03.08.2015. ಸೋಮವಾರ, ಶ್ರೀ ರಾಮಾಶ್ರಮ – ಬೆಂಗಳೂರು

ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯನ್ನು ಶ್ರೀಗಳವರು ನೆರವೇರಿಸಿದರು.
ದಿನ ವಿಶೇಷ: ಇಂದು ಮಿತಿ ಪ್ರಕಾರ ಗುರುಗಳ ಜನುಮದಿನ (ವರ್ದಂತಿ)
~
ಭಜನೆ:
ಸಾಮೂಹಿಕ ಹನುಮಾನ್ ಚಾಲೀಸ್ ಹಾಗೂ ಭಜಗೋವಿಂದಂ ಸ್ಮರಣೆ
~
ಯಾಗಶಾಲೆ:
ಮೇಧಾದಕ್ಷಿಣಾಮೂರ್ತಿ ಹವನ : ಭೀಮೇಶ್ವರ ಜೋಷಿ, ಧರ್ಮದರ್ಶಿಗಳು ಹೊರನಾಡು ಅನ್ನಪೂರ್ಣೆಶ್ವರಿ.
~
ಗುರುಭಿಕ್ಷಾಸೇವೆ:
ಶ್ರೀ ಭೀಮೇಶ್ವರ ಜೋಷಿ, ಹೊರನಾಡು ಅನ್ನಪೂರ್ಣೆಶ್ವರಿ ದೇವಿಯ ಧರ್ಮದರ್ಶಿಗಳು
~
ಸಭಾವೇದಿಕೆ:

  • ಶ್ರೀ ಶ್ರೀಗಳ ವರ್ದಂತಿಯ ನಿಮಿತ್ತ ಮಾತೆಯರಿಂದ ವಿಶೇಷ ಆರತಿ ಸೇವೆ ನಡೆಯಿತು.
  • ಶ್ರೀ ಮಠದ ಮಾತೃಶಾಖೆಯಿಂದ ಸುವಸ್ತು ಸಮರ್ಪಿಸಲಾಯಿತು.
  • ಛಾತ್ರ ಪುರಸ್ಕಾರ: ಉದಯೋನ್ಮುಖ ವಿಮಾನಯಾನ ಅಭಿಯಂತರ, ವಿಶ್ವೇಶರಯ್ಯ ವಿಶ್ವವಿದ್ಯಾಲಯದಲ್ಲಿ ಚಿನ್ನದಪದಕ ಗಳಿಸಿದ ಶ್ರೀ ಕಾರ್ತೀಕ್ ಚೇರಾಲು ಅವರನ್ನು ಶ್ರೀಗಳು ಸನ್ಮಾನಿಸಿದರು.
  • ಭಾರತಿ ಪ್ರಕಾಶನದ ಕೃತಿ ಲೋಕಾರ್ಪಣೆ: ಕು.ಲೋಹಿತ ಶರ್ಮ ಅವರು ರಚಿಸಿದ ‘ಹಿತೋಪದೇಶದ ಕಥೆಗಳು’ ಎಂಬ ಕೃತಿಯನ್ನು ಸನ್ಮಾನಿತ ಕಾರ್ತೀಕ್ ಅವರು ಲೋಕಾರ್ಪಣೆ ಗೊಳಿಸಿದರು.
  • ಜ್ಞಾನಜ್ಯೋತಿ ವಿಕಲವಿಶೇಷಚೇತನ ಮಕ್ಕಳ ಸಂಸ್ಥೆಯ ಅಂದ ವಿದ್ಯಾರ್ಥಿನಿಯರು ಗಾಯನ ಸಮರ್ಪಣೆ ಮಾಡಿದ್ದು ನೆರೆದ ಭಕ್ತರ ಹೃದಯವನ್ನು ತಟ್ಟಿತು.
  • ದುರ್ಮುಖ ಸಂವತ್ಸರದ ಪಂಚಾಂಗದ ಕರಡು ಪ್ರತಿಯನ್ನು ‘ಧಾರ್ಮಿಕ ಪಂಚಾಗದ’ ಪ್ರಕಾಶಕರು ಗುರುಗಳಿಗೆ ಸಮರ್ಪಿಸಿದರು.

ಶ್ರೀ ಭೀಮೇಶ್ವರ ಜೋಷಿಯವರು ಮಾತನಾಡುತ್ತ “ಪೂಜ್ಯಗುರುಗಳನ್ನು ಹೊರತುಪಡಿಸಿದರೆ ಉಳಿದ ನಾವೆಲ್ಲರೂ ಕಿಶೋರರು. ಜೀವನದ ಜಂಜಾಟಗಳಲ್ಲಿ ಬಂಧನವಾಗಿರುವವರೆಲ್ಲರೂ ಎಲ್ಲರೂ ಕಿಶೋರರೇ, ಈ ಕಿಶೋರತ್ವ ಎನ್ನುವುದು ನಮ್ಮ ಮನಸ್ಸಲ್ಲಿ ಚಂಚಲತೆಯನ್ನು ಹುಟ್ಟುಹಾಕುತ್ತದೆ. ಈಗಿದ್ದ ಅಭಿಪ್ರಾಯ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ.. ಈಗಿದ್ದ ಚಿಂತನೆ ಇನ್ನೊಂದು ಕ್ಷಣದಲ್ಲಿ ಬದಲಾಗುತ್ತದೆ. ಆದರೆ ಇದೆಲ್ಲವನ್ನು ಸಮೀಕರಿಸಿ ಕಟ್ಟಿಹಾಕುವ ಶಕ್ತಿ ಇರುವುದು ಆ ಕೇಶವನಲ್ಲಿ ಮಾತ್ರ ಎನ್ನುವಂತದ್ದು ಈ ಚಾತುರ್ಮಾಸ್ಯದ ಈ ಕಾರ್ಯಕ್ರಮದಲ್ಲಿ ಆಗಲೇ ೩ ಘಂಟೆಯಾದರೂ ನಾವೆಲ್ಲಾ ನಮ್ಮನ್ನು ಕತ್ತಿಹಾಕಿಕೊಂಡು ಕುಳಿತಿದ್ದೆವಲ್ಲ, ನಮ್ಮ ಚಿತ್ತ ಕೇಶವನತ್ತ ಇದೆ ಎಂಬುದನ್ನು ತೋರಿಸುತ್ತದೆ.
ನಮ್ಮ ಒಳಗೆ ಅವರ ಪ್ರವೆಶವಾಗಲಿ, ನಮ್ಮ ಒಳಗೆ ಅವರು ಸ್ಥಿರವಾಗಲಿ, ಶಾಶ್ವತವಾಗಲಿ. ವ್ಯಾಸ ಮಹರ್ಷಿಯಿಮ್ದ ಪ್ರಾರಂಭವಾಗಿರುವ ನಮ್ಮ ಪರಂಪರೆ, ಗುರುಪೂರ್ಣಿಮೆಯ ಶುಭದಿನದಂದು ನಮ್ಮ ಶ್ರೇಯಸ್ಸಿಗಾಗಿ ಚತುರ್ಮಾಸ್ಯಕ್ಕೆ ಉಪಕ್ರಮಿಸಿದ್ದಾರೆ ನಮ್ಮ ಕುಲಗುರುಗಳು ಎಂದು ಹೇಳಿದರು.

ಪುರಸ್ಕೃತ ಕಾರ್ತೀಕ್ ಮಾತಾಡುತ್ತ -” ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ವಿಷಯದ ಬಗ್ಗೆ ಕಲಿಯಲು ಬಿಡಿ ಆಗ ಮಾತ್ರ ಅವರು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ತನ್ನತಂದೆ ತಾಯಿಯವರು ಅವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತುದ್ದನ್ನು ನೆನೆಸಿಕೊಂಡರು. ಜನ್ಮಭೂಮಿ ಸ್ವರ್ಗಭೂಮಿ ಹಾಗಾಗಿ ಫ್ರಾನ್ಸ್ ದೇಶದಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಭಾರತಕ್ಕೆ ಹಿಂದುರುಗಿ ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ದೇಶಭಕ್ತಿಯನ್ನು ಮೆರೆದರು.
~
ಸಾಂಸ್ಕೃತಿಕ ಕಾರ್ಯಕ್ರಮ:
ಕು. ಪೂಜಾ ಅವರಿಂದ ಗಾಯನ.
~
ಶ್ರೀ ಆಶೀರ್ವಚನ:

ಜೀವನದಲ್ಲಿ ಮುಳ್ಳುಗಳನ್ನು ನಿರೀಕ್ಷಿಸಬೇಕು ಹೊರತು ಹೂವುಗಳನ್ನಲ್ಲ. ಆಗ ಕಷ್ಟಗಳು ಬಂದಾಗ ದುಃಖವಾಗುವುದಿಲ್ಲ. ಸುಖ ಬಂದರೆ ತುಂಬಾ ಸಂತೋಷವಾಗುತ್ತದೆ. ಬದುಕಿನ್ನಲ್ಲಿ ಹಿನ್ನಡೆಗಳು ಬಂದರೆ ಅದು ಮನಸ್ಸನ್ನು ಪಕ್ವಗೊಳಿಸಿ ನಮ್ಮನ್ನು ಮುನ್ನಡೆಸಲೆಂದೇ, ಆದ್ದರಿಂದ ಹಿನ್ನಡೆಗಳಿಂದ ಬೇಸರಿಸಬಾರದು. ಜೀವನದಲ್ಲಿ ನೆಗಟಿವ್ ಇಲ್ಲ.. ಏನಿದ್ರೂ ಅದು ‘ನಗೆ’ ಮಾತ್ರ ಇರಲಿ. ಬದುಕಿನ ಹಿನ್ನಡೆಗಳು ಈ ಪ್ರಪಂಚ ನಶ್ವರವೆಂದು ತಿಳಿದು ಭಗವಂತನತ್ತ ಮುಖ ಮಾಡುವಂತೆ ಮಾಡುತ್ತವೆ. ಜೀವನದಲ್ಲಿ ಬಂದದ್ದೆಲ್ಲ ಭಗವಂತನ ಪ್ರಸಾದ ಎಂದು ಭಾವಿಸಿದಾಗ ವಿಷಾದಕ್ಕೆ ಎಡೆಯೇ ಇರುವುದಿಲ್ಲ ಎಂದು.
ಯಾರಿಂದಲೂ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನೀರಿಕ್ಷೆಯೇ ದುಃಖಕ್ಕೆ ಮೂಲ. ನಾವು ದೇವರಿಂದ ನಿರೀಕ್ಷೆ ಇಟ್ಟುಕೊಂಡು, ಅದು ಈಡೇರಿಲ್ಲ ಎಂದರೆ ನಾವು ದೇವರನ್ನು ದೂರುತ್ತೇವೆ ಮತ್ತು ದೂರ ಮಾಡುತ್ತೇವೆ. ಇದೆ ಕಾರಣಕ್ಕೆ ಎಷ್ಟೋ ಜನ ನಾಸ್ತಿಕರಾಗಿದ್ದಾರೆ. ನಮ್ಮ ನಡುವೆಯೂ ಹಾಗೆ. ಸಮಸ್ಯೆ ಇರುವುದು ನಿರೀಕ್ಷೆಯಲ್ಲಿ. ನಿರೀಕ್ಷೆ ಉಂಟಾದಾಗ ಮನಸ್ಸುಗಳ ನಡುವೆ ಅಂತರ ಉಂಟಾಗುತ್ತದೆ.

ಜನ್ಮದಿನ ಎನ್ನುವುದು ‘ಇನ್ನೊಂದು ವರ್ಷ ಕಳೆಯಿತು, ಏನು ಮಾಡಿದ್ದಿ ಹೇಳು?’ ಎಂಬ ಎಚ್ಚರಿಕೆಯ ಕರೆಘಂಟೆ ಎಂದು ಹೇಳಬಹುದು. ಜನ್ಮದಿನ ಪ್ರತಿ ವರ್ಷ ಬರುತದೆ, ವಿಶೇಷ ಏನು ಅಂತ ಕೇಳಿದರೆ, ಜೀವನ ಚಕ್ರದಲ್ಲಿ ನಾವು ಮುಂದೆ ಸಾಗಿರುತ್ತೇವೆ. ಲೌಕಿಕ ಜಂಜಾಟದಲ್ಲಿ ಮುಳುಗಿದ್ದರೆ, ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನದ ಹಾಗೆ ಚಕ್ರಗಳು ತಿರುಗುತ್ತಿರುತ್ತದೆ ಆದರೆ ವಾಹನ ಮುಂದೆ ಹೋಗುವುದಿಲ್ಲ. ಹಾಗೆಯೇ ನಾವುಗಳು ಏನನ್ನು ಸಾಧಿಸದಿದ್ದರೆ, ಇದ್ದಲಿಯೇ ಇದ್ದು ಬಿಡುತ್ತೇವೆ. ಕಳೆದ’ ಒಂದು ವರ್ಷದ ಅವಲೋಕನವನ್ನು ಮಾಡಿಕೊಳ್ಳಬೇಕು. ನಾವೆಲ್ಲರೂ ಒಂದು ರಥವನ್ನು ಏರಿದ್ದೇವೆ, ಈ ರಥ ಮುಂದುಮುಂದು ಹೋಗುತ್ತಾ ಇರಬೇಕು. ಮುಂದೆ ಅಂದರೆ, ನಮ್ಮಲ್ಲಿ ಆಳವಾಗಿ ಹೋಗಬೇಕು. ಈ ಜನ್ಮ ನಿಮಗೆ ಮೀಸಲಾದದ್ದು ಆದ್ದರಿಂದ ನಮ್ಮ ಜನ್ಮದಿನಕ್ಕೆ ನಿಮಗೆಲ್ಲ ಶುಭಾಶಯಗಳು.

ಗುರು ಹೇಗಿರಬೇಕು ಅಂದರೆ ತಾನು ದುಃಖವನ್ನು ಉಂಡು ಭಕ್ತರಲ್ಲಿ ನಗುವನ್ನು ಹಂಚಬೇಕು. ಮುಳ್ಳು ಕೊಟ್ಟರೆ ಪ್ರತಿಯಾಗಿ ಹೂವು ಕೊಡುವುದಕ್ಕೆ ಮಠ ಎಂದು ಹೆಸರು. ಸರಿಯಾಗಿ ಭಾವಿಸಲು ಸಾಧ್ಯವಾದರೆ ಮುಳ್ಳಿನಲ್ಲಿಯೂ ಹೂವನ್ನು ಕಾಣಬಹುದು. ನಿಮ್ಮೆಲ್ಲರ ಜೀನದಲ್ಲಿ ಹೂವು ಅರಳಲಿ..ನಿಮ್ಮ ಜೀವನದ ಹೆಜ್ಜೆಗಳು ಹೂವಿನಷ್ಟು ಮೃದುವಾಗಿರಲಿ
~
ಸಂಧ್ಯಾಕಾಲದ ಕಾರ್ಯಕ್ರಮ:
ಶ್ರೀಗಳ ವರ್ಧಂತಿಯ ಪ್ರಯುಕ್ತ ವಿಶೇಷ ದೀಪೋತ್ಸವ.

English Summary:

4th day of Chatra Chaturmasya became the celebration Day as today is the birth day of His holiness Sri Sri. There were special events like AArati samaparne , Suvastu Samarpane and specifically Gayana Samaparne by blind students of JnanaJyoti trust for disabled, touched the heart of everyone gathered.

Shri Karthik Bhat was felicitated by Sri Sri for securing Gold Medal for Aeronautical Engg at VTU.

Bharati Prakashana Launched the “Hitopadesha Stories” written by Shri Lohit Sharma. It is Launched by Mr. Karthik.

Sri Sri expressed that Birthday is a caution call to look back and what we have achieved in last one year. Expectation creates distance in people’s mind and also with God. If you do not expect anything, you will be certainly satisfied with what you get. His holiness blessed the gathering saying let your steps in life be as smooth as flowers and let flower blossoms in your life.

Audio Link

Download : Link

Photos:

Facebook Comments