ಶ್ರೀ ರಾಮಾಶ್ರಮ, ಬೆಂಗಳೂರು 11-08-2015,ಮಂಗಳವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.

ಭಜನೆ:

ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.

ಸರ್ವಸೇವೆ:

ರಮೇಶ ಹೆಗಡೆ, ಕೊರಮಂಗಲ

~

ವಿಷಾದ – ಪ್ರಸಾದಗಳು ಜೀವನದ ಸಂಗಾತಿಗಳು. ಪ್ರಸಾದವೆಂದರೆ ಪ್ರಸನ್ನತೆ. ಪ್ರಸನ್ನತೆ ಮನಸ್ಸು ತಿಳಿಯಾದಾಗ ಉಂಟಾಗುತ್ತದೆ. ವಿಷಾದ ಮನಸ್ಸು ಕಲಕುವುದರಿಂದ ಆಗುತ್ತದೆ. ಮನಸ್ಸು ಅಲೆಯಿಲ್ಲದಂತಾಗಬೇಕು. ಹಾಗಾಗಲು ಮಾನಸಸರೋವರದಂತೆ ಮನಸ್ಸು ಕೂಡ ಕೈಲಾಸದ ಪದತಲದಲ್ಲಿರಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಗೋಕಥೆ – 3’ ಕೃತಿಯ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಪೂಜೆಯ ಮುಖ್ಯ ಉದ್ದೇಶ ಪ್ರಸನ್ನತೆ. ಭಗವಂತನ ಪ್ರಸನ್ನತೆ ಹೂವು ಹಾಗೂ ನೈವೇದ್ಯದಲ್ಲಿ ಹರಿದು ಬರುವುದರಿಂದ ಅದಕ್ಕೆ ಪ್ರಸಾದ ಎಂದು ಕರೆಯುತ್ತಾರೆ. ಆ ಪ್ರಸಾದವನ್ನು ಸೇವಿಸಿದಾಗ ನಮ್ಮಲ್ಲಿ ಪ್ರಸನ್ನತೆ ಬರುತ್ತದೆ. ಅಷ್ಟೆ ಅಲ್ಲದೆ ಪೂಜೆಯಲ್ಲಿ ಬಳಸುವ ಎಲ್ಲ ಸುವಸ್ತುಗಳೂ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ. ಹಾಗಾಗಿ ಪೂಜೆ ನಮಗಾಗಿ ಇರುವುದೇ ಹೊರತು ಭಗವಂತನಿಗಾಗಿ ಅಲ್ಲ ಎಂದು ನುಡಿದರು.

ನಾವು ಏನನ್ನು ಸಮಾಜಕ್ಕೆ ಕೊಡುತ್ತೇವೆಯೋ ಅದೇ ನೂರಾಗಿ ಹಿಂದಿರುಗಿ ಬರುತ್ತದೆ. ನಾವು ಭಗವಂತನಿಗೆ ಹಾಗೂ ಸಮಾಜಕ್ಕೆ ಕೊಡುವುದು ಎಂದರೆ, ನಮಗೆ ನಾವೇ ಕೊಟ್ಟುಕೊಂಡಂತೆ. ಏಕೆಂದರೆ ಅವೆಲ್ಲವೂ ಹಿಂದಿರುಗಿ ಬರುತ್ತದೆ. ಹಾಗಾಗಿ ದಾನ ಮಾಡುವಾಗ ಮತ್ತು ದೇವರಿಗೆ ಸಮರ್ಪಿಸುವಾಗ ಉತ್ಕøಷ್ಟವಾದದ್ದನ್ನೇ ಕೊಡಬೇಕು. ಕೊಟ್ಟದ್ದು ನಮಗೆ ಸೇರುತ್ತದೆ ಹೊರತು ಇಟ್ಟದ್ದು ನಮಗೆ ಸಿಗದು ಎಂದು ಅಭಿಪ್ರಾಯಪಟ್ಟರು.

ಜಾದೂ ಪ್ರದರ್ಶನದಲ್ಲಿ ವಿಶ್ವದಾಖಲೆ ನಿರ್ಮಿಸಿ, ಮಳಿ ಸಹೋದರಿಯರು ಎಂದೇ ಖ್ಯಾತರಾದ ಅಪೂರ್ವಾ ಮಳಿ ಹಾಗೂ ಅಂಜನಾ ಮಳಿ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಗೋಕಥೆ ಪುಸ್ತಕದ ಲೇಖಕಿ ಚಂಪಕಾ ಭಟ್ ಮಾತನಾಡಿದರು.

ಛಾತ್ರಚಾತುರ್ಮಾಸ್ಯ ಸಮಿತಿಯ ಯು.ಎಸ್.ಜಿ ಭಟ್, ಶ್ರೀಮಠದ ಸಿಇಒ ಕೆ.ಜಿ ಭಟ್, ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ, ಸಾಹಿತಿ ಗಜಾನನ ಶರ್ಮಾ, ರಾಜೇಶ ಮಳಿ, ಸವಾರಿ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಶಾನುಬೋಗ ಅರವಿಂದಶರ್ಮಾ, ಗಣಪತಿ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಪೌಷಾ ಭಟ್ ನಿರೂಪಿಸಿದರು.

English Summary:

Whatever we offer to god is must be superior because the main motto of worship is to have goodwill.  Hence worship is basically necessary for us. We will get back the same what we give(offer) for the society and also God. Presenting to God and society is nothing but presenting to ourselves If we do good for the society, that will do good for us. So whenever giving something, always we must give the best out of us

Audio:

Download: Link

Ashirvachana Video: 

Photos:

Facebook Comments