ನಗುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬು ಬೇವಿನೆಸಳಂಗ|
ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ
ಶಿವನ ಕೈ ಅಲಗು ಹೊಳೆದ್ ಹಾಂಗ||
Source: Sri’s Collection
Facebook Comments Box
ನಗುವ ಕಂದನ...
ನಗುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬು ಬೇವಿನೆಸಳಂಗ|
ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ
ಶಿವನ ಕೈ ಅಲಗು ಹೊಳೆದ್ ಹಾಂಗ||
Source: Sri’s Collection
July 14, 2010 at 11:15 AM
hell gets converted to heaven because of kids, sometimes they also create havoc.
.
if kids are there then it is more of 🙂 🙂 🙂
July 14, 2010 at 11:38 AM
ಮಗುವಿನಂದದ ಮನ ಮೋಕ್ಷಕ್ಕೆ ಸೋಪಾನ..
ಗುರು ಕಾರುಣ್ಯದಿಂದ ಜೀವನ ಪಾವನ……
||ಹರೇ ರಾಮ||
July 14, 2010 at 11:41 AM
ಧನ್ಯರಾದೆವು (ರಾಘವ ರಂಜನಾ ಈಶಾನ)
July 14, 2010 at 11:45 AM
ಮಡಿ ರಾಘುವಿನ ಮಾಣಿ ಈಶಾನ ಅಲ್ದ ಇದು..!
July 14, 2010 at 4:00 PM
ಹರೇರಾಮ.. ನಗುವ ಕಂದನ ಕಿಲಕಿಲ ದೇವರ ಅನುಗ್ರಹದಂತೆ.. ಆ ಅಮೂಲ್ಯ ಅನುಭವದ ಅಮೃತಧಾರೆ, ಲೋಕದ ಸಮಸ್ತ ದಂಪತಿಗಳಿಗೂ ಸಿಗಬೇಕು.. ಮುಂದಿನ ಪೀಳಿಗೆ ಒಳ್ಳೆಯ ಆಯುರಾರೋಗ್ಯದಿಂದ ಎಲ್ಲಾ ಕುಲವಧುವಿನ ಗರ್ಭದಿಂದ ಹೊರ ಬರಲಿ… ಯಾವ ಕುಲವಧುವೂ ಪುತ್ರ ಭಾಗ್ಯದಿಂದ ವಂಚಿತರಾಗದಿರಲಿ.. ಭೂಮಂಡಲದ ಸಮಸ್ತ ದೇವರ, ಪ್ರಕೃತಿಯ, ಶ್ರೀ ಗುರುಗಳ ಆಶೀರ್ವಾದ ಎಲ್ಲರ ಮೇಲಿರಲಿ… ಹರೇ ರಾಮ…
July 14, 2010 at 7:18 PM
ನಗು ಮೊಗ ಚಂದ..ಚಂದದ ಮೊಗಕ್ಕೆ ನಗು ಇನ್ನೂ ಚಂದ… ಮಗು ನಕ್ಕರೆ ಅದು ಎಲ್ಲಕ್ಕಿಂತ ಚಂದ 🙂
July 14, 2010 at 9:37 PM
ಮುದ್ದಾದ ಕಂದನ ನಗುವಿನಂತೆ ಬಿಚ್ಚಿಕೊಳ್ಳುವ ಸಾಲುಗಳು
July 14, 2010 at 11:20 PM
“ನಗುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬು ಬೇವಿನೆಸಳಂಗ|
ಕುಡಿಹುಬ್ಬು ಬೇವಿನೆಸಳಂಗ ಕಣ್ಣೋಟ
ಶಿವನ ಕೈ ಅಲಗು ಹೊಳೆದ್ ಹಾಂಗ||”
ಮಗುವಿನಷ್ಟೆ ಸು೦ದರ ಈ ಗೀತೆ
.
“ಶಿವನ ಕೈ ಅಲಗು ಹೊಳೆದ್ ಹಾಂಗ||”
ಏನೀದೇನಿದೀ ದರ್ಶನ.. ಆಕರ್ಷನ
.
ಜಾನಪದ ಗೀತೆ ಎ೦ದು ಕಾಣುತ್ತದೆ. ಇಡೀ ಭಾರತದ / ಸ೦ಸ್ಕೃತಿಯ ಕಥೆ ಗೋವಿನ ಕಥೆಯಾಗಿದೆ, “ಕೃಷ್ಣನ ಕೊಳಲಿನ ಕರೆ..”ಗೆ ಸೋಲುವವರು ಕಡಿಮೆಯಾಗಿ ಗೋವುಗಳು ಕಡಿಮೆಯಾದವು.
July 15, 2010 at 10:36 AM
ಗಾಜನ ಕಣ್ಣೊಳಗೆ ಸಾವಿರ ಕನಸುಗಳು…ಎಲ್ಲವನ್ನೂ ತಿಳಿಯುವ ಕೌತುಕ…ಕಾಣುವಷ್ಟನ್ನೂ ಕಣ್ಣಿನೊಳಗೇ ತುಂಬಿಕೊಳ್ಳುವ ಪ್ರಯತ್ನ… ಹಲವು ಆಶ್ಚರ್ಯಗಳು..ದೊಡ್ಡವರೆನಿಸಿಕೊಂಡವರ ಮೂರ್ಖತನಗಳು !! ಯಾಕೆ.. ಯಾಕೆ.. ಎಂಬ ಪ್ರಶ್ನೆಗಳು. ಎಲ್ಲವೂ ಹೊಸತು…… ಇಲ್ಲಿನ ಮಾಯಾಲೋಕವ ಕಂಡು ಬೆರಗಾದ ಈ ಕಂಗಳಿಗೆ ದೇವರ ನಗು ಕಾಣುತ್ತಿದೆಯೇ? ಅದಕ್ಕೇ ಇರಬೇಕು ತುಟಿಗಳಲ್ಲಿ ನಗುವಿನ ಆಭರಣ !!
July 15, 2010 at 10:37 AM
ಯಾರೀ ಪುಟಾಣಿ? lots of love for her/him
July 20, 2010 at 5:25 PM
Putani is ours (Ranjana Raghava) his name is Ishaana