|| ಹರೇರಾಮ ||

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್, ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರಾಧೀಶರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಖವಾಣಿಯಾಗಿ ಸದಾ ನೆಲೆಸಿರುವ ಮಾತು “ಹರೇರಾಮ” ಎಂಬುದು ನಿಮಗೆ ತಿಳಿದಿದೆಯಷ್ಟೆ. ಇದೇ ಧ್ಯೇಯೋದ್ದೇಶವನ್ನಿಟ್ಟುಕೊಂಡು ಶ್ರೀ ಸಂಸ್ಥಾನದವರ ವ್ಯಕ್ತಿ-ವ್ಯಕ್ತಿತ್ವ ಚಿತ್ರಣದ ಸಮಗ್ರ ಮಾಹಿತಿಗಳ ಅಂತರ್ಜಾಲೀಯ ಪುಟ “www.hareraama.in” ಎಂಬುದು ಕಳೆದ ಕೆಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಶ್ರೀಶ್ರೀಗಳ, ಶ್ರೀಮಠದ ಆಗುಹೋಗುಗಳನ್ನು ಬಿತ್ತರಿಸುವುದಷ್ಟೇ ಅಲ್ಲದೆ, ಹಲವಾರು ಬರಹ, ಚಿತ್ರ, ಧ್ವನಿ, ವೀಡಿಯೋ, ನೇರಪ್ರಸಾರಗಳ ಮೂಲಕ ಜನರಿಗೆ ತಲುಪುತ್ತಿದೆ. ಹಿರಿಯ – ಕಿರಿಯ ಬರಹಗಾರರ ಒಳಗೂಡುವಿಕೆಯಿಂದ, ವಿದ್ವಾಂಸರ ಸಂಪಾದಕತ್ವದಲ್ಲಿ ಇದು ನಡೆದು ಬರುತ್ತಿದೆ.

ಬರೆಹಗಳಿಗೆ ಆಹ್ವಾನ:
ಶ್ರೀಶ್ರೀಗಳವರ ಅಂತರ್ಜಾಲದ ಪುಟದಲ್ಲಿ ನಿಮ್ಮ ಬರಹವೂ ಪ್ರಕಟವಾಗಲಿ. ನಿಮ್ಮ ಬರಹಗಳನ್ನು ಕಳಿಸಿಕೊಡಿ.

  • ಧರ್ಮ ಜಾಗೃತಿ, ಗೋಸಂರಕ್ಷಣೆ, ಸಂಸ್ಕಾರ – ಸಂಸ್ಕೃತಿಗಳ ಮಾಹಿತಿಗಳನ್ನೊಳಗೊಂಡ ಲೇಖನಗಳಾದಲ್ಲಿ ವಿಶೇಷ ಆದ್ಯತೆ.
  • ತಮಗೆ ಶ್ರೀಗಳವರ ಒಡನಾಟದ ನೆನಹುಗಳನ್ನು, ಶ್ರೀಗಳವರ ಅನುಗ್ರಹದಿಂದ ತಮ್ಮಲ್ಲಾದ ಬದಲಾವಣೆಯನ್ನು ನಮೂದಿಸಿದರೆ ಇನ್ನೂ ಉತ್ತಮ.
  • ಶ್ರೀಗಳೊಂದಿಗೆ ತಮ್ಮ ಫೋಟೋ ಇದ್ದಲ್ಲಿ ಮತ್ತೂ ಉತ್ತಮ.

ಈ ಅಂತರ್ಜಾಲದ ಪುಟಲ್ಲಿ ಶ್ರೀಗಳ ಶಿಷ್ಯವೃಂದದಲ್ಲೊಬ್ಬರಾಗಿ ನೀವೂ ಕೈಜೋಡಿಸಿಕೊಳ್ಳಬಹುದು.
ತಡವೇಕೆ, ಈಗಲೇ ಕಳುಹಿಸಿ ನಿಮ್ಮ ಬರಹವನ್ನು.
ಆಯ್ಕೆಯಾದ ಬರಹವು ಹರೇರಾಮದಲ್ಲಿ ಪ್ರಕಟಗೊಂಡು ಇತರ ಶಿಷ್ಯರಿಗೂ ಸಿಗುವಂತಾಗಲಿ.

ಹರೇರಾಮ.

ಸೂ: ಈಗಾಗಲೇ ಹಲವಾರು ಶಿಷ್ಯರು ತಮ್ಮ ಲೇಖನಗಳನ್ನು ಬರೆದು ನಮ್ಮೊಡನೆ ಹಂಚಿಕೊಂಡಿದ್ದಾರೆ. ಇಲ್ಲಿ ಓದಿ: hareraama.in/articles/sammukha/

ತಮ್ಮ ಬರೆಹಗಳನ್ನು ಕಳಿಸಬೇಕಾದ ವಿಳಾಸ:

ಸಂಪರ್ಕ:
fb.com/hareraama | twitter.com/hareraama | plus.google.com/+HareRaamaSriSri

English Summary:
HareRaama.in welcomes general articles from Shishyas and will be published in the general-column “Sammukha”. Please send your entries to info@hareraama.in. Selected articles will be published in the category: http://hareraama.in/articles/sammukha

Facebook Comments Box