ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಒಂದು ಕಿ. ಮೀ. ದೂರದಲ್ಲಿರುವ ಬಜಕ್ಕೂಡ್ಲು ಗೋಶಾಲೆ ತನ್ನ ವಿಶೇಷವಾದ ಔಷಧಿಗಳಿಂದ ಮತ್ತು ಸಮಾಜಮುಖಿ ಕಾರ್ಯದಿಂದ ಜನರನ್ನುನ್ನು ಆಕರ್ಷಿಸುತ್ತಿದೆ. ಈ ಗೋಶಾಲೆಯ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ ವಾತ್ಸಲ್ಯ-ಮಕ್ಕಳ ಟಾನಿಕ್, ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು ಬಹಳ ಪ್ರಸಿದ್ಧಿ ಪಡೆದಿದೆ. ಹೊಸ ಉತ್ಪನ್ನ ತಯಾರಿ ಹಾಗೂ ಸಂಶೋಧನೆಯಲ್ಲಿ ಇದು ಹೆಸರುವಾಸಿಯಾಗಿದ್ದು ಕಳೆದ ವರ್ಷ ಭಾರತವನ್ನು ಭಯಗೊಳಿಸಿದ್ದ ಚಿಕನ್‌ಗುನ್ಯ ಜ್ವರಕ್ಕೆ ಉಚಿತ ಚಿಕಿತ್ಸಾ ಶಿಬಿರಗಳನ್ನು ಕೇರಳ ಕಾಸರಗೋಡು ಜಿಲ್ಲೆ ಮತ್ತು ನೆರೆಯ ಕರ್ನಾಟಕದ ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಮುಂತಾದ ಹತ್ತು ಹಲವು ಕಡೆ ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಗೋ ಆಧಾರಿತ ಕೃಷಿ ಬಗ್ಗೆ ಜನ ಜಾಗೃತಿ ಮೂಡಿಸುತ್ತಾ, ಕೃಷಿಕರಿಗೆ ಗೋವುಗಳನ್ನು ನೀಡುತ್ತಾ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಮತ್ತೊಂದು ಮೈಲಿಗಲ್ಲು. ಈ ಗೋವುಗಳನ್ನು ತಳಿಸಂಕರ ಮಾಡದಂತೆ, ಮತ್ತು ಅವುಗಳ ಇರುವಿಕೆಯ ಸ್ಥಳಗಳಲ್ಲಿ ಸಮೀಕ್ಷೆ ನಡೆಸುತ್ತಾ ಶ್ರೀಗಳ ಆಶಯವನ್ನು ನೆರವೇರಿಸುವತ್ತ ಬಹಳ ಕೆಲಸ ಮಾಡಿದೆ.
ದೇಶೀ ಸಂತತಿಗೆ ಸೇರಿರುವ ಕಾಸರಗೋಡು ತಳಿ ಬಗ್ಗೆ ಜಾಗೃತಿ ಹಾಗೂ ಅಭಿವೃದ್ಧಿ ಯೋಜನೆ ಇಲ್ಲಿ ನಡೆಯುತ್ತಿದೆ. ಗೋಶಾಲೆಯಲ್ಲಿ ಇಂದು ನೂರಕ್ಕೂ ಮಿಕ್ಕಿ ಹಸು, ಕರು, ಹೋರಿಗಳಿದ್ದು ಇಬ್ಬರು ಸಿಬ್ಬಂದಿಗಳು ಸೇವೆಯಲ್ಲಿರುತ್ತಾರೆ.

ನೂತನ ಯೋಜನೆ :
ಸ್ಥಳದ ಅಭಾವ, ನೂತನ ಕೃಷಿ, ಸಂಶೋಧನಾ ಯೋಜನೆ, ಗೋವುಗಳ ಸಂಖ್ಯೆಯಲ್ಲಿನ ವೃದ್ಧಿ, ಇತ್ಯಾದಿ ಕಾರಣಗಳಿಂದ, ಈಗ ಇರುವ ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದ ನೂತನ ಸ್ಥಳದತ್ತ ಗೋಶಾಲೆ ವರ್ಗಾವಣೆಗೊಳ್ಳಲಿದೆ. ಶೂನ್ಯ ಬಂಡವಾಳ ಕೃಷಿ ಸಂಶೋಧನೆ, ಔಷಧೀಯ ಸಸ್ಯಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ. ನೂತನ ಸ್ಥಳದ ಖರೀದಿ ಕಾರ್ಯ ಪ್ರಗತಿಯಲ್ಲಿದ್ದು ಕೆಲವೇ ಸಮಯದಲ್ಲಿ ಗೋಶಾಲೆ ಅಲ್ಲಿ ಕಾರ್ಯಪ್ರವೃತ್ತವಾಗಲಿದೆ
ಈ ಕೆಲಸ ಕಾರ್ಯಗಳಿಗೆ ಧನ ಸಹಾಯದ ಅಗತ್ಯ ಇದ್ದು ತಮ್ಮ ತನು-ಮನ-ಧನದ ಸಹಕಾರವನ್ನು ಗೋಶಾಲೆ ಅಪೇಕ್ಷಿಸುತ್ತದೆ.

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಅಮೃತಧಾರಾ ಗೋಶಾಲೆ, ಬಜಕ್ಕೂಡ್ಲು
ಅಂಚೆ : ಪೆರ್ಲ, ಕಾಸರಗೋಡು ಜಿಲ್ಲೆ, ೬೭೧೫೫೨
ಸಂಪರ್ಕ ವ್ಯಕ್ತಿ : ಜಗದೀಶ್ ಬಿ.ಜಿ. ೯೪೯೫೯೦೫೦೬೧

Facebook Comments Box