ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಳದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ, ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ,
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು,
ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು,
ತಮ್ಮ ಅನಂತಶಿಷ್ಯಸ್ತೋಮದೊಡಗೂಡಿ ಕೈಗೊಂಡರು..
ಸ್ಥಳ : ಅಶೋಕೆಯ ಶ್ರೀ ಮಲ್ಲಿಕಾರ್ಜುನನ ಸನ್ನಿಧಿ.
ಮಿತಿ : ಮಾರ್ಗಶೀರ್ಷ ಶುದ್ಧ ಅಷ್ಟಮಿ ತಾರೀಕು : 05-12-2008
ಸಂದರ್ಭ : ಪೂರ್ವ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನೆ.
June 27, 2011 at 12:35 PM
ಹರೇರಾಮ್,
ಕಟ್ಟೊಣ ಬನ್ನಿ ಮಹಾಮೂಲ ಮಠವೊ೦ದನು,
ಗುರುವಿಟ್ಟ ಹೆಜ್ಜೆಗೆ ಜೊತೆಗೂಡಿ ಗುರಿಮುಟ್ಟೋಣ