ಪೆರಾಜೆ-ಮಾಣಿ ಮಠಃ 5.9.2013, ಗುರುವಾರ

ಇಂದಿನ ದಿನ ಶ್ರೀ ಬಂಗಾರಡ್ಕ ರಾಮಕೃಷ್ಣ ಭಟ್ ಮತ್ತು ಮಕ್ಕಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ರಾಮಾದಿ ಪೂಜೆಗಳನ್ನು ಮಾಡಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಕುಜರಾಹು ದಶಾ ಸಂಧಿ ಶಾಂತಿ, ಕನ್ಯಾಸಂಸ್ಕಾರ ಹವನ(೨), ಗಣಪತಿ ಹವನ, ದುರ್ಗಾ ಹವನ, ರಾಮಾಯಣ ಪಾರಾಯಣ, ಶತರುದ್ರಜಪಾಭಿಷೇಕ, ಬಂದೀವಿಮೋಚನಾ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆಗಳು ನಡೆದವು.

ಪಾದಪೂಜೆಃ ಶ್ರೀ ತಿರುಮಲೇಶ್ವರ ಭಟ್ ವಾಲ್ತಾಜೆ, ಶ್ರೀ ನಾರಾಯಣ ಭಟ್ ಎರುಗಲ್ಲು, ಶ್ರೀ ಜಯಪ್ರಕಾಶ್ ಕಜೆದುಂಬೆಟ್ಟು, ಶ್ರೀ ಉದಯಶಂಕರ ಭಟ್ಟ ಮಿತ್ತೂರು, ಕು. ಸಮೀರಕೃಷ್ಣ ಪೆರುವಾಜೆ

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ

ಮೂರನೇ ಹಂತದ ರಾಮಕಥೆಯ ಐದನೆಯ ದಿನದ ರಾಮಕಥೆ ಶ್ರೀರಾಮನಿಗೆ, ಹನುಮನಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಗೊಂಡಿತು. ರಾವಣನ ಕೋಟೆಯೊಳಗೆ ಎಡದ ಕಾಲನ್ನು ರಾವಣನ ತಲೆಯ ಮೇಲೆಯೇ ಇಟ್ಟಂತೆ ಇಟ್ಟು ಪ್ರವೇಶಿಸುತ್ತಾನೆ. ಹನುಮ ಲಂಕೆಯ ಸೊಬಗನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ಲಂಕೆಯ ಒಳಹೊರಗು ಸೀತೆಯನ್ನು ಅನ್ವೇಶಿಸುತ್ತಾನೆ. ಭೂಮಂಡಲದ ಸಕಲ ಸ್ತ್ರೀವರ್ಗ ಕಾಣಸಿಕ್ಕರೂ ಸೀತೆಯ ಸುಳಿವು ಸಿಗದಾಗ ಹನುಮ ದುಃಖಿತನಾಗುತ್ತಾನೆ. ಆಗ ಹನುಮನಿಗೆ ಕೇಳಿದ ಶಬ್ಧ ಗೊರಕೆಯದು! ಬೆಟ್ಟಕೆ ಕೈಕಾಲು ಬಂದಂಥಾ ಆಕಾರ ನಿದ್ರಿಸುತ್ತಿರುವುದು ಕಂಡ. ಗಾಳಿಯ ಅಬ್ಬರದಿಂದ ಹೇಗೋ ರಕ್ಷಿಸಿಕೊಂಡು ಕುಂಭಕರ್ಣನ ಮನೆಯಿಂದ ಹೊರ ಬಂದ ಹನುಮನಿಗೆ ಕೇಳಿದುದು ಲಂಕಾ ಸಾಮ್ರಾಜ್ಯದಲ್ಲಿ ರಾಮನಾಮ! ಎಷ್ಟು ಒಳ್ಳೆಯವರಲ್ಲಿಯೂ ಕೆಟ್ಟದಿರಬಹುದು. ಎಷ್ಟು ಕೆಟ್ಟವರಲ್ಲಿಯೂ ಒಳ್ಳೆಯತನವಿರಬಹುದು.ಹಾಗೆ ರಾವಣನ ತಮ್ಮ ವಿಭೀಷಣ ರಾಮನಾಮ ಸ್ಮರಣೆ ಮಾಡುತ್ತ ರಾಮನ ದಾರಿ ಕಾಯುತ್ತಿರುವವನು.ಹನುಮ ವಿಭೀಷಣನನ್ನು ಪರಿಚಯ ಮಾಡಿ ಮಾತನಾಡಿ ಮುಂದುವರಿದ ಕಥೆಯನ್ನು ಶಿಷ್ಯಕೋಟಿಗೆ ಹೇಳಿದರು. ಶಿಕ್ಷಕರ ದಿನದ ಮಹತ್ತನ್ನು ಸಾರಲು, ವಿದ್ಯೆಯ ಮಹತಿಯನ್ನು ತೋರ್ಪಡಿಸುವ ರೂಪಕವನ್ನು ಕಲಾವಿದರು ಪ್ರಸ್ತುತ ಪಡಿಸಿದರು. ಜೈ ಜೈ ರಾಮಕಥಾದೊಂದಿಗೆ ಇಂದಿನ ರಾಮಕಥೆ ಪರ್ಯವಸಾನವಾಯಿತು. ಇಂದಿನ ರಾಮಕಥೆಯ ಪ್ರಾಯೋಜಕರು ಶ್ರೀ ಎಸ್ ಕೆ ಆನಂದ ಕುಮಾರ್ ಪುತ್ತೂರು, ಹವ್ಯಕ ವಲಯ ಬಾಯಾರು ಇದರ ಪರವಾಗಿ ಡಾ.ಗಣೇಶ ಭಟ್ ಕುರುವೇರಿ. ಸಹಪ್ರಾಯೋಜಕರು ಶ್ರೀ ಪಿ ಸದಾಶಿವ ಭಟ್ಟ ಉಬರಡ್ಕ, ಶ್ರೀ ರಾಮಕೃಷ್ಣ ಅಜಕೂಡ್ಲು, ಶ್ರೀ ಸಿ ಎಚ್ ವೆಂಕಟೇಶ್ವರ ಭಟ್ ಎಕ್ಕಳ, ಶ್ರೀ ಎಚ್ ಕೃಷ್ಣ ಭಟ್ಟ ಹತ್ತೊಕ್ಕಲು, ಶ್ರೀ ಮೈರ ಶ್ಯಾಮ ಭಟ್ಟ ಕಳಾಯಿಮನೆ, ಶ್ರೀ ಹರಿನಾರಾಯಣ ಹರಿಪ್ರಸಾದ್ ಪುತ್ತೂರು. ಶ್ರೀಕ್ಷೇತ್ರಒಡಿಯೂರಿನ ಶ್ರೀಗುರುದೇವಾನಂದದತ್ತ, ಶ್ರೀಮತಿ ಶಕುಂತಲಾ ಶೆಟ್ಟಿ ಶಾಸಕರು ಪುತ್ತೂರು ರಾಮಕಥೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

~

Facebook Comments