ಸಹ್ಯಾದ್ರಿಯ ತಪ್ಪಲಲ್ಲಿರುವ ಹೊನ್ನಾವರ ತಾಲೂಕಿನ ಸುಂದರ ಗ್ರಾಮೀಣ ಪ್ರದೇಶ ಸುಬ್ರಹ್ಮಣ್ಯದಲ್ಲಿರುವ ಈ ಮಹಾವಿದ್ಯಾಲಯ ನಮ್ಮ ರಾಜ್ಯದ ವಿಶೇಷ ಸಂಸ್ಕೃತ ವಿದ್ಯಾಲಯಗಳಲ್ಲೊಂದಾಗಿದೆ.

ಆರು ದಶಕಗಳ ಹಿಂದೆ ಈ ಭಾಗದ ಸಾಮವೇದಿಗಳೆಲ್ಲರೂ ಕೂಡಿ ಕ್ಷೀಣಿಸುತ್ತಿರುವ ಸಾಮವೇದ ಪರಂಪರೆಯ ಉಜ್ಜೀವನಕ್ಕಾಗಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಹೊಸಾಕುಳಿ ಗ್ರಾಮದಲ್ಲಿ ಸಾಮವೇದ ಶಾಲೆಯೊಂದನ್ನು ಸ್ಥಾಪಿಸಿದರು. ನಂತರ ಪಕ್ಕದ ಸುಬ್ರಹ್ಮಣ್ಯಕ್ಕೆ ಸ್ಥಳಾಂತರಗೊಂಡ ಈ ಶಾಲೆಯು ಶ್ರೀಗಳ ಅಪ್ಪಣೆಯಂತೆ ಕೃಷ್ಣಯಜುರ್ವೇದ ಮತ್ತು ಸಂಸ್ಕೃತ ಅಧ್ಯಯನವನ್ನೊಳಗೊಂಡ ಪಾಠಶಾಲೆಯಾಗಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲೇ ನಡೆಯತೊಡಗಿತು. ಕಾಲಕ್ರಮದಲ್ಲಿ ತನ್ನದೇ ಆದ ನೂತನ ಕಟ್ಟಡವನ್ನು ಹೊಂದಿ ಸರ್ಕಾರದ ಅನುದಾನದೊಂದಿಗೆ ಪ್ರಗತಿಪಥದಲ್ಲಿ ಮುನ್ನಡೆಯತೊಡUತು.
ಶ್ರೀಮಠದ ಆಸ್ಥಾನವಿದ್ವಾಂಸರೂ, ಸರ್ವಜನಮಾನ್ಯರೂ, ಸೂರಿ ಎಂಬ ಸಾರ್ಥ ಉಪಾಧಿಭಾಜನರೂ  ಆದ ಬ್ರಹ್ಮಶ್ರೀ ರಾಮಚಂದ್ರಶಾಸ್ತ್ರಿಗಳು ಈ ಪಾಠಶಾಲೆಯ ಮುಖ್ಯಾಧ್ಯಾಪಕರಾಗಿ ಬಂದ ಮೇಲೆ ಶಾಲೆಯು ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದಿತು. ಅವರು ಸುಮಾರು ವರ್ಷಗಳವರೆಗೆ ಪಾಠಶಾಲೆಯನ್ನು ಮನ್ನೆಡೆಸಿದರು. ಪರಮಪೂಜ್ಯ ಶ್ರೀ ಶ್ರೀಗಳವರ ಮಹದನುಗ್ರಹದೊಂದಿಗೆ ಪಾಠಶಾಲೆಯು ೧೯೯೦ರಲ್ಲಿ ಮಹಾವಿದ್ಯಾಲಯವಾಗಿ ರೂಪುಗೊಂಡಿತು.

ಹಿಂದಿನ ಪೀಠಾಧಿಪತಿಗಳ ಸಂಕಲ್ಪಕ್ಕೆ ಅಭಿವೃದ್ಧಿಯ ಕಲಶವನ್ನಿಟ್ಟವರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು. ದೇಶದಲ್ಲೇ ಸಾಮವೇದ ರಾಣಾಯನೀ ಶಾಖೆಯು ವಿನಾಶದ ಅಂಚಿನಲ್ಲಿರುವದನ್ನು ಗಮನಿಸಿ ಶ್ರೀರಾಮಚಂದ್ರಾಪುರಮಠದಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಸಾಮವೇದ ಸಮ್ಮೇಳನವನ್ನು ನಡೆಸಿ ಸಾಮವೇದದ ಕುರಿತು ಅನೇಕ ಗೋಷ್ಠಿಗಳನ್ನು ನಡೆಸಿ ಜನಜಾಗ್ರತಿಯನ್ನುಂಟು ಮಾಡಿದ್ದಾರೆ. ಈ ಮಹಾವಿದ್ಯಾಲಯದಲ್ಲಿ ಶಾಸ್ತ್ರ ಹಾಗೂ ವೇದದ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಭವನ ಹಾಗೂ ನುರಿತ ಶಿಕ್ಷಕರನ್ನು ಆಯೋಜಿಸಲಾಗಿದ್ದು, ಭೋಜನಾದಿ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ಗೋಮಾತೆಯನ್ನು ಕುರಿತು ವಿಶ್ವಕ್ಕೆ ವಿಶಿಷ್ಟವಾದ ಚಿಂತನೆಯನ್ನು ನೀಡಿದ ಮಹಾಸ್ವಾಮಿಗಳು ಪ್ರತಿಭಾವಂತ ಮತ್ತು ಬಡವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಸಂಪೂರ್ಣವಾಗಲೆಂಬ ಸದುದ್ದೇಶದ ಸತ್ಸಂಕಲ್ಪದ ಕೃಪಾಕಟಾಕ್ಷ ಬೀರಿದ್ದಾರೆ.

ಮಹಾವಿದ್ಯಾಲಯವಾದಾಗಿನಂದ ಇಂದಿನವರೆಗೂ ಪ್ರಾಚಾರ್ಯರಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವವರು ವಿದ್ವಾನ್ ವಿ.ಜಿ.ಹೆಗಡೆ, ಗುಡ್ಗೆಯವರು. ಪಾಠಶಾಲೆಯು ಶ್ರೀಗುರುಗಳ ದಿವ್ಯ ಮಾರ್ಗದರ್ಶನದಲ್ಲಿ ತನ್ನ ಪ್ರಗತಿಯನ್ನು ಬಹುಮುಖಿಯಾಗಿ ವಿಸ್ತರಿಸಿಕೊಳ್ಳುತ್ತಾ ಭವ್ಯತೆ ಮತ್ತು ವಿಶಾಲತೆಯನ್ನು ಪಡೆದಿದೆ. ಮಹಾವಿದ್ಯಾಲಯವು ಇಂದು ಸುಸಜ್ಜಿತ ಪಾಠಪ್ರಕೋಷ್ಠಗಳು, ವಿಶಾಲ ಕ್ರೀಡಾಂಗಣ, ಸೌಕರ್ಯಯುಕ್ತ ಶ್ರೀ ರಾಘವೇಶ್ವರ ಭಾರತೀ ಸಭಾಭವನ, ವಿದ್ಯಾರ್ಥಿನಿಲಯ, ಭೋಜನ ಶಾಲೆ, ವೇದಕುಟೀರ ಮುಂತಾದವುಗಳನ್ನು ಹೊಂದಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತ ಈ ಭಾಗದಲ್ಲೇ ವಿಶಿಷ್ಟ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ.

ಪಠ್ಯಕ್ರಮ
ಈ ಮಹಾವಿದ್ಯಾಲಯದಲ್ಲಿ ಸಾಮವೇದ ಮತ್ತು ಕೃಷ್ಣಯಜುರ್ವೇದ ಪ್ರಥಮಾದಿಂದ ಮೂಲದವರೆಗೆ ಮತ್ತು ಸಂಸ್ಕೃತ ಪ್ರಥಮಾದಿಂದ ವಿದ್ವದುತ್ತಮಾ (ಸ್ನಾತಕೋತ್ತರ ಶಿಕ್ಷಣ) ವರೆಗಿನ ಶಿಕ್ಷಣವನ್ನು ನೀಡಲಾಗುತ್ತಿದ್ದು ಕರ್ನಾಟಕ ಸರಕಾರವು ನಿಗದಿಪಡಿಸಿದ ಪಠ್ಯಕ್ರಮದ ಜೊತೆಗೆ ವೈದಿಕ ಪಠ್ಯಪೂರಕವಾಗಿ ಪೂರ್ವಾಪರ ಪ್ರಯೋಗಗಳನ್ನೂ ಬೊಧಿಸಲಾಗುತ್ತದೆ.

ನಡೆಯುವ ತರಗತಿಗಳು
ಸಂಸ್ಕೃತ ಸ್ನಾತಕಪೂರ್ವ ತರಗತಿಗಳು
ಸಂಸ್ಕೃತ ಪ್ರಥಮಾ ೧
ಸಂಸ್ಕೃತ ಪ್ರಥಮಾ ೨
ಸಂಸ್ಕೃತ ಪ್ರಥಮಾ ೩

ಸಂಸ್ಕೃತ ಕಾವ್ಯ ೧
ಸಂಸ್ಕೃತ ಕಾವ್ಯ ೨

ಸಂಸ್ಕೃತ ಸಾಹಿತ್ಯ ೧
ಸಂಸ್ಕೃತ ಸಾಹಿತ್ಯ ೨
ಸಂಸ್ಕೃತ ಸಾಹಿತ್ಯ ೩

ಸಂಸ್ಕೃತ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ವತ್ತರಗತಿಗಳು
ಅಲಂಕಾರಶಾಸ್ತ್ರ
ವಿದ್ವನ್ಮಧ್ಯಮಾ ೧
ವಿದ್ವನ್ಮಧ್ಯಮಾ ೨
ವಿದ್ವನ್ಮಧ್ಯಮಾ ೩

ವಿದ್ವದುತ್ತಮಾ ೧
ವಿದ್ವದುತ್ತಮಾ ೨

ವ್ಯಾಕರಣಶಾಸ್ತ್ರ
ವಿದ್ವನ್ಮಧ್ಯಮಾ ೧
ವಿದ್ವನ್ಮಧ್ಯಮಾ ೨
ವಿದ್ವನ್ಮಧ್ಯಮಾ ೩

ವಿದ್ವದುತ್ತಮಾ ೧
ವಿದ್ವದುತ್ತಮಾ ೨

ಧರ್ಮಶಾಸ್ತ್ರ
ವಿದ್ವನ್ಮಧ್ಯಮಾ ೧
ವಿದ್ವನ್ಮಧ್ಯಮಾ ೨
ವಿದ್ವನ್ಮಧ್ಯಮಾ ೩

ವಿದ್ವದುತ್ತಮಾ ೧
ವಿದ್ವದುತ್ತಮಾ ೨

ಜ್ಯೋತಿಶ್ಶಾಸ್ತ್ರ
ವಿದ್ವನ್ಮಧ್ಯಮಾ ೧
ವಿದ್ವನ್ಮಧ್ಯಮಾ ೨
ವಿದ್ವನ್ಮಧ್ಯಮಾ ೩

ವಿದ್ವದುತ್ತಮಾ ೧
ವಿದ್ವದುತ್ತಮಾ ೨
ವೇದತರಗತಿಗಳು
ಕೃಷ್ಣಯಜುರ್ವೇದ – ಪ್ರಥಮಾ
ಪ್ರವೇಶ
ಮತ್ತು ಮೂಲ
ಸಾಮವೇದ – ಪ್ರಥಮಾ
ಪ್ರವೇಶ
ಮತ್ತು ಮೂಲ
ಆಗಮ ತರಗತಿಗಳು
ವಾತುಲಾಗಮ – ಪ್ರವರ
ಮತ್ತು ಪ್ರವೀಣ

ಅಧ್ಯಾಪಕ ವೃಂದ
ಮಹಾವಿದ್ಯಾಲಯದ ಅಧ್ಯಾಪಕರೆಲ್ಲರೂ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಪಡೆದವರಾಗಿದ್ದು ನುರಿತ ಮತ್ತು ಸಮರ್ಪಿತ ಶಿಕ್ಷಕರಾಗಿದ್ದಾರೆ.

ಪರೀಕ್ಷೆಗಳು
ಕರ್ನಾಟಕ ಸರಕಾರವು ನಡೆಸುವ ಸ್ನಾತಕೋತ್ತರ ಹಂತದವರೆಗಿನ ಸಂಸ್ಕೃತ ಮತ್ತು ಮೂಲದವರೆಗಿನ ವೇದ ಪರೀಕ್ಷೆಗಳಿಗೆ ನಮ್ಮ ಮಹಾವಿದ್ಯಾಲಯವು ಅಧಿಕೃತ ಪರೀಕ್ಷಾಕೇಂದ್ರವಾಗಿದೆ.

ವಿದ್ಯಾರ್ಥಿಗಳ ಸಾಧನೆ
ವಿದ್ಯಾರ್ಥಿಗಳೆಲ್ಲರೂ ಶೃದ್ಧೆಯಿಂದ ಅಧ್ಯಯನ ಮಾಡಿ ಪರೀಕ್ಷೆಗಳಲ್ಲಿ ಅತ್ಯುತ್ತಮಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮಹಾವಿದ್ಯಾಲಯದ ಫ಼ಲಿತಾಂಶವು ಸಾಮಾನ್ಯವಾಗಿ ೧೦೦% ಇರುತ್ತದೆ. ಪಠ್ಯಪೂರಕ ಚಟುವಟಿಕೆಗಳಲ್ಲಿ ಈ ವಿದ್ಯಾಲಯವು ಅಗ್ರೇಸರವಾಗಿದ್ದು ರಾಜ್ಯಮಟ್ಟದ ಸಂಸ್ಕೃತ ವಾಕ್ಪ್ರತಿಯೋಗಿತಾದಲ್ಲಿ ಪ್ರಥಮಸ್ಥಾನವನ್ನು ಪಡೆದು ಕೀರ್ತಿಶಾಲಿಯಾಗಿದೆ. ರಾಷ್ಟ್ರಮಟ್ಟದ ಅನೇಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದು ಮಹಾವಿದ್ಯಾಲಯದ ಯಶೋವೈಭವವನ್ನು ವಿಸ್ತರಿಸಿದ್ದಾರೆ.

ಮುಂದಿನ ಯೋಜನೆಗಳು
ಶಾಸ್ತ್ರರಕ್ಷಣೆ, ವೇದರಕ್ಷಣೆ, ಪರಂಪರೆಯ ರಕ್ಷಣೆ, ಚಾರಿತ್ರ್ಯದ ರಕ್ಷಣೆ, ಸನಾತನ ಪದ್ದತಿಗಳ ವೈಜ್ಞಾನಿಕ ವಿಶ್ಲೇಷಣೆ, ವೇದಶಾಸ್ತ್ರಗಳನ್ನು ಸಾಮಾನ್ಯಜನರ ಬಳಿಗೂ ತಲುಪಿಸುವ ಚಿಂತನೆ.

ಶಾಸ್ತ್ರ ರಕ್ಷಣೆ:
ಪ್ರಸ್ತುತ ಮಹಾವಿದ್ಯಾಲಯದಲ್ಲಿ ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ ಜ್ಯೋತಿಷ್ಯಶಾಸ್ತ್ರ ಮತ್ತು ಆಗಮಶಾಸ್ತ್ರ ಇವುಗಳ ಪಾಠಪ್ರವಚನಗಳು ಪರಿಣತ ಪ್ರಾಧ್ಯಾಪಕರುಗಳಿಂದ ನಡೆಯುತ್ತಿವೆ. ಇದರ ಜೊತೆಗೆ ನವೀನ ನ್ಯಾಯ, ಪೂರ್ವೋತ್ತರ ಮಿಮಾಂಸಾ ಶಾಸ್ತ್ರಗಳನ್ನು ಬೋಧಿಸುವದು ಹಾಗೂ ತನ್ಮೂಲಕ ಈ ಶಾಸ್ತ್ರಗಳ ರಕ್ಷಣೆಯ ಉದ್ದೇಶ ನಮ್ಮ ಮುಂದಿದೆ.

ವೇದರಕ್ಷಣೆ:
ಪ್ರಸ್ತುತ ಕೃಷ್ಣಯಜುರ್ವೇದ ಹಾಗೂ ಸಾಮವೇದದ ಪಾಠಗಳು ತಜ್ಞರಾದ ಅಧ್ಯಾಪಕರಿಂದ ನಡೆಯುತ್ತಿವೆ. ಇದರೊಂದಿಗೆ ಋಗ್ವೇದ ಹಾಗೂ ಅಥರ್ವವೇದಗಳ ಪಾಠವನ್ನು ಆರಂಭಿಸುವ ಮೂಲಕ ಚತುರ್ವೇದಗಳ ರಕ್ಷಣೆಯ ಬಗ್ಗೆ ಶ್ರಮವಹಿಸುವದು.

ಪರಂಪರೆ ರಕ್ಷಣೆ:
ನಶಿಸುತ್ತಿರುವ ವೈದಿಕ ಆಚರಣೆ, ಶಾಸ್ತ್ರಚಿಂತನೆ, ಧಾರ್ಮಿಕ ಆಲೋಚನೆಗಳನ್ನು ಜನಸಾಮಾನ್ಯರಲ್ಲಿ ಜಾಗ್ರತಗೊಳಿಸುವದು. ಹಬ್ಬ-ಹರಿದಿನಗಳ ಆಚರಣೆ ಮತ್ತು ಆಹಾರ-ವ್ಯವಹಾರಗಳ ಸೂಕ್ಷ್ಮಾತಿಸೂಕ್ಷ್ಮಚಿಂತನೆಗಳತ್ತ ವೈಜ್ಞಾನಿಕ ಹಿನ್ನೆಲೆಯಲ್ಲಿ ಶಾಸ್ತ್ರೀಯ ಚರ್ಚೆ. ದೇವಾಲಯಗಳು ಮತ್ತು ಅದರ ಮಹತ್ವ ಹಾಗೂ ದೇವತಾ ಅನುಷ್ಠಾನಗಳಿಂದ ಪುರುಷಾರ್ಥಚತುಷ್ಟಯದ ಸಾಧನೆ ಇವುಗಳ ಕುರಿತು ವಿಚಾರ-ಮಂಥನ.

ಚಾರಿತ್ರ್ಯ ರಕ್ಷಣೆ:
ವ್ಯಕ್ತಿಗತ ಹಾಗೂ ಸಾಮೂಹಿಕ ಚಾರಿತ್ರ್ಯರಕ್ಷಣೆಗೋಸ್ಕರ ಯೋಗ-ಧ್ಯಾನ ಮುಂತಾದ ನೈತಿಕಶಿಕ್ಷಣದತ್ತ ವಿಶೇಷ ತರಬೇತಿ.

ಸನಾತನ ಪದ್ದತಿಗಳು:
ಭಾರತೀಯ ಸನಾತನ ಪದ್ದತಿಗಳನ್ನು ಸಂರಕ್ಷಿಸುವದಕ್ಕೋಸ್ಕರ ವಿಶೇಷವಾಗಿ ಉಪನ್ಯಾಸ, ಪ್ರಾಯೋಗಿಕ ವಿಧಿ ವಿಧಾನಗಳ ಪ್ರಾತ್ಯಕ್ಷಿಕೆ ಮುಂತಾದವುಗಳನ್ನು ಕಾಲಕಾಲಕ್ಕೆ ಏರ್ಪಡಿಸುವದು.

ಪ್ರಗತಿಯ ಮೈಲುಗಲ್ಲುಗಳು
೧೯೫೨ – ಸ್ಥಾಪನೆ
೧೯೭೦ – ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ವಿದ್ಯಾಸಂಸ್ಥೆಯಾಗಿ ಅಧಿಕೃತ ನೋಂದಣಿ
೧೯೭೭ – ಪ್ರಥಮಾ, ಕಾವ್ಯ, ಸಾಹಿತ್ಯ, ಕೃಷ್ಣಯಜುರ್ವೇದ ಮತ್ತು ಸಾಮವೇದ ತರಗತಿಗಳಿಗೆ ಕಾಯಂ ಮಾನ್ಯತೆ
೧೯೭೮ – ಬ್ರಹ್ಮೀಭೂತ ಶ್ರೀಮಜ್ಜಗದುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದೊಂದಿಗೆ ಭಾರತ ಸರಕಾರದ ಸಚಿವೆಯಾದ ಶ್ರೀಮತಿ ಸರೋಜಿನಿ ಮಹಿಷಿಯವರಿಂದ ಸ್ವಂತ ಸ್ಥಳದಲ್ಲಿ ಶಾಲಾಕಟ್ಟಡದ ಶಂಕುಸ್ಥಾಪನೆ.
೧೯೭೯ – ಅನುದಾನಸಂಹಿತೆ ನಿಯಮದಂತೆ ಅನುದಾನಿತ ಸಂಸ್ಥೆಯೆಂದು ಸರಕಾರದಿಂದ ಮಾನ್ಯತೆ.
೧೯೮೨ – ಪ್ರಥಮಾ, ಕಾವ್ಯ, ಸಾಹಿತ್ಯ ತರಗತಿಗಳ ಎಲ್ಲ ಅಧ್ಯಾಪಕರುಗಳ ವೇತನ ಅನುದಾನ.
೧೯೯೦ – ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯವಾಗಿ ಪರಿವರ್ತನೆ.
೧೯೯೭ – ಮಹಾವಿದ್ಯಾಲಯದ ನೂತನ ಕಟ್ಟಡದ ಶಿಲಾನ್ಯಾಸ.
೧೮-೧೧-೨೦೦೦ದಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ನೂತನ ಕಟ್ಟಡದ ಉದ್ಘಾಟನೆ.

ವಿಶೇಷ ಸಾಧನೆಗಳು
ಅಖಿಲ ಭಾರತ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಕನ್ನಡ ಸಂಸ್ಕೃತಿ ಇಲಾಖಾವತಿಯಿಂದ ನಡೆಸಲ್ಪಡುವ ಸ್ಪರ್ಧೆಯಲ್ಲಿ ರಾಜ್ಯಸ್ತರೀಯ ಪಾರಿತೋಷಕ
ಶತಾವಧಾನಿ ಡಾ. ಆರ್ ಗಣೇಶ್ ಮುಂತಾದ ಪ್ರಸಿದ್ಧವಿದ್ವಾಂಸರಿಂದ ಉಪನ್ಯಾಸಮಾಲಿಕೆ ಕಾರ್ಯಕ್ರಮಗಳು
ಸಂಸ್ಕೃತ ಭಾರತಿಯ ರಾಷ್ಟ್ರಮಟ್ಟದ ಶಿಕ್ಷಕ-ಪ್ರಶಿಕ್ಷಣವರ್ಗದಲ್ಲಿ ತರಬೇತುದಾರರಾಗಿ ಶಿಕ್ಷಕರ ಸಹಭಾಗ
ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಇತರ ಸಂಘಟನೆಗಳ ಸಹಯೋಗದೊಂದಿಗೆ ಅನೇಕ ಉಪನ್ಯಾಸ-ಪ್ರಾತ್ಯಕ್ಷಿಕೆಗಳ ಸಂಯೋಜನೆ
ಸಂಸ್ಕೃತ ಭಾರತೀ ವತಿಯಿಂದ ನಡೆದ ಅಖಿಲ ಭಾರತೀಯ ಕುಟುಂಬ ಸಮ್ಮೇಳನದಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವ.

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ
ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ  ಮಹಾವಿದ್ಯಾಲಯ,ಕವಲಕ್ಕಿ,
ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಸಂಪರ್ಕ ವ್ಯಕ್ತಿ : ಶ್ರೀ ವಿ. ಜಿ. ಹೆಗಡೆ ಗುಡ್ಗೆ ೯೪೪೮೨೫೨೮೪೧

Facebook Comments