||ಹರೇರಾಮ||

ವದಂತಿಗಳಿಗೆ ಕಿವಿಗೊಡದಿರಿ, ಹರಡದಿರಿ:

ಶಂಕರಾಚಾರ್ಯರಿಂದಾದಿಯಾಗಿ ಅವಿಚ್ಛಿನ್ನವಾಗಿ ಬೆಳಗಿ ಬರುತ್ತಿರುವ ಶ್ರೀಸಂಸ್ಥಾನ ಗೋಕರ್ಣ, ಹೊಸನಗರದ ಶ್ರೀ ರಾಮಚಂದ್ರಾಪುರಮಠದ ಶಿಷ್ಯಜನರಲ್ಲಿ, ಆಸ್ತಿಕ ಭಕ್ತರಲ್ಲಿ ಒಂದು ವಿನಮ್ರ ವಿನಂತಿ.

ಶ್ರೀಮಠದ, ಶ್ರೀಪೀಠದ ಕುರಿತಾದ ವಿಚಾರಣೆಯೊಂದು ನ್ಯಾಯಾಲಯದ ಮೆಟ್ಟಿಲೇರಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ.

ಶ್ರೀಮಠ, ಹಲವು ಶಿಷ್ಯವೃಂದದವರು, ಕೆಲವಾರು ವ್ಯಕ್ತಿಗಳು, ಹಲವಾರು ಸರಕಾರೀ ಸಂಸ್ಥೆಗಳನ್ನು ಒಳಗೊಂಡ ವಿಚಾರಣೆಯು ಪ್ರಗತಿಯಲ್ಲಿದೆ.
ಎಲ್ಲಾ ಸಮಸ್ಯೆಗಳಿಗೆ ನ್ಯಾಯಾಲಯದ ನ್ಯಾಯದೇವತೆಯು ಸತ್ಯದರ್ಶನವನ್ನು ಮಾಡಿಸಲಿದ್ದಾರೆ.

ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ಭಕ್ತವೃಂದವು ತಾಳ್ಮೆ, ಪ್ರಬುದ್ಧತೆ ಹಾಗೂ ಸಹನೆಯನ್ನು ತೋರಿಸಿಕೊಳ್ಳಬೇಕೆಂದೂ,
ಶ್ರೀಮಠದ, ಶ್ರೀಪೀಠದ ಪರಂಪರೆಯ ಘನತೆಯನ್ನು ಎತ್ತಿಹಿಡಿಯಬೇಕೆಂದೂ,

ಅನಧಿಕೃತ ಸುದ್ದಿ, ಕ್ಷುಲ್ಲಕ ವದಂತಿ, ರೋಷಾವೇಶ ಪೂರಿತ ಮಾತುಗಳು  – ಇತ್ಯಾದಿಗಳಿಗೆ ಕಿವಿಗೊಡದಿರುವಂತೆಯೂ, ಉಂಟುಮಾಡದಂತೆಯೂ, ಹರಡದಂತೆಯೂ – ಸಹಕರಿಸಬೇಕಾಗಿ ಕೇಳಿಕೊಳ್ಳುತ್ತೇವೆ.

ಶ್ರೀಮಠದ ಅಧಿಕೃತ ಮಾಹಿತಿಗಳನ್ನು ಅಧಿಕೃತ ಜಾಲತಾಣ (http://hareraama.in) ದಲ್ಲಿ ಕಾಣಬಹುದು.

ಹರೇರಾಮ

Facebook Comments