ಶ್ರೀರಾಮಚಂದ್ರಾಪುರ ಮಠದ ಮೇಲೆ ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಸರ್ವಸಮಾಜ ಖಂಡಿಸುತ್ತದೆ ಎಂದು ಸುಮಾರು 36 ಸಮಾಜಗಳ ಪ್ರತಿನಿಧಿಗಳಾಗಿ
ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಸರ್ವಸಮಾಜದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು.
ಪರಮಪೂಜ್ಯ ಶ್ರೀಗಳನ್ನು ಅತ್ಯಂತ ಹತ್ತಿರದಿಂದ ನೋಡಿರುವ ,ಅವರು ಸಮಾಜದ ವಿವಿದ ಸ್ಥರಗಳಿಗೆ ಮಾಡಿರುವ ಉತ್ತಮ ಕೆಲಸಗಳನ್ನು ಮತ್ತು ಆ ಒಳ್ಳೆಯ ಕೆಲಸಗಲಿಗೊಸ್ಕರವೇ ಅವರು ಗಳಿಸುತ್ತಿರುವ ಪ್ರಖ್ಯಾತಿಯನ್ನು ಸಹಿಸದ ಕೆಲವು ಕುತಂತ್ರಿಗಳಿಂದ ಇಂತಹ ಎಷ್ಟೇ ಆಪಾದನೆಗಳು ಬಂದರೂ ಅವರ ಮೇಲೆ ನಮಗೆ ಎಳ್ಳಿನ ಮೊನೆಯಷ್ಟೂ ಅನುಮಾನ ಬರಲು ಸಾಧ್ಯವೇ ಇಲ್ಲ ಎಂದು ಮುರಳಿಧರ ಪ್ರಭು ಅವರು ತಿಳಿಸಿದರು.
ಶ್ರೀಗಳು ಉತ್ತರ ಕರ್ನಾಟಕದ ಬರದ ಸಂಧರ್ಭದಲ್ಲಿ ಹತ್ತಾರು ಲಾರಿ ಗೋ ಆಹಾರವನ್ನು ಕಳಿಸಿರುವ ಕಾರಣದಿಂದ ಅವರ ಒಳ್ಳೆಯ ಕೆಲಸಗಳಿಗಾಗಿ ಮನಸೋತು ನಾವು ಇಲ್ಲಿ ಇದ್ದೇವೆ. ಇಂತಹ ಶ್ರೇಷ್ಠ ಗುರುಗಳನ್ನು ಕೆಲವು ಬೆರಳೆಣಿಕೆಯಷ್ಟು ಜನ ಆಗೊಮ್ಮೆ ಈಗೊಮ್ಮೆ ಪತ್ರಿಕಾಗೋಷ್ಠಿ ಮಾಡಿ ಪೀಠತ್ಯಾಗ ಮಾಡುವಂತೆ ಆಗ್ರಹಿಸುತ್ತಿರುವುದು ಬಾಲಿಶತನದ ಪರಮಾವಧಿ. ಅಪಾರ ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಮಹಿಳಾ ಸಮುದಾಯವು ಶ್ರೀಗಳ ಮೇಲಿಟ್ಟಿರುವ ನಂಬಿಕೆಯೇ ಶ್ರೀಗಳು ಪವಿತ್ರರು ಎಂಬುದಕ್ಕೆ ಸಾಕ್ಷಿ ಎಂದು ಕುರುಬ ಸಮಾಜದ ಮುಖಂಡ ಶ್ರೀ ವೈ.ಎನ್. ಗೌಡರ್ ಹೇಳಿದರು.
ಹವ್ಯಕ ಸಮಾಜದ ಮುಖಂಡ ಶ್ರೀ ರಮಾನಾಥ ಹೆಗಡೆ ಮಾತನಾಡಿ ಇಡಿಯ ಹವ್ಯಕ ಸಮಾಜ, ಹವ್ಯಕ ಸಮಾಜದ ಪ್ರತಿಯೊಬ್ಬರಿಗೂ ಶ್ರೀಗಳ ನಿಷ್ಕಲ್ಮಶ ವ್ಯಕ್ತಿತ್ವದ ಪರಿಚಯವಿದೆ. ದೂರುದಾರರು ಷಡ್ಯಂತ್ರದ ಭಾಗವಾಗಿ ತಮ್ಮ ಸ್ವಾರ್ಥ ಕಾರಣದಿಂದ ಶ್ರೀಗಳ ಮೇಲೆ ಆರೋಪಹೊರಿಸುತ್ತಿರುವುದು ಖಂಡನೀಯ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿ ‘ಇಸ್ಮಾಯಿಲ್ ಬೆಳ್ಳಾರೆ’ ಮಾತನಾಡಿ ಶ್ರೀಗಳು ನಿಜ ಅರ್ಥದಲ್ಲಿ ಸರ್ವಸಮಾಜದ ಸಂತರು. ಶ್ರೀ ಮಠದ ಮೇಲೆ ನಡೆಯುತ್ತಿರುವ ಬ್ಲಾಕಮೆಲ್ ಹಾಗೂ ಷಡ್ಯಂತ್ರಗಳ ಸಮಗ್ರ ತನಿಖೆ ಆಗಬೇಕು ಎಂದರು.
ಗೋಕರ್ಣದ ಜಿಲ್ಲಾ ಪಂಚಾಯತ್ ಸದಸ್ಯ, ನಾಡವ ಸಮಾಜದ ಮುಖಂಡ ಶ್ರೀ ಪ್ರದೀಪ್ ನಾಯ್ಕ್ ಮಾತನಾಡಿ ಈ ಷಡ್ಯಂತ್ರದಲ್ಲಿ ರಾಷ್ಟ್ರಮಟ್ಟದ ಕೆಲವು ವ್ಯಕ್ತಿಗಳು ಭಾಗವಹಿಸಿರುವ ಸ್ಪಷ್ಟ ಸೂಚನೆಯಿದ್ದು ಅಂತವರನ್ನು ಬಯಲಿಗೆ ತರಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಅದು ಎಂತಹದೇ ಷಡ್ಯಂತ್ರ ನಡೆದರೂ ಶ್ರೀಗಳ ನಿಷ್ಕಲ್ಮಶ ವ್ಯಕ್ತಿತ್ವದ ಅರಿವಿರುವ ಎಲ್ಲಾ ಸಮುದಾಯದ ಜನರು ಎಂದಿಗೂ ಶ್ರೀಗಳ ಜೊತೆಗೇ ಇರುತ್ತೇವೆ ಎಂದು ಅಭಿಪ್ರಾಯಪಟ್ಟರು.
ಮುಕ್ರಿ ಸಮಾಜದ ಪ್ರತಿನಿಧಿಯಾಗಿ ಮಾತನಾಡಿದ ಶ್ರೀಮತಿ ಮಂಜುಳಾ ಮುಕ್ರಿ, ಯಾವುದೇ ವ್ಯಕ್ತಿಗೆ ಮಹಿಳೆಯರ ಮೇಲೆ ಬೇರೆ ಭಾವನೆಗಲಿದ್ದಲ್ಲಿ ಮಹಿಳೆಗೆ ತಕ್ಷಣ ಗೊತ್ತಾಗುತ್ತದೆ. ಅಂತಹುದರಲ್ಲಿ ಇಲ್ಲಿ ಸಹಸ್ರಾರು ಮಹಿಳೆಯರು ಸೇರಿರುವುದು ಹಾಗೂ ಶ್ರೀಮಠಕ್ಕೆ ಆಗಮಿಸುತ್ತಿರುವುದು ಈ ಪ್ರಕರಣಗಳ ಹಿಂದಿರುವುದು ಕೆಲವೇ ಕೆಲವು ಜನರ ಸ್ವಹಿತಾಸಕ್ತಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯವಿತ್ತರು.
ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಶ್ರೀ ಲಕ್ಷ್ಮೀನಾರಾಯಣ ಮಾತನಾಡಿ, ವಿಶ್ವ ಗೋ ಸಮ್ಮೇಳನದ ಸಂದರ್ಭದಿಂದ ಶ್ರೀಗಳ ಜೊತೆ ಅತ್ಯಂತ ಹತ್ತಿರದಿಂದ ಒಡನಾಡಿದ್ದು ಅದರ ಅನುಭವದ ಮೇಲೆ ಹೇಳುವುದಾದರೆ, ಶ್ರೀಗಳ ಮೇಲೆ ಬಂದಿರುವ ಈ ದೂರುಗಳು ಅವರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಕೊನೆಯ ಪ್ರಯತ್ನ ಎಂಬುದು ಸ್ಪಷ್ಟ ಎಂದರು.
ಸಮಾಜ ಸಮಷ್ಟಿ ಸಂಘಟನೆ ಏರ್ಪಡಿಸಿದ್ದ ಸರ್ವಸಮಾಜ ಸಮಾವೇಶದಲ್ಲಿ ಪಾಲ್ಗೊಂಡ ವಿವಿಧ ಸಮಾಜಗಳ ಸಾವಿರಾರು ಪ್ರತಿನಿಧಿಗಳು ಒಕ್ಕೊರಲಿನಿಂದ ಶ್ರೀ ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ನಡೆಯುತ್ತಿರುವ ನಿರಂತರ ಷಡ್ಯಂತ್ರ ಖಂಡಿಸಿ, ಶ್ರೀಗಳ ಮೇಲೆ ನಡೆದ ಬ್ಲಾಕಮೆಲ್ ಪ್ರಕರಣದ ಶೀಘ್ರ ತನಿಖೆಯನ್ನು ಒಳಗೊಂಡು ಷಡ್ಯಂತ್ರಗಳ ಸಮಗ್ರ ತನಿಖೆ ಮಾಡಬೇಕು ಮತ್ತು ಎಲ್ಲ ಸಮಾಜಗಳೂ ಶ್ರೀಗಳೊಂದಿಗೆ ಇರುವ ಸತ್ಯದ ಜೊತೆಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಶೈವ ಮುಖಂಡರಾದ ಕೇಶವ ಕುಮಾರ್, ಹೊರನಾಡು ಕ್ಷೇತ್ರದ ಶ್ರೀ ರಾಜಗೋಪಾಲ ಜೋಷಿ, ಅಗರವಾಲ್ ಸಮುದಾಯದ ಮಹಾವೀರ್ ಸೋನಿಕ ಸೇರಿದಂತೆ ಹಲವಾರು ಸಮಾಜದ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹವ್ಯಕ ಸಮಾಜದ ಮುಖಂಡ ಶಿವಮೊಗ್ಗ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶ್ರೀ ಎಂ.ಜಿ.ಕೃಷ್ಣಮೂರ್ತಿ, ದಲಿತ ಸಮುದಾಯದ ಚಿ.ನಾ.ರಾಮು, ನಾಡವ ಸಮಾಜದ ಮಹೇಶ್ ಶೆಟ್ಟಿ, ಖಾರ್ವಿ ಸಮಾಜದ ಶ್ರೀ ವೆಂಕಟರಮಣ ಖಾರ್ವಿ, ಮಾರಪ್ಪ ಗುರೂಜಿ, ಹಾಲಕ್ಕಿ ಸಮುದಾಯದ ರಾಧಾಕೃಷ್ಣ ಗೌಡರೂ ಸೇರಿದಂತೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಎಂದು ನಡೆದುಕೊಳ್ಳುವ ಮೂವತ್ತಾರು ಸಮುದಾಯದ ಪ್ರತಿನಿಧಿಗಳು ವೇದಿಕೆ ಮೇಲೆ ಇದ್ದರು.
November 1, 2015 at 11:34 AM
Hare Raama.
E melina Photo mattu Pratibhatana patravannu Nodi Tumba Santoshavayitu.
Hare Raama.
Shankar Bhat Panvel.