣ ಕಾಂಚನ ಸಹಕರಿಸಿದರು. ಶ್ರೀ ಶಿವರಾಮ ಕಜೆ ಹಾಗೂ ಶ್ರೀ ಶಂಕರಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

~

Facebook Comments