ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳಿಂದ “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲಿನ ಲೋಕಾರ್ಪಣೆ. 

14/09/2015 – ಶ್ರೀರಾಮಾಶ್ರಮ:
ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ ಮಹಾಸಂಕಲ್ಪದ ಕಾಮಧುಘಾ ಯೋಜನೆಯಿಂದ ಪ್ರೇರೇಪಣೆಗೋಂಡ ಆಂಧ್ರಪ್ರದೇಶ ಮೂಲದ ಉದ್ಯಮಿಗಳಾದ ಶ್ರೀನಿವಾಸ ರೆಡ್ಡಿ  ಎನ್ನುವವರು ಅಕ್ಷಯ ಗೋ ಪ್ರಾಡೆಕ್ಟ್ಸ್ ಉದ್ಯಮದ ಮೂಲಕ ಭಾರತದಲ್ಲಿಯೇ ಪ್ರಪ್ರಥಮಬಾರಿಗೆ ಶುದ್ಧ ದೇಶೀಯ ಹಸುವಿನ ಹಾಲನ್ನು “ಗೋಅಮೃತ” ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಪರಿಚಯಿಸುತ್ತಿದಾರೆ.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು “ಗೋಅಮೃತ” ಶುದ್ಧ ದೇಶೀಯ ಹಸುವಿನ ಹಾಲನ್ನು ಲೋಕಾರ್ಪಣಗೊಳಿಸಿದರು, ಸಂಪೂರ್ಣ ರಾಸಾಯನಿಕ ಮುಕ್ತವಾದ ಈ ಹಾಲು ಶೇ.100% ಬ್ಯಾಕ್ಟೀರಿಯಾ ಮುಕ್ತವಾಗಿದೆ. ರಾಜಾಸ್ಥಾನದ ಪಾಥೇಮೇಡ ಗೋಶಾಲೆಯಲ್ಲಿ ಸಂಗ್ರಹವಾಗುವ ದೇಶಿಯ ಹಸುವಿನ ಹಾಲು UHT ತಂತ್ರಜ್ಝಾನದಲ್ಲಿ ಶೇಕರಿಸಲ್ಪಡುವ ಈ ಹಾಲನ್ನು ತಯಾರಾದ 100 ದಿನಗಳವರೆಗೆ ನೆರವಾಗಿ ಉಪಯೋಗಿಸಬಹುದಾಗಿದೆ.
ಉತ್ತಮ ಆರೋಗ್ಯಕ್ಕಾಗಿ ದೇಶೀಯ ಹಸುವಿನ ಹಾಲು ಎಂಬ ಶಿರೋನಾಮೆಯ ಈ ಹಾಲಿನ ಉತ್ಪನ್ನವು ಗೋಪ್ರೇಮಿಗಳಲ್ಲಿ ಸಂತಸವನ್ನುಟುಮಾಡಿದ್ದು, ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ದೇಶೀಯ ಗೋವಿನ ಕುರಿತು ಜಾಗೃತಿ ಮೂಡಿಸುತ್ತಿರುವ  ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೋ ಸಂರಕ್ಷಣೆಯ “ಕಾಮಧುಘಾ” ಯೋಜನೆಗೆ ಸಿಕ್ಕ ದೊಡ್ಡಮಟ್ಟದ ಯಶಸ್ಸು ಎನ್ನಬಹುದಾಗಿದೆ.
Desi Milk Packet Release By Sri Samsthanam

Desi Milk Packet Release By Sri Samsthanam

Facebook Comments