ಶ್ರೀ ರಾಮಾಶ್ರಮ, ಬೆಂಗಳೂರು 13-08-2015, ಗುರುವಾರ

~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.

~

ಭಜನೆ:

ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.

~

ಸರ್ವಸೇವೆ:

ಬಿದರಕಾನ್, ಚಪ್ಪರಮನೆ, ದೊಡ್ಮನೆ ವಲಯಗಳು

ಬದುಕಿನಲ್ಲಿ ಪ್ರಶ್ನೆಗಳು ಏಳಬೇಕು. ಪ್ರಶ್ನೆ ಹುಟ್ಟದಿದ್ದರೆ ಬೆಳವಣಿಗೆ ಅಸಾಧ್ಯ ಶಿಷ್ಯನೆಂದರೆ ಪ್ರಶ್ನೆ. ಗುರುವೆಂದರೆ ಉತ್ತರ. ಈ ಪ್ರಶ್ನೆ – ಉತ್ತರಗಳೇ ಗುರು – ಶಿಷ್ಯರ ಸಂಬಂಧದ ಸಾರ. ನಮ್ಮ ಇತಿಹಾಸ – ಪುರಾಣ – ಉಪನಿಷತ್ ಗಳು ಪ್ರಶ್ನೆ – ಉತ್ತರಗಳ ಮೇಲೆ ನಿಂತಿದೆ ಎಂದು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದ ವತಿಯಿಂದ ಪ್ರಕಟವಾದ ‘ಪೂರ್ಣ’ ಆಟಿಕೆಯ ಲೋಕಾರ್ಪಣ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸರಿಯಾದ ಪ್ರಶ್ನೆ ಹುಟ್ಟಿದಾಗ ನಿಜವಾದ ಬದುಕು ಆರಂಭವಾಗುತ್ತದೆ. ಎಲ್ಲರಲ್ಲಿ ಅವನು ಯಾಕೆ ಹೀಗೆ? ಅದು ಯಾಕೆ ಹಾಗೆ? ಎನ್ನುವ ಪ್ರಶ್ನೆಗಳು ಮಾತ್ರ ಹುಟ್ಟುತ್ತವೆ. ನಾನೇಕೆ ಹೀಗೆ? ಎನ್ನುವ ಪ್ರಶ್ನೆ ಹುಟ್ಟುವುದು ಕಡಿಮೆ. ನಾವು ಎಲ್ಲರ, ಎಲ್ಲದg ಪರಿಚಯ ಮಾಡಿಕೊಳ್ಳುತ್ತೇವೆ. ಆದರೆ ನಮ್ಮ ಪರಿಚಯ ನಾವು ಮಾಡಿಕೊಳ್ಳುವುದಿಲ್ಲ. ಇದೆ ನಮ್ಮ ಬದುಕಿನ ಸಮಸ್ಯೆ ಎಂದು ನುಡಿದರು.

ನಾನೇಕೆ ಹೀಗೆ? ಎಂದರೆ ನಾವು ಮಾಯೆಯ ಕೈಯಲ್ಲಿದ್ದೇವೆ. ನಾವು ಈಶ್ವರನ ಕೈಗೆ ಹೋದರೆ ನಾವು ಹೀಗಿರುವುದಿಲ್ಲ. ಮಾಯೆ ನಾನೇಕೆ ಹೀಗೆ? ಎಂಬ ಪ್ರಶ್ನೆಯನ್ನು ಹುಟ್ಟಿಸದಂತೆ ಮಾಡುತ್ತದೆ. ನಾವು ಏನು ಕಾಣುತ್ತೇವೋ, ಅದೇ ಚಂದ ಎಂದು ನಂಬಿಸುತ್ತದೆ. ನಾವು ಯಾರೆಂದು ಅರಿತುಕೊಳ್ಳಲು ಈ ಮಾಯೆಯನ್ನು ಮೀರಬೇಕು ಎಂದರು.

ಸಿದ್ಧಾಪುರ ಮಂಡಲದ ಬಿದರಕಾನ, ಚಪ್ಪರಮನೆ, ದೊಡ್ಮನೆ ವಲಯದವರಿಂದ ಸರ್ವಸೇವೆ ನಡೆಯಿತು. ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ ಆಟಿಕೆಯನ್ನು ಪರಿಚಯಿಸಿದರು. ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೃಥ್ವೀ ಎನ್.ಎಸ್ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಛಾತ್ರಚಾತುರ್ಮಾಸ್ಯ ಸಮಿತಿಯ ಯು.ಎಸ್.ಜಿ ಭಟ್, ಸಾಹಿತಿ ಗಜಾನನ ಶರ್ಮಾ, ಶಿಷ್ಯಭಾವ ಕಾರ್ಯದರ್ಶಿ ಆರ್.ಎಸ್ ಹೆಗಡೆ, ಹರಗಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಬಿದರಕಾನ ವಲಯದ ಅಧ್ಯಕ್ಷ ಪರಮೇಶ್ವರ ಸುಬ್ರಾಯ ಹೆಗಡೆ, ಚಪ್ಪರಮನೆ ವಲಯದ ಅಧ್ಯಕ್ಷ ಗೋಪಾಲ ಗಣಪತಿ ಹೆಗಡೆ, ದೊಡ್ಮನೆ ವಲಯದ ಅಧ್ಯಕ್ಷ ಎಂ.ಆರ್ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಮೇಧಾ ಭಟ್ ನಿರೂಪಿಸಿದರು.

English Summary:

Download:  Link

Video:

Photos:

Facebook Comments