LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ : 23/03/2016

Author: ; Published On: ಬುಧವಾರ, ಮಾರ್ಚ 23rd, 2016;

Switch to language: ಕನ್ನಡ | English | हिंदी         Shortlink:

ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ

12440736_793496057448154_8619036283474537964_o

ಇಂದು ದುಃಖದ ದಿನ ಅಲ್ಲ, ಮುಕ್ತಿಯಷ್ಟು ಶ್ರೇಷ್ಠವಾದುದು ಇನ್ನೊಂದಿಲ್ಲ. ಒಂದು ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾದ ದಿನ-ಭಗವಂತನಲ್ಲಿ ಒಂದಾದ ದಿನ, ತಮ್ಮ ಬದುಕನ್ನು ಪೂರ್ಣಗೊಳಿಸಲು, ಪರಿಪೂರ್ಣರಾಗಿದ್ದ ಅವರು ಪೌರ್ಣಮಿಯನ್ನೇ ಆಯ್ದುಕೊಂಡರು. ಅವರ ಆದರ್ಶಗಳು ನಮಗೆ ಅತ್ಯವಶ್ಯಕ ಎಂದು ಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳು ನುಡಿದರು.
ಗಿರಿನಗರದ ಶ್ರೀರಾಮಶ್ರಮದಲ್ಲಿ ನಡೆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇದು ವಿಷಾದದ ದಿನವಲ್ಲ.ತಮ್ಮ ಹಿರಿಯ ಗುರುಗಳು ಬ್ರಹ್ಮಲೀನರಾದ ದಿನ,ಪರಮಪದವನ್ನು ಸೇರಿದ ದಿನ. ಅವರು ನಮ್ಮ ನೆನಪಿನಲ್ಲಿ ಇರಬೇಕು, ಅವರಿಗಾಗಿ ಅಲ್ಲ-ನಮ್ಮ ಶ್ರೇಯಸ್ಸಿಗಾಗಿ. ಸೇವೆ ಮಾಡಬೇಕಾದುದು ನಮ್ಮ ಒಳ್ಳೆಯದಕ್ಕೆ ಹೊರತು ಬೇರೆಯವರ ಉಪಕಾರಕ್ಕಲ್ಲ ಎಂದರು.
ಇದಕ್ಕೂ ಮುನ್ನ ೧೬ಜನ ವಿಪ್ರೋತ್ತಮರಿಗೆ ಫಲಕಾಣಿಕೆ ಸಮರ್ಪಿಸಿ-ಭೋಜನ ನೀಡಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತೀರ್ಥರಾಜ ಪೂಜೆಯನ್ನು ನೆರವೇರಿಸುವ ಮೂಲಕ ಆರಾಧನೆಯ ಮಹೋತ್ಸವ ನೆರವೇರಿಸಲಾಯಿತು. ಆರಾಧನಾ ಸೇವೆ ಶ್ರೀಸೇವಾ ಗುರುಭಕ್ತ ಬಳಗದಿಂದ ನೆರವೇರಿತು.
ನಂತರದಲ್ಲಿ ವಿಶೇಷವಾಗಿ ಶ್ರೀಶ್ರೀರಾಮಚಂದ್ರಭಾರತಿ ಮಹಾಸ್ವಾಮಿಗಳವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.  ನಿಸ್ರಾಣಿ ರಾಮಚಂದ್ರ ಹಾಗೂ ಕೆಕ್ಕಾರ್ ರಾಮಚಂದ್ರರ ಅವರುಗಳು ಕಾರ್ಯಕ್ರಮ ನಡೆಸಿಕೊಟ್ಟರು, ವಿದ್ವಾನ್ ಜಗದೀಶ ಶರ್ಮ ನಿರ್ವಹಣೆ ಮಾಡಿದರು.nನಿಸ್ರಾಣಿ ರಾಮಚಂದ್ರ ಅವರು ಮಾತನಾಡಿ, ಹೊರಗಿನ ವಾತಾವರಣ ಬಹಳ ಸಹಜವಾಗಿರುವಾಗ ಇಂತಹ ಧರ್ಮಪೀಠಗಳನ್ನು ಮುನ್ನಡೆಸುವುದು ಬಹಳ ಕ್ಲಿಷ್ಟಕರವೇನಲ್ಲ ಆದರೆ ಹೊರವಲಯದ ಪರಿಸ್ದಿತಿ ಬಹಳ ಪ್ರಕ್ಷುಬ್ಧವಾಗಿದ್ದಾಗ ಪೀಠವನ್ನು ಮುನ್ನಡೆಸುವುದು ಬಹಳ ಕಷ್ಟಕರ ಹಾಗೂ ಮಹಾತ್ಮರಿಗೆ ಮಾತ್ರ ಸಾಧ್ಯವಾಗುವಂಥದ್ದು.ಅಂಥ ಪರಿಸ್ಥಿತಿಯಲ್ಲಿ ಪರಮಪೂಜ್ಯ ರಾಮಚಂದ್ರ ಭಾರತೀ ಮಹಾಸ್ವಾಮಿಗಳು. ತಮ್ಮ ಗುರುಗಳಿಂದ ಅನುಗ್ರಹಿತವಾದ ಆನೆಯ ಕಾಲದ ನಂತರ ಅದರ ದಂತಗಳು ವ್ಯರ್ಥವಾಗಬಾರದೆಂಬ ಉದ್ದೇಶದಿಂದ ತಮಗೆ ಅತ್ಯಂತ ಬಡತನವಿದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಸ್ತಿದಂತ ಸಿಂಹಾಸನವನ್ನು ನಿರ್ಮಿಸಿದರು. ಇದು ಅವರ ಗುರುನಿಷ್ಠೆಯನ್ನು ಸೂಚಿಸುತ್ತದೆ ಎಂದರು. ರಾಯರ ಮನೆಯ ಕೆಕ್ಕಾರು ರಾಮಚಂದ್ರ ಭಟ್ಟ ರವರು ತಮ್ಮ ತಂದೆಯವರ ಮೇಲೆ ರಾಮಚಂದ್ರ ಭಾರತಿಗಳು ತೋರಿದ ಕರುಣೆಯ ಘಟನೆಗಳನ್ನು ಹಂಚಿಕೊಂಡರು.ತಮ್ಮ ತಂದೆಯವರು ಗುರುಗಳ ಮಡಿಲ ಶಿಶುವಾಗಿ ಬೆಳೆದರು ಅಂತಹ ಒಬ್ಬ ಪುಣ್ಯವಂತರು ಅವರು.ಈಗಿನ ಪೀಠಾಧಿಪತಿಗಳಲ್ಲೂ ನಾವು ಅದೇ ಬಗೆಯ ಪ್ರೀತಿ ಕಾರುಣ್ಯಗಳನ್ನೈ ಕಾಣುತ್ತೇವೆಂದು ಅಭಿಪ್ರಾಯ ಪಟ್ಟರು.
ಶ್ರೀಕಾರ್ಯದರ್ಶಿಗಳಾದ ಮೋಹನ್ ಭಾಸ್ಕರ್ ಹೆಗಡೆ ಇವರು ನಿರೂಪಿಸಿದರು. ಶ್ರೀಸಂಸ್ಥಾನದ ಸಮ್ಮುಖ ಸರ್ವಾಧಿಕಾರಿಗಳಾದ ಶ್ರೀ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆಜ಼ಿ ಭಟ್, ಶ್ರೀಮಠದ ಪದಾಧಿಕಾರಿಗಳು, ಮಂಡಲ-ವಲಯಗಳ ಪ್ರಮುಖರು ಹಾಗೂ ಎಲ್ಲಾ ಭಾಗಗಳ ಶಿಷ್ಯಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
12898232_793607870770306_2408989944576144448_o12898288_793607740770319_8342952614203340572_o12885794_793607784103648_3310512456367737198_o12778906_793607647436995_8549618671786867685_o   12419323_793607704103656_741866411509133365_o 12672146_793496364114790_8135056254465677215_o

2 Responses to ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ : 23/03/2016

  1. G.S.Hegde Dombivli

    Harerama…….

    [Reply]

  2. Shivarama Bhat, Muliya

    Hare Raam

    [Reply]

Leave a Reply

Highslide for Wordpress Plugin