ಶ್ರೀ ರಾಮಾಶ್ರಮ, ಬೆಂಗಳೂರು 12-08-2015, ಬುಧವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.

~

ಭಜನೆ:

ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.

~

ಗಾಯನ:

ಶ್ರೀಮತಿ ಜಯಲಕ್ಷ್ಮಿ

~

ಸರ್ವಸೇವೆ:

ಅಂಬಾಗಿರಿ, ಹರಿಶಿ, ಹಾರ್ಸಿಕಟ್ಟಾ ವಲಯಗಳು~

~

ಧರ್ಮಸಭೆ:

ಕಾಣುವ ಪ್ರಪಂಚ ಅದ್ಭುತ. ಕಾಣದ ಪ್ರಪಂಚ ಪರಮಾದ್ಭುತ. ಈ ಕಾಣದ ಪ್ರಪಂಚ ನಮ್ಮೊಳಗಿದೆ. ಅದು ಮಾತಿಗೆ ಅತೀತ. ಅದರ ಅನುಭೂತಿ ಪಡೆಯಲು, ನಾವದನ್ನು ನಮ್ಮೊಳಗೆ ನೋಡಬೇಕು ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.
ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಹಿತೋಪದೇಶ’ ಕೃತಿಯ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಗವಂತ ಇಂದ್ರಿಯಗಳನ್ನು ಹೊರಗೆ ಸೃಷ್ಟಿಸಿದ್ದಾನೆ. ಹಾಗಾಗಿ ಇವುಗಳಿಂದ ಒಳವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಅನುಭೂತಿ ಪಡೆಯಲು ಈ ಇಂದ್ರಿಯಗಳನ್ನು ಒಳಮುಖಕ್ಕೆ ತಿರುಗಿಸಬೇಕು. ಆಗ ಅನುಭೂತಿಯಾಗುತ್ತದೆ. ಆತ್ಮ ತನ್ನನ್ನು ತಾನು ನೋಡಿಕೊಳ್ಳುವುದೇ ಅನುಭೂತಿ ಎಂದು ನುಡಿದರು.
ಈ ಪರಾನುಭೂತಿಯನ್ನು ಮಾತಿನಲ್ಲಿ ಹೇಳಲಾಗದು. ಅದನ್ನು ಅನುಭವಿಸಿಯೇ ತಿಳಿಯಬೇಕು ಎಂದ ಅವರು, ನಾವು ನೆಮ್ಮದಿಯನ್ನು ಯಾವುದೋ ವಸ್ತುಗಳಲ್ಲಿ ಹುಡುಕುತ್ತಿದ್ದೇವೆ. ಆದರೆ ನಿಜವಾದ ಸುಖ – ನೆಮ್ಮದಿ ನಮ್ಮೊಳಗಿದೆ. ಹೊರಗಿನ ಪ್ರಪಂಚದಲ್ಲಿ ಸುಖ – ದುಃಖ ಮಾತ್ರ ಇವೆ. ಒಳಗಿನ ಪ್ರಪಂಚದಲ್ಲಿ ಆನಂದ ಮಾತ್ರ ಇದೆ ಎಂದರು.
ತಬಲಾ ವಿದ್ವತ್ ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಸಂತೋಷ ಆರ್ ಹೆಗಡೆ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಹಿತೋಪದೇಶ ಪುಸ್ತಕದ ಲೇಖಕ ಲೋಹಿತ ಶರ್ಮಾ, ಛಾತ್ರಚಾತುರ್ಮಾಸ್ಯ ಸಮಿತಿಯ ಯು.ಎಸ್.ಜಿ ಭಟ್, ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ, ಸಾಹಿತಿ ಗಜಾನನ ಶರ್ಮಾ, ಶಿಷ್ಯಭಾವ ಕಾರ್ಯದರ್ಶಿ ಆರ್.ಎಸ್ ಹೆಗಡೆ, ಹರಗಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಅಂಬಾಗಿರಿ ವಲಯದ ಅಧ್ಯಕ್ಷ ವಿ.ಎಂ ಹೆಗಡೆ, ಹಾರ್ಸಿಕಟ್ಟಾ ವಲಯದ ಅಧ್ಯಕ್ಷ ಪಿ.ಎಂ ಭಟ್, ಹರೀಶಿ – ಮಂಗಳೂರು ವಲಯದ ಅಧ್ಯಕ್ಷ ಸತೀಶ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಅರ್ಪಿತಾ ಹೆದ್ಲಿ ನಿರೂಪಿಸಿದರು.

His holiness paramapoojya did asheervachana on the topic ‘Empathy” The visible world is amazing and the invisible world if super amazing. that invisible world is within us and it cannot be described in words, only way is to visualize within us.

God has graced sensory organs for outside visualization, from which we can’t see the inner world. For that to happen, sensory organs has to work inward. Soul seeing itself is called empathy.  It only must be experienced and cannot be described in words.

We search outside for peace of mind. But the reality is peace of mind exist inside us, not outside. Only happiness and sad exist in outside world.

Chatra Puraskara: Santosh Hegde, securing 1st rank for state in Tabla

Lokaarpane: Hitopadesha English version.

Audio :

Video:

Photos:

Facebook Comments