04.08.2015, ಮಂಗಳವಾರ – ಶ್ರೀ ರಾಮಾಶ್ರಮ, ಬೆಂಗಳೂರು

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು.

ಭಜನೆ:

ಸಾಮೂಹಿಕ ಹನುಮಾನ್ ಚಾಲೀಸ್ ಹಾಗೂ ಭಜಗೋವಿಂದಂ ಸ್ಮರಣೆ.
ಪ್ರತಿಭಾ ರಾಘವೇಂದ್ರ ಅವರಿಂದ ವೈಯಕ್ತಿಕ ಭಜನೆ

~
ಗುರುಭಿಕ್ಷಾಸೇವೆ:
ರಾಮಚಂದ್ರಾಪುರ ಮಂಡಲಾಂತರ್ಗತ ಶಿಷ್ಯವೃಂದ

~

ಸಭಾವೇದಿಕೆ:

ಛಾತ್ರ ಪುರಸ್ಕಾರ:
ಇತ್ತೀಚೆಗೆ ಶ್ರೀಶಂಕರ ಟಿವಿ ಚಾನಲ್ ನಡೆಸಿದ ‘ಭಜನ್ ಸಾಮ್ರಾಟ್ ಜೂನಿಯರ್ಸ್ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪೂಜಾ ಹಾಗೂ ಪ್ರಿಯಾಂಕಾ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಪ್ರಿಯಾಂಕ ಅವರು ಪ್ರಸ್ತುತ ಈ ಟೀವಿ ಚಾನಲ್ಲಿನ ‘ಎದೆ ತುಂಬಿ ಹಾಡುವೆನು’ ಗಾಯನ ಕಾರ್ಯಕ್ರಮದಲ್ಲಿ ಅಂತಿಮ ಹಂತ ತಲುಪಿರುತ್ತಾರೆ.
ಈ ಛಾತ್ರರ ಪಾಲಕರಾದ ನ್ಯಾಯ ಕಾರ್ಯದರ್ಶಿ ಗೋವಿಂದರಾಜ ಕೊರಿಕ್ಕಾರ್ ಮಾತನಾಡಿದರು.

ಭಾರತಿ ಪ್ರಕಾಶನ :
ಸುನೀಲ್ ಶರ್ಮ ಅವರು ಬರೆದಿರುವ “ಪಂಚತಂತ್ರದ ಕತೆಗಳು”

ಪ್ರತಿಭಾ ಪುರಸ್ಕಾರ :
ಕುಮಾರಿ ಶ್ರೀಲಕ್ಷ್ಮಿ ಹಾಗೂ ಕುಮಾರ್ ಪ್ರಮೋದ.

~

ಶ್ರೀ ಶ್ರೀ ಆಶೀರ್ವಚನ:

ಆತ್ಮ ಇದು ವಿಶ್ವವ್ಯಾಪಿ. ಅದು ದೇಹಕ್ಕೆ ಸೇರಿದಾಗ ಅದು ಸೀಮಿತವಾಗುತ್ತದೆ. ಹಾಗಾಗಿ ಇಂದು ಜನರು ನಾನು, ನನ್ನ ಕುಟುಂಬ ಎಂಬ ಸ್ವಾರ್ಥದ ಬದುಕನ್ನು ಬದುಕುವಂತಾಗಿದೆ. ಸ್ವಾರ್ಥದ ಬದುಕು ಬದುಕುವವರು ಅವರಿಗಷ್ಟೇ ಸೀಮೀತ. ನಾನೊಬ್ಬ ಚನ್ನಾಗಿದ್ದರೆ ಸಾಕು ಎಂಬ ಭಾವ ಮೂಡುತ್ತದೆ.ಈ ಸ್ವಾರ್ಥದ ಪರಿಧಿಯನ್ನು ಮೀರಿ, ಸಮಾಜದ ಪ್ರತಿಯೊಬ್ಬರೂ ನಮ್ಮವರು ಎಂಬ ಭಾವ ಸಂಘಟನೆಯಲ್ಲಿರುತ್ತದೆ. ಸಂಘಟನೆ ಎಂದರೆ ಆತ್ಮವಿಸ್ತರಣೆ. ಆತ್ಮವನ್ನು ವಿಸ್ತರಿಸಿಕೊಂಡಾಗ ಎಲ್ಲರೂ ನನ್ನವರು ಎಂಬ ಭಾವ ಬರುತ್ತದೆ. ತನ್ನ ಕಷ್ಟಗಳನ್ನು ಮರೆತು ಇತರರ ಕಷ್ಟಗಳನ್ನು ಗಮನಿಸಿ, ಪರಿಹರಿಸುವ ಭಾವ ಇರುತ್ತದೆ. ಮಠದ ಸಂಘಟನೆಯಿಂದಾಗಿ ಪ್ರತಿ ಕಾರ್ಯಕರ್ತನ ಆತ್ಮವಿಸ್ತರಣೆಯಾಗಿದೆ ಎಂದು ನುಡಿದರು. ಸಂಘಟನೆಯಿಂದಾಗಿ ಒಳ್ಳೇತನ ವೃದ್ಧಿಯಾಗಿದೆ. ಎಲ್ಲರೂ ಎಲ್ಲರ ಬಗ್ಗೆ ಯೋಛಿಸುವುದೇ ಸಂಘಟನೆಯ ಯಶಸ್ಸು. ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಇನ್ನೊಬ್ಬರಿಗೆ ಕಷ್ಟಕೊಟ್ಟು, ಸಂತೋಷಪಡುವವರು ಒಂದು ವರ್ಗವಾದರೆ, ತಾನು ಮಾತ್ರ ಸಂತೋಷದಿಂದಿದ್ದರೆ ಸಾಕು ಎನ್ನುವವರದು ಇನ್ನೊಂದು ವರ್ಗ. ಸಮಾಜದ ಪ್ರತಿಯೊಬ್ಬರೂ ಆನಂದದಿಂದಿರಬೇಕು ಎನ್ನುವವರ ಉತ್ತಮವಾದ ಮತ್ತೊಂದು ವರ್ಗ ಎಂದ ಅವರು, ಎಲ್ಲರೂ ತಾವು ಯಾವ ವರ್ಗದಲ್ಲಿದ್ದಾರೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ನೆರೆದಿದ್ದ ಸಭಿಕರನ್ನು ಅನುಗ್ರಹಿಸಿದರು.

English Summary:

Sri Sri blessed the gathering on the topic ‘Aatma Vistarane’ which means expanding of the Soul. Swamiji expressed that Soul has no limitations but when it gets inside a body, it gets reseverd. That is the reason often people think only about themselves, this is how people become selfish and will not worry about others and society. But when soul gets broad(expands), we start caring for others. Neglecting our difficulties, we involve in others’ happiness and Sad. Organization(Sanghatane) of Srimatha has showed us this path. His holiness also expressed his happiness for more and more houses involving in the sytem. Kum Pooja and Kumari Priyanka who both secured first place in ‘Bhajan Samrat Juniors’ combined Singing Competition conducted by Sri Shankara Channel. These two kids launched the work ‘Panchatantrada KathegaLu (Stories of Panchatantra) written by Sri Sunil Sharma Scholarships were given to Kumari Shrilakshmi and Kumar Pramod.

Photos:

Audio:

Download :Link 

Install our Android App to receive updates: goo.gl/IBrhmT

Facebook Comments