ಗೀತ – ಪ್ರವಚನ ಮೂಲಕ ಮನಸ್ಸನ್ನು ಶಾಂತ ಸ್ಥಿತಿಗೆ ತಂದು, ನಂತರ ಮನಸ್ಸಿನಲ್ಲಿ ನಮ್ಮ ಭಾವದ ಮೂಲಕ ಪೂಜಿಸುವ, ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿಶಿಷ್ಟ ಕಲ್ಪನೆಯ “ಭಾವ ಪೂಜೆ” ಕಾರ್ಯಕ್ರಮ ದಿನಾಂಕ 15-08-2015 ರಂದು ಸಂಜೆ 7 ಗಂಟೆಗೆ ಸರಿಯಾಗಿ ಗಿರಿನಗರದ ಶ್ರೀರಾಮಶ್ರಮದಲ್ಲಿ ಸಂಪನ್ನವಾಗಲಿದೆ.

ಅಧ್ಯಾತ್ಮಮೃತಸಿಂಚನದ ‘ಭಾವಪೂಜೆ’ ಎನ್ನುವ ಅತಿವಿಶಿಷ್ಟ ಕಾರ್ಯಕ್ರಮ ಇದಾಗಿದ್ದು, ಕಲಾವಿದರ ಮಧುರ ಕಂಠದಲ್ಲಿ ಗಾಯನ, ಶ್ರೀಗಳ ವ್ಯಾಖ್ಯಾನದೊಂದಿಗೆ ಭಾವಪೂಜೆ ಆರಂಭವಾಗುತ್ತದೆ. ಈ ಪೂಜೆಗೆ ಆರತಿ, ಗಂಟೆ, ಅಕ್ಷತೆ, ಪುಷ್ಪಾದಿ ಉಪಕರಣಗಳು ಬೇಡವೇ ಬೇಡ. ಇದು ಅಂತಃಕರಣದಿಂದಲೇ, ಭಾವದಿಂದಲೇ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ. ಹಲವು ಸಂದರ್ಭಗಳಲ್ಲಿ ಗಂಟೆ, ಆರತಿ, ಅಕ್ಷತೆ ಮೊದಲಾದ ಉಪಕರಣಗಳೊಂದಿಗೆ ನಡೆಸುವ ಪೂಜೆ ಯಾಂತ್ರಿಕ ಕ್ರಿಯೆಯಾಗಿ ಭಾವ ಕಳೆದುಕೊಳ್ಳುವುದು ಇದೆ. ಅಂಥ ಪೂಜೆ ಭಾವಪೂಜೆ ಆಗಲಾರದು. ನಿಜವಾದ ಭಾವಪೂಜೆಯಲ್ಲಿ ಯಾರು ಬೇಕಾದರೂ ದೇವರನ್ನು ಭಾವ ತುಂಬಿ ಪೂಜಿಸಬಹುದಾಗಿದ್ದು, ಮಂದವಾದ ಬೆಳಕಿನಲ್ಲಿ, ತದೇಕಚಿತ್ತದಿಂದ ಭಾವದ ಮೂಲಕ ದೇವರನ್ನು ಅರ್ಚಿಸಲಾಗುತ್ತದೆ.

Bhaava Pooje

Facebook Comments