ಶ್ರೀ ರಾಮಾಶ್ರಮ, ಬೆಂಗಳೂರು 05.08.2015. ಬುಧವಾರ
~
ಬೆಳಗ್ಗೆ
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು.
~
ಭಜನೆ:
ಸಾಮೂಹಿಕ ಹನುಮಾನ್ ಚಾಲೀಸ್ ಹಾಗೂ ರಾಮತಾರಕ ಜಪ
~
ಪಾದುಕಾ ಪೂಜೆ:
ದೇಶಭಂಡಾರಿ ಸಮಾಜ.
~
ಗುರುಭಿಕ್ಷಾ:
ನಿಟ್ಟೂರು, ಸಂಪೆಕಟ್ಟೆ, ತುಮರಿ ವಲಯಗಳು
~
ಯಾಗಶಾಲೆ:
ಸುದರ್ಶನ ಹವನ, ಅಗೊರಾಷ್ಟ್ರ ಹವಾನ, ತ್ರಿಸ್ತುಪ್ ಹವನ,. : ಅರವಿಂದ ಶರ್ಮ ಅವರಿಂದ
ಮೇಧಾ ದಕ್ಷಿಣಾಮೂರ್ತಿ ಹವನ: ಸಂಜಯ ತ್ರಿವೇದಿ
~
ಸಭಾವೇದಿಕೆ:
>ನಿಟ್ಟೂರು, ಸಂಪೇಕಟ್ಟೇ ಹಾಗೂ ತುಮರಿ ವಲಯಗಳ ಪ್ರಧಾನರಿಂದ ವರದಿ ವಾಚನ.
>ಮಠದ ಶಾಖಾ ದೇವಸ್ಥಾನವಾದ ‘ಬೆನ್ನಟ್ಟಿ ಗುತ್ಯಮ್ಮ’ ದೇವಾಲಯದ ಧರ್ಮಕರ್ತೃರು ದೇವಸ್ಥಾನ ಕಟ್ಟಡದ ಕುರಿತು ನೀಡಿದರು.
>ಛಾತ್ರ ಪುರಸ್ಕಾರ: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗಳಿಸಿರುವ ಶ್ರೀ ನಾಗಪತಿ ಹೆಗಡೆ
>ಲೋಕಾರ್ಪಣೆ: ಭಾರತಿ ಪ್ರಕಾಶನದಿಂದ, ಶ್ರೀ ಕೊರಗಿ ಉಪಾಧ್ಯಾಯರು ಸಂಗ್ರಹಿಸಿದ ‘ಪುಣ್ಯಕೋಟಿ-ಗೋಕತೆ-೨’ ಎಂಬ ಪುಸ್ತಕವನ್ನು, ಸನ್ಮಾನಿತ ನಾಗಪತಿ ಹೆಗಡೆಯವರು ಲೋಕಾರ್ಪಣೆಗೊಳಿಸಿದರು.
> ಮೂರೂ ವಲಯದ ಮಾತೃ ವಿಭಾಗದವರು ದೀಪದ ಬತ್ತಿಯನ್ನು ಸಮರ್ಪಿಸಿದರು.
>ದೇಶಭಂಡಾರಿ ಸಮಾಜದವರು ಸುವಸ್ತುವನ್ನು ಮತ್ತು ಹೊರೆಕಾಣಿಕೆಯನ್ನು ಸಮರ್ಪಿಸಿದರು.
> ಕಾರ್ತೀಕ್ ಭಟ್ ನಿರೂಪಿಸಿದರು
>ಉಪಸ್ಥಿತರು: ಇಡಗುಂಜಿ ಮಹಾಗಣಪತಿ ದೇವಾಲಯದ ಧರ್ಮದರ್ಶಿ ಜಿ.ಜಿ ಸಭಾಹಿತ್, ಶ್ರೀಮಠದ ಸಿಇಒ ಕೆ.ಜಿ ಭಟ್, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಮಾತೃ ಪ್ರಧಾನೆ ಈಶ್ವರಿ ಬೇರ್ಕಡವು, ಛಾತ್ರಚಾತುರ್ಮಾಸ್ಯ ಸಮಿತಿಯ ಯು.ಎಸ್.ಜಿ ಭಟ್, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಸಾಹಿತಿ ಗಜಾನನ ಶರ್ಮಾ, ಪ್ರಕಾಶನದ ಸಹ ಕಾರ್ಯದರ್ಶಿ ಅನುರಾಧಾ ಪಾರ್ವತಿ.
~
ಧರ್ಮಸಭೆ:

ಸಮಾಜ ಎಂದರೆ ಹಡಗು. ಪೀಠ,ಪರಂಪರೆ ಅದನ್ನು ನಡೆಸುವ ನಾವಿಕ. ಕಾರ್ಯಕರ್ತರು ಹಡಗನ್ನು ಮುನ್ನಡೆಸಲು ಸಹಾಯಕರು. ನಾನು-ನನ್ನದು ಎಂಬ ಸ್ವಾರ್ಥವನ್ನು ಮೀರಿ ಸಮಾಜಕ್ಕಾಗಿ ಕೆಲಸ ಮಾಡುವವನೇ ಕಾರ್ಯಕರ್ತ.

ಬದುಕನ್ನು ವಿಸ್ತರಿಸಿಕೊಳ್ಳುವ ಶಕ್ತಿ ಎಲ್ಲರಲ್ಲಿದೆ. ಆದರೆ ಜನರು ಕೇವಲ ತಮ್ಮ ಮನೆಗಳಿಗೆ ಸೀಮಿತರಾಗಿ ಮನೆಯೆಂಬ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ. ಅಲ್ಲಿಂದ ಬಿಡಿಸಿಕೊಂಡು, ಇಡಿ ಸಮಾಜಕ್ಕಾಗಿ ಬದುಕನ್ನು ವಿಸ್ತರಿಸಿಕೊಂಡು, ಎಲ್ಲರನ್ನೂ ನನ್ನವರೆಂದುಕೊಂಡರೆ, ಅದೇ ನಿಜವಾದ ಸ್ವಾತಂತ್ರ್ಯ ಎಂದರು.

ಕೇವಲ ಒಬ್ಬ ವ್ಯಕ್ತಿಯಿಂದ ಸಮಾಜದ ಏಳ್ಗೆ ಅಸಾಧ್ಯ.. ಅದು ಸಾಧ್ಯವಾಗುವುದು ಸಂಘಟನೆಯಿಂದ, ಸಮೂಹದಿಂದ, ಸಹಬಾಳ್ವೆಯಿಂದ. ಜಮೀನಿನ ಬೇಲಿಯನ್ನು ಹೆಚ್ಚು ಮಾಡಲು ಹೊರಟರೆ ಅದರಿಂದ ಎಲ್ಲರಿಗೂ ಅಸಂತೋಷವೇ. ಅದೇ ಮನಸ್ಸನ್ನು ವಿಶಾಲಗೊಳಿಸಿ, ಮನಸ್ಸಿನೊಳಗಿನ ಅಂತರಾತ್ಮದ ಬೇಲಿಯನ್ನು ವಿಸ್ತರಿಸಿದಾಗ, ಅದು ಎಲ್ಲರಿಗೂ ಸಂತೋಷವನ್ನು ಉಂಟುಮಾಡುತ್ತದೆ. ಕೇವಲ ನನ್ನ ಮನೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಮ್ಮ ಊರು, ನಮ್ಮ ಸಮಾಜದ ಎಂಬುದಾಗಿ ಯೋಚಿಸೋಣ. ಕಾರ್ಯಕರ್ತ ಯಾವಾಗಲೂ ಪರರ ಹಿತಕ್ಕಾಗಿ ಕೆಲಸ ಮಾಡುವ ದೈವಗುಣವನ್ನು ಹೊಂದಿರುತ್ತಾನೆ. ಅನ್ಯರ ಇದೇ ಸಾಮಾನ್ಯ ವ್ಯಕ್ತಿಗೂ ಕಾರ್ಯಕರ್ತನಿಗೂ ಇರುವ ವ್ಯತ್ಯಾಸ.

ಸಂಸಾರಿ ಚಿಕ್ಕ ಸಂಸಾರಕ್ಕಾಗಿ ದೊಡ್ಡ ಭಗವಂತನನ್ನು ತ್ಯಾಗ ಮಾಡುತ್ತಾನೆ. ಸಂನ್ಯಾಸಿ ದೊಡ್ಡ ಭಗವಂತನಿಗಾಗಿ ಚಿಕ್ಕ ಸಂಸಾರವನ್ನು ತ್ಯಾಗ ಮಾಡುತ್ತಾನೆ. ಇದು ಸಂಸಾರಿ ಹಾಗೂ ಸಂನ್ಯಾಸಿಗಳಲ್ಲಿರುವ ವ್ಯತ್ಯಾಸ ಎನ್ನುವ ಪರಮಹಂಸರ ಒಂದು ಸನ್ನಿವೇಶವನ್ನು ಉಲ್ಲೇಖಿಸಿದುವುರೊಂದಿಗೆ, ಎಲ್ಲರನ್ನೂ ಆ ಶ್ರೀರಾಮ ಕಾಪಾಡಲಿ ಎಂದು ಹರಸಿದರು.

English Summary:

Society is like a Ship and pilot is Shree Peetha. the activists(kaaryakartaru) helps the ship to travel in right direction.

All of us have the ability to e‍xpand the boundary of our life. But most of us expand the boundary of our Site. It again disturbs everyone’s mind, rather if we expand ourselves internally and think like our society, our nation.. this makes them to be loved by all.
If we restrict our thoughts just to our house,family then we are still inside four walls that is nothing but prison. But if we broaden our thought process and work for people and society , then it is true freedom.

Chatra Puraskara facilitation was done to Shri Nagapati Hegde.

Shri Korgi Upadhyayas’s collection ‘Punyakoti’ was relaesed by Bharati Prakashana.

~
Photo:

Janasthom...

Janasthom…

Chatra Purskara : Nagapati Hegde

Chatra Purskara : Nagapati Hegde

Phala samarpane y Deshabhandari Samaaja

Phala samarpane y Deshabhandari Samaaja

Batti samarpane by Maatru mandali

Batti samarpane by Maatru mandali


Audio Link:

Download :   Link

Install our Android App to receive updates: goo.gl/IBrhmT

Facebook Comments