ಹರೇರಾಮ ,

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಆತ್ಮಲಿಂಗದ ಸುತ್ತಲಿನ ಸಾಲಿಗ್ರಾಮ ಪೀಠಕ್ಕೆ ನೂತನವಾಗಿ ನಿರ್ಮಿಸಿದ ರಜತ ಕವಚ ಸಮರ್ಪಿಸಲಾಯಿತು .
ಹನ್ನೆರಡು ಕಿಲೋ ತೂಕದ ಬೆಳ್ಳಿಯಿಂದ ಇದನ್ನು ನಿರ್ಮಿಸಲಾಗಿದೆ .
ವೇ ಶಿತಿಕಂಠ ಹಿರೇ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಹವ್ಯಕ ಮಂಡಲ ಅಧ್ಯಕ್ಷರಾದ ಡಾ ವೈ ವಿ ಕೃಷ್ಣಮೂರ್ತಿ , ಕುಮಟಾ ಮಂಡಲ ಅಧ್ಯಕ್ಷ ಶ್ರೀ ಸುಬ್ರಾಯ ಭಟ್ , ಕುಮಟಾ ಮಂಡಲ ಸೇವಾ ಪ್ರಧಾನ ಶ್ರೀ ತಿಮ್ಮಣ್ಣ ಹೆಗಡೆ , ವೇ . ಸೀತಾರಾಮ ಶಂಕರಲಿಂಗ , ವೇ ಬಾಲಕೃಷ್ಣ ಭಟ್ ಜಂಭೆ ಮತ್ತು ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು .
ವೇ ಕೃಷ್ಣ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು .

ಹರ ಹರ ಮಹಾದೇವ …

Source: SriGokarna official website (Link)

Photos:

Facebook Comments