ಶ್ರೀ ರಾಮಾಶ್ರಮ, ಬೆಂಗಳೂರು 09-08-2015,ಶನಿವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಸರ್ವ ಸೇವೆ
ಸಾಮಾಜಿಕ ಜಾಲತಾಣಿಗರ ಬಳಗ
~
ಭಜನೆ
ಸಾಮೂಹಿಕ ಹನುಮಾನ್ ಚಾಲೀಸಾ ಪಠಣ.
~
ಯಾಗಶಾಲೆ
ಮೇಧಾ ದಕ್ಷಿಣ ಮೂರ್ತಿ ಹವನ : ರಾಮಚಂದ್ರ ಭಟ್, ಉದಯಶಂಕರ್ ಭಟ್, ಸತ್ಯ ಪ್ರಕಾಶ್ ಮರಕಿಣಿ

ಕಲಾಮುಕುಲ:
ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಆಟ.

ಅತಿಥಿಗಳು :
ನಾಗರಾಜ್ ಶೆಟ್ಟಿ ,ಮಾಜಿ ಸಚಿವರು.
ಪ್ರಮೋದ ಹೆಗಡೆ, ಸಂಕಲ್ಪ-ಯಲ್ಲಾಪುರ
~
ಧರ್ಮಸಭೆ:
ಜಗತ್ತಿನಲ್ಲಿ ಎರಡು ಮನಸ್ಸುಗಳು ಒಂದಾಗದೇ ಇದ್ದಾಗ ಆಗುವುದು ಯುದ್ಧ. ಧರ್ಮವನ್ನು ಬಿಟ್ಟ ಯುದ್ಧಕ್ಕೆ ಯಾವ ಅರ್ಥವೂ ಇಲ್ಲ. ಯುದ್ಧ ಯಾರಿಗೂ ಬೇಡ. ಆದರೆ ಅದಕ್ಕೆ ಧರ್ಮ ಸೇರಿದರೆ ಆ ಯುದ್ಧದಷ್ಟು ಪವಿತ್ರ ಯಾವುದೂ ಇಲ್ಲ. ಧರ್ಮದ ಮೇಲೆ ದಾಳಿಯಾದಾಗ ಧರ್ಮ ಯುದ್ಧ ಸಂಭವಿಸುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.
ಭಾನುವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದಲ್ಲಿ ಸಾಮಾಜಿಕ ಜಾಲತಾಣಿಗರಿಂದ ನಡೆದ ಸರ್ವ ಸೇವೆಯ ನಂತರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮಕ್ಕಾಗಿ, ಧರ್ಮಮಾರ್ಗದಲ್ಲಿ, ಧರ್ಮದ ಫಲಕ್ಕಾಗಿ ನಡೆವುದು ಧರ್ಮಯುದ್ಧ. ಇಂತಹ ಯುದ್ಧದಲ್ಲಿ ಎಲ್ಲರೂ ಭಾಗವಹಿಸಬೇಕು. ಅಲ್ಲಿ ತಾಟಸ್ಥ್ಯಕ್ಕೆ ಅವಕಾಶವಿಲ್ಲ. ಧರ್ಮಯುದ್ಧದಲ್ಲಿ ಮಡಿದರೆ ಸ್ವರ್ಗ. ಧರ್ಮಯುದ್ಧದಲ್ಲಿ ಗೆದ್ದರೆ ಭೂಮಿಯೇ ಸ್ವರ್ಗವಾಗುತ್ತದೆ ಎಂದು ನುಡಿದರು.
ಯೋಗಿ ಮತ್ತು ಯೋಧ ಇವರಿಬ್ಬರೂ ಒಂದೆ. ಈ ಇಬ್ಬರಿಗೆ ಮಾತ್ರ ಸೂರ್ಯಮಂಡಲ ಭೇದಿಸಿ, ಮೋಕ್ಷವನ್ನು ತಲುಪುವ ಸಾಮರ್ಥ್ಯವಿದೆ ಎಂದರು.

ಎಸ್‍ಎಸ್‍ಎಲ್‍ಸಿಯಲ್ಲಿ ರ‌್ಯಾಂಕ್ ಪಡೆದ ಸ್ವರೂಪ ಹೆಗಡೆ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು.
ಶ್ರೀಭಾರತೀ ಪ್ರಕಾಶನದ ವತಿಯಿಂದ ಗಜಾನನ ಶರ್ಮಾ ರಚಿಸಿದ ಮಕ್ಕಳ ರಾಜ್ಯವ ಕಟ್ಟಿಕೊಡು ಸಿಡಿ ಹಾಗೂ ಶ್ರೀರಾಘವಾನುಗ್ರಹ ಕೃತಿ ಲೋಕಾರ್ಪಣಗೊಳಿಸಲಾಯಿತು.
ಡಾ.ಸುವರ್ಣಿನೀ ರಾವ್ ಕೊಣಲೆ ಹಾಗೂ ಪ್ರಕಾಶ ಕುಕ್ಕಿಲ ಮಾತನಾಡಿದರು.
ಪ್ರಶಾಂತ ಹೆಗಡೆ ಸಭಾಪೂಜೆ ನೆರವೇರಿಸಿದರೆ, ವಿದ್ವಾನ್ ಜಗದೀಶಶರ್ಮಾ ಪ್ರಸ್ಥಾವಿಸಿದರು.
ಶ್ರೀ ಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಲ್, ಖ್ಯಾತ ವಾಗ್ಮಿ ಪ್ರಮೋದ ಹೆಗಡೆ, ಮಹಾಮಂಡಲದ ಅಧ್ಯಕ್ಷ ಡಾ.ವೈ.ವಿ ಕೃಷ್ಣಮೂರ್ತಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಶ್ರೀಮಠದ ಸಿಇಒ ಕೆ.ಜಿ ಭಟ್, ಕಲ್ಲಬ್ಬೆ ರಾಮಕೃಷ್ಣ ಹೆಗಡೆ, ಪ್ರಸನ್ನ ಮಾವಿನಕುಳಿ, ಶ್ರೀಕಾಂತ ಕಾಳಮಂಜಿ ಉಪಸ್ಥಿತರಿದ್ದರು. ಶ್ರದ್ಧಾ, ವೈಷ್ಣವಿ ಹಾಗೂ ಸಂದೇಶ ತಲಕಾಲಕೊಪ್ಪ ನಿರೂಪಿಸಿದರು.

English Summary:
Facebook Shishyas of Sri Sri Raghaveshwara Bharati Mahaswamiji’s gathered today at Sri Ramashrama to offer Sarva-seva to Sri Swamiji. Compilation of Write-ups from shishyas released today as a book “Raghavanugraha”. Thousands of Facebook’ers gathered to make the function a huge success. Sri T.Madiyal IPS (Rtd.), Dr.Y.V. Krishnamurthy,  Ex minister Sri Nagaraj Shetty, Sri Pramod Hegde and several others were present at the function.

Audio :

Download Link: Link

Photos:

 

Facebook Comments