ಶ್ರೀಭಾರತೀ ಕಾಲೇಜು ಮಂಗಳೂರು

ಜನಸಾಮಾನ್ಯರ ಕೈಗೆಟಕುವ ಉನ್ನತ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಪರಮಪೂಜ್ಯರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಮಂಗಳೂರಿನಲ್ಲಿ ಶ್ರೀ ಭಾರತೀ ಕಾಲೇಜನ್ನು 2001 ಇಸವಿಯಲ್ಲಿ ಪ್ರಾರಂಭಿಸಲಾಯಿತು. ಬೆರಳೆಣಿಕೆಯ ಸಂಖ್ಯೆಯ ವಿಧ್ಯಾರ್ಥಿಗಳೊಂದಿಗೆ ಪ್ರಾರಂಭಿಸಲಾದ ಈ ಕಾಲೇಜಿನಲ್ಲಿ ಇದೀಗ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ  ವಿದ್ಯಾರ್ಥಿಗಳಿಗೆ ಲೋನ್ ಸ್ಕಾಲರ್ ಶಿಪ್ ನೀಡಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದಲ್ಲದೆ ಪಿ.ಯು.ಸಿ. ತರಗತಿಯಲ್ಲಿ ೯೦ ಶೇಕದಕ್ಕಿಂತ ಜಾಸ್ತಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಭೊಧನಾ ಶುಲ್ಕ ವಿಧಿಸುವುದಿಲ್ಲ.   ಅತ್ಯಂತ ಧಕ್ಷ ಪ್ರಾಂಶುಪಾಲರು , ಅನುಭವೀ ಶಿಕ್ಷಕ ವೃಂದ ಮತ್ತು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವ ಸಿಬಂದಿ ವರ್ಗದವರ ಸಹಕಾರದಿಂದಾಗಿ  ಅತುತ್ತಮ ಫಲಿತಾಂಶವನ್ನು ಶ್ರೀ ಭಾರತೀ ಕಾಲೇಜು ಮಂಗಳೂರು ನಗರದ ಪ್ರತಿಷ್ಟಿತ ಕಾಲೇಜುಗಳ ಸಾಲಿಗೆ ಈಗಾಗಲೇ ಸೇರಿರುತ್ತದೆ.

ಆರಂಭದಲ್ಲಿ ಬಿ.ಸಿ.ಎ. ವಿಭಾಗವನ್ನು ಮಾತ್ರ ಹೊಂದಿದ್ದ ಕಾಲೇಜಿನಲ್ಲಿ ಕಳೆದ 2007 -8 ಸಾಲಿನ ಶೈಕ್ಷಣಿಕ ವರ್ಷದಿಂದ ಬಿ.ಬಿ.ಯಂ. ವಿಭಾಗವನ್ನು ಪ್ರಾರಂಭಿಸಲಾಗಿದೆ ಮತ್ತು 20010 -11 ಶೈಕ್ಷಣಿಕ ವರ್ಷದಿಂದ ಬಿ.ಕಾಂ.ವಿಭಾಗವನ್ನು ಪ್ರಾರಂಭಿಸಲಾಗುವುದು.
ವಿದ್ಯಾರ್ಥಿ ಸಮೂಹದ ಸರ್ವತೋಮುಖ ಬೆಳವಣಿಗಾಗಿ ಶೈಕ್ಷಣಿಕ ತರಗತಿಗಳಲ್ಲದೆ ಅನೇಕ ವಿಧದ ಚಟುವಟಿಗೆಳನ್ನು ನಡೆಸಲಾಗುತ್ತಿದ್ದು ಪರಮಪೂಜ್ಯ ಶ್ರೀ ಶ್ರೀಗಳವರು ರಾಮಾಯಣದ ಬಗೆಗೆ ನೀಡಿದ ಪ್ರವಚನ ಮತ್ತು ಧ್ಯಾನದ ಬಗೆಗೆ ನೀಡಿದ ಮಾರ್ಗದರ್ಶನಗಳು ಚಾರಿತ್ರಿಕ ಕಾರ್ಯಕ್ರಮಗಳಾಗಿವೆ.
ಕಾಲೇಜಿನ ಅಗತ್ಯಕ್ಕನುಗುಣವಾಗಿ  ನಿರ್ಮಿಸಲಾದ ಶಂಕರಶ್ರೀ ಸಭಾಭವನ್ನು ರಮಪೂಜ್ಯ ಶ್ರೀ ಶ್ರೀ ಗಳವರು ೨೦೦೮ ಜನವರಿ ೪ ರಂದು ಲೋಕಾರ್ಪಣೆ ಮದಳಗಿರುತ್ತಗೆ.  ೬ ತರಗತಿ ಕೊಟಡಿಗಳನ್ನು ಹೊಂದಿರುವ ನೂತನ ಕಟ್ಟಡವೊಂದರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಎಪ್ರಿಲ್ ತಿಂಗಳಿನಲ್ಲಿ ಪರಮಪೂಜ್ಯ ಶ್ರೀ ಶ್ರೀಗಳವರುಈ ಕಟ್ಟಡ ಭವನಾನುಗ್ರಹ   ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ಶ್ರೀ ಭಾರತೀ ಕಾಲೇಜಿನ ವೈಶಿಷ್ಟ್ಯತೆಗಳು
೧. ಪರಮಪೂಜ್ಯ ಶ್ರೀ ಶ್ರೀಗಳವರ ಮಾರ್ಗದರ್ಶನ
೨. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಬಿ.ಸಿ.ಎ., ಬಿ.ಬಿ.ಯಂ. ತರಗತಿಗಳು
೩. ಮಂಗಳೂರು ನಗರದಲ್ಲಿದ್ದರೂ ಗ್ರಾಮೀಣ ಪರಿಸರದ ವಾತಾವರಣ
೪. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ
೫. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ  ವಿಶೇಷ ಸೌಲಭ್ಯ
೬. ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ವಿಶೇಷ ಪ್ರೋತ್ಸಾಹ
7.  ಅತ್ಯುತ್ತಮ  ಫಲಿತಾಂಶ
8. ಪಥ್ಯೇತರ ಚಟುವಟಿಗಳಿಗೆ ಪ್ರೋತ್ಸಾಹ
೯. ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಕಾಂ ತರಗತಿಗಳ ಪ್ರಾರಂಭ.

Facebook Comments